ಆತ್ಮಹತ್ಯೆ ಸಮಸ್ಯೆಗಳಿಗೆ ಪರಿಹಾರವಲ್ಲ: ಸಾಹಿತಿ ಅರುಣಾ

ಲೋಕದರ್ಶನ ವರದಿ

ಗಂಗಾವತಿ 11: ಆಧುನಿಕ ಜೀವನ ಶೈಲಿ, ವ್ಯವಹಾರ, ಜೀವನ ಜಂಜಾಟದ ಒತ್ತಡಕ್ಕೆ ಸಿಲುಕಿರುವ ವ್ಯಕ್ತಿ ಸಮಸ್ಯೆಗಳಿಂದ ಹೊರಬರಲಾಗದೇ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾನೆ. ಸಮಸ್ಯೆಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳಬೇಕಿದೆ. ಆತ್ಮಹತ್ಯೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಅಲ್ಲ. ಕಷ್ಟಗಳನ್ನು ಎದುರಿಸದೇ ಹೇಡಿಗಳಾದವರು ಇಂತಹ ಪ್ರಯತ್ನ ಮಾಡುತ್ತಾರೆ. ಆದ್ದರಿಂದ ಎಂತಹ ಸಂದರ್ಭದಲ್ಲಿಯಾದರೂ ಎದೆಗುಂದದೆ ಸಮಸ್ಯೆಗಳನ್ನು ಮನೋಧೈರ್ಯ ಬೆಳಸಿಕೊಳ್ಳಬೇಕೆಂದು ಕೊಪ್ಪಳದ ಸಾಹಿತಿ ಅರುಣಾ ನರೇಂದ್ರ ಅವರು ಹೇಳಿದರು.

ಸ್ಥಳೀಯ ಜಯನಗರದ ಮಾನವತಾವಾದಿ ಕನಕದಾಸ ಪ್ರತಿಷ್ಠಾನ ಕಾಯರ್ಾಲಯ ಮುಂಭಾಗದಲ್ಲಿ ಹಿಮಾಲಯ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ ಹಾಗೂ ಕನರ್ಾಟಕ ರಾಜ್ಯ ಅಹಲ್ಯಬಾಯಿ ಹೋಳ್ಕರ್ ಮಹಿಳಾ ಸಾಂಸ್ಕೃತಿಕ ಪರಿಷತ್ತು ವತಿಯಿಂದ ಹಮ್ಮಿಕೊಳ್ಳಲಾಗಿದ್ದ "ವಿಶ್ವ ಆತ್ಮಹತ್ಯೆ ದಿನಾಚರಣೆ" ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದರು.

ಬಡತನ, ನಿರುದ್ಯೋಗ, ಕೌಟುಂಬಿಕ ಕಲಹ, ಸಾಮಾಜಿಕ ಬಹಿಷ್ಕಾರ, ಆಪ್ತರ ಸಾವು, ಮಾನಸಿಕ ಬಾಧೆ, ಮೌಢ್ಯತೆ, ಮಾದಕ ಪದಾರ್ಥಗಳ ಬಳಕೆಯಿಂದ ಆತ್ಮಹತ್ಯೆಗಳಾಗುತ್ತಿರುವುದನ್ನು ನಾವು ಪ್ರತಿನಿತ್ಯ ನೋಡುತ್ತಲಿದೇವೆ. ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದಿಂದಾಗಿ ಆಥರ್ಿಕ ಸಂಕಷ್ಟ ಒಂದೆಡೆಯಾದರೆ, ಬಿತ್ತಿದ ಬೆಳೆದೆ ಕೈಗೆ ಬರದೇ ಸಾಲದ ಕೂಪಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ರೈತರನ್ನು ಕಂಡಿದ್ದೇವೆ. ಅಲ್ಲದೇ ವಿದ್ಯಾಥರ್ಿಗಳು ಅನುತ್ತೀರ್ಣರಾದಾಗ, ವ್ಯಾಪಾರಸ್ಥರು ನಷ್ಟ ಅನುಭವಿಸಿದಾಗ, ಕೌಟುಂಬಿಕ ಕಲಹಗಳಾದಾಗ ಆತ್ಮಹತ್ಯೆ ನಡೆದಿವೆ. ಈ ಎಲ್ಲಾ ಸಮಸ್ಯೆಗಳಿಗೆ ಉತ್ತರ ಹುಡುಕದೇ, ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸದಿರುವುದೇ ಇಂತಹ ಘಟನೆಗಳು ನಡೆಯುತ್ತಿವೆ. ಒಬ್ಬನ ಆತ್ಮಹತ್ಯೆಯಿಂದ ಒಂದು ಕುಟುಂಬದ ಬದುಕು ಅಧೋಗತಿಗೆ ಬರುತ್ತದೆ. ತಮ್ಮ ಸಾವನ್ನು ತಾವೇ ತಂದುಕೊಳ್ಳುವುದರಿಂದ ಆ ವ್ಯಕ್ತಿಯ ಅವಲಂಬಿತರಿಗೆ ಸಾಕಷ್ಟು ದುಃಖ, ಸಂಕಟಗಳು ಎದುರಾಗುತ್ತವೆ. ಆದರಿಂದ ಸಮಸ್ಯೆಗಳಿಗೆ ಅಂಜಿಕೊಳ್ಳದೇ ಧೈರ್ಯಶಾಲಿಗಳಾಗಬೇಕು. ಪರಿಹಾರ ಹುಡುಕಲು ಪ್ರಯತ್ನಿಸಬೇಕು. ಯಾವುದೇ ಧರ್ಮವಾಗಲಿ, ಮತವಾಗಲಿ ಆತ್ಮಹತ್ಯೆಯನ್ನು ಮಹಾಪಾಪವೆಂದು ಹೇಳುತ್ತವೆ. ಬದುಕು ಭಗವಂತನಿತ್ತ  ಸುಂದರ ಬಳುವಳಿಯಾಗಿದ್ದು, ಅದನ್ನು ಹಾಳು ಮಾಡಿಕೊಳ್ಳದೇ ಚಂದಾಗಿ ಬದುಕಬೇಕು ಎಂದರು.

ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ಕೊಪ್ಪಳದ ಹಿರಿಯ ಸಾಹಿತಿ, ಪ್ರಗತಿಪರ ಚಿಂತಕ ವಿಠ್ಠಪ್ಪ ಗೋರಂಟ್ಲಿ ಮಾತನಾಡಿ, ಸಮಸ್ಯೆಗಳು ಪ್ರತಿಯೊಬ್ಬರ ಜೀವನದಲ್ಲಿ ಬರುತ್ತವೆ. ಅವುಗಳನ್ನು ಎದುರಿಸಿದಾಗ ಮಾತ್ರ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಆತ್ಮಹತ್ಯೆಯಿಂದ ಇನ್ನಷ್ಟು ಸಮಸ್ಯೆಗಳು ಉದ್ಭವಿಸುತ್ತವೆಯೇ ಹೊರತು ಎಂದಿಗೂ ಪರಿಹಾರ ಸಿಗುವುದಿಲ್ಲ. ಈ ನಿಟ್ಟಿನಲ್ಲಿ ಮಾನವತಾವಾದಿ ಕನಕದಾಸ ಪ್ರತಿಷ್ಠಾನ, ಹಿಮಾಲಯ ಕುರಿ ಮತು ಉಣ್ಣೆ ಉತ್ಪಾದಕರ ಸಹಕಾರ ಸಂಘ, ಅಹಲ್ಯಬಾಯಿ ಹೋಳ್ಕರ್ ಮಹಿಳಾ ಸಾಂಸ್ಕೃತಿಕ ಪರಿಷತ್ತು ಜನಜಾಗೃತಿಗಾಗಿ ಹಮ್ಮಿಕೊಂಡಿರುವ "ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ" ಶ್ಲಾಘನೀಯ ಕಾರ್ಯಕ್ರಮವಾಗಿದೆ ಎಂದರು.

ಬಳಿಕ ಸುದ್ದಿಚಿಂತನ ಪತ್ರಿಕೆ ಸಂಪಾದಕ ಸಿ.ಹೆಚ್. ನಾರಿನಾಳ ಮಾತನಾಡಿ, ಆತ್ಮಹತ್ಯೆಯೆಂಬುದು ಮೌಢ್ಯತೆಯನ್ನು ಆವರಿಸಿಕೊಂಡಿರುವ ಮನೋವ್ಯಾದಿಯಾಗಿದೆ. ಪ್ರತಿಯೊಬ್ಬರೂ ವೈಚಾರಿಕ ಬುದ್ಧಿ, ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರಲ್ಲದೇ ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚೆಚ್ಚು ನಡೆಬೇಕಿದೆ. ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ ಎಂದರು.ನಂತರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಟಿ. ಈರಪ್ಪ, ಹಿ.ಕು.ಉ.ಸ.ಸಂಘದ ಅಧ್ಯಕ್ಷ ಭೀಮನಗೌಡ ಪಾಟೀಲ್, ಕನರ್ಾಟಕ ರಾಜ್ಯ ಅಹಲ್ಯಬಾಯಿ ಹೋಳ್ಕರ್ ಮಹಿಳಾ ಸಾಂಸ್ಕೃತಿಕ ಪರಿಷತ್ತಿನ ಅನ್ನಪೂರ್ಣ ಗೋಸಬಾಳ, ಜಯಲಕ್ಷ್ಮೀಯವರು ಮಾತನಾಡಿದರು.

ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಹಿಮಾಲಯ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಸಿಇಓ ಕೆ.ಬಿ.ಜೂಡಿ, ಕರ್ನಾಟಕ ರಾಜ್ಯ ಅಹಲ್ಯಬಾಯಿ ಹೋಳ್ಕರ್ ಮಹಿಳಾ ಸಾಂಸ್ಕೃತಿಕ ಪರಿಷತ್ತಿನ ಜಿಲ್ಲಾಧ್ಯಕ್ಷೆ ಸರಸ್ವತಿ ಜೂಡಿ, ಗಂಗಾವತಿ ತಾಲೂಕಾಧ್ಯಕ್ಷೆ ಜ್ಯೋತಿ ಕೆ.ಎಸ್., ಯಲಬುರ್ಗಾ  ತಾಲೂಕಾಧ್ಯಕ್ಷೆ ಸಾವಿತ್ರಿ, ಸುಜಾತ ಎನ್, ಶಿವಲಿಂಗಮ್ಮ, ಹೊನ್ನ್ಮ, ರಶ್ಮಿ ಗುರಿಕಾರ ಸೇರಿದಂತೆ ಇನ್ನಿತರರಿದ್ದರು.