ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್ (ರಿ), ಇವರಿಂದ ರಂಗಗೀತೆಗಳ ಕಾರ್ಯಕ್ರಮ ಹಾಗೂ ರಾಮಾಯಣ ಬಯಲಾಟ ಪ್ರದರ್ಶನ
Sujathamma Bayalata Kala Trust (R), a program of stage songs and a Ramayana Bayalata performance
ಲೋಕದರ್ಶನ ವರದಿ
ಬಳ್ಳಾರಿ 15: ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್ (ರಿ), ಬಳ್ಳಾರಿ ಇವರಿಂದ ಹೈಸ್ಕೂಲ್ ಮೈದಾನ ರಾಮುಲಮ್ಮ ಗುಡಿ ಹತ್ತಿರ, ಕರ್ಚೇಡು ಗ್ರಾಮದಲ್ಲಿ, ರಂಗಗೀತೆಗಳ ಕಾರ್ಯಕ್ರಮ ಹಾಗೂ ರಾಮಾಯಣ ಬಯಲಾಟ ಪ್ರದರ್ಶನ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ಚೇಡು ಗ್ರಾಮದ ಹಾಗೂ ಸುತ್ತಮುತ್ತ ಹಳ್ಳಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರುಗಳು ಶ್ರೀ ಶ್ರೀ ಶ್ರೀ ಶಿವಶರಣ ಅಶ್ವತ್ಥಾಮ ತಾತನವರ ಆಶಿರ್ವಾದದೊಂದಿಗೆ ನಡೆಯಿತು. ಈ ಕಾರ್ಯಕ್ರಮದ ಪ್ರಾರ್ಥನೆ ಗೀತೆಯನ್ನು ಹಾರೋ್ಮನಿಯಂ ವಾದಕರಾದ ಶ್ರೀ ವೈ. ರಂಗಾರೆಡ್ಡಿ, ಕರ್ನಾಟಕ ಬಯಲಾಟ ಅಕಾಡೆಮಿ ಪುರಸ್ಕೃತರು ಇವರಿಂದ ಪ್ರಾರಂಭವಾಯಿತು. ನಂತರದಲ್ಲಿ ಶ್ರೀಮತಿ ಸುಜಾತಮ್ಮ, ರಾಜ್ಯ ಪ್ರಶಸ್ತಿ ಪುರಸ್ಕೃತರು, ಶ್ರೀಮತಿ ಎರೆ್ರಮ್ಮ ರಂಗಭೂಮಿ ಕಲಾವಿದೆ ಹಾಗೂ ಶ್ರೀ ಬಿ.ಲಕ್ಷ್ಮೀನಾರಾಯಣ ಇವರಿಂದ ನಡೆಯಿತು. ಶ್ರೀ ನಾಗರಾಜಗೌಡ ಕರ್ಚೇಡು ಇವರ ತಂಡದಿಂದ ಶ್ರೀ ರಾಮಯಣ ಬಯಲಾಟ ಪ್ರದರ್ಶನ ಬಹಳ ಅದ್ದೂರಿಯಾಗಿ ನಡೆಯಿತು.
ಶ್ರೀ ವೈ.ರಂಗಾರೆಡ್ಡಿ, ಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ಸುಜಾತಮ್ಮ ಬಯಲಾಟ ಟ್ರಸ್ಟ್ವತಿಯಿಂದ ಗ್ರಾಮದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಗ್ರಾ.ಪಂ. ಸದಸ್ಯರಿಗೆ ಹಾಗೂ ಕಲಾವಿದರಿಗೆ ಸನ್ಮಾನಿಸಲಾಯಿತು ಇವರಿಂದ ಸನ್ಮಾನಿಸಲಾಯಿತು.
ಬಯಲಾಟ ಪಾತ್ರಧಾರಿಗಳು, ರಾವಣಾಸುರ, ರಾಜ ಕರ್ಚೇಡು, ರಾಮ ನಾಗೇಶ್ ವಣೇನೂರು, ಲಕ್ಷ್ಮಣ ಬಸವರಾಜ, ಬೆಣಕಲ್ಲು, ಅಂಜಿನೇಯ್ಯ ಮಲ್ಲಿಕಾರ್ಜುನ ಗೂಳ್ಯಂ, ಮಾರೀಚ ಸಂಗಾಲ್ ಸೀನಪ್ಪ, ಸೀತಾದೇವಿ ಕೋಟೆ ಅಂಜಿನಮ್ಮ ಕೂಡ್ಲಿಗಿ, ಮಾಯಾಸ್ತ್ರಿ ನಾಗಮ್ಮ ವೀರಾಪುರ, ಹಾರೋ್ಮನಿಯಂ ವಾದಕರು ವೈ.ರಂಗಾರೆಡ್ಡಿ, ಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು, ಕೆ.ವೀರಾಪುರ, ತಬಲ ವಾದಕರು ವೀರೇಶ್ ಬಳ್ಳಾರಿ, ಬಯಲಾಟ ಸಾಮಾನು ಶ್ರೀ ಬಸವೇಶ್ವರ ರಂಗಸಜ್ಜಿಕೆ, ಬೂದೂಗಪ್ಪ, ಮೇಕಪ್ ಆರ್ಟಿಸ್ಟ್ ಗಂಗಾಧರ, ಬೂದೂಗುಪ್ಪ, ಹಿಮ್ಮೇಳ ್ಘ ಮುಮ್ಮೇಳ ವಾದಕರು : ಬಾದಮಿ ರಾಜಪ್ಪ ಕರ್ಚೇಡು, ಪಿ.ಶಾಗಪ್ಪ ಕರ್ಚೇಡು, ಗಾದಿಲಿಂಗಪ್ಪ ಹಂದ್ಯಾಳ್. ಮುಂತಾದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಎಂ.ಮಲ್ಲಿಕಾರ್ಜುನಸ್ವಾಮಿ, ಕೆ.ಕೆ.ಹಾಳ್ ಇವರು ಸ್ವಾಗತಿಸಿದರು. ಈ ಕಾರ್ಯಕ್ರಮವನ್ನು ಸುಜಾತಮ್ಮ ಬಯಲಾಟ ಟ್ರಸ್ಟ್, ಬಳ್ಳಾರಿ ಕಾರ್ಯದರ್ಶಿ ಶ್ರೀ ಬಿ.ಲಕ್ಷ್ಮೀನಾರಾಯಣ ಇವರು ವಂದನಾರೆ್ಣ ಮಾಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 