ಭಾರತಕ್ಕೆ ಹಸ್ತಾಂತರಿಸಿದರೆ ಆತ್ಮಹತ್ಯೆ : ನೀರವ್ ಮೋದಿ ಬೆದರಿಕೆ

ಲಂಡನ್, ನ 7:      ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಕೋಟ್ಯಂತರ ರೂ  ಪಂಗನಾಮ  ಪ್ರಕರಣದಲ್ಲಿ ಲಂಡನ್ ನ ಜೈಲಿನಲ್ಲಿರುವ ವಜ್ರೋದ್ಯಮಿ ನೀರವ್ ಮೋದಿ ಭಾರತಕ್ಕೆ ಹಸ್ತಾಂತರಿಸಿದ್ದೇ ಆದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ್ದಾರೆ.   

ಇಂಗ್ಲೆಂಡ್ನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರಾದ ಅವರು, ತಮಗೆ ಜೈಲಿನಲ್ಲಿ ಮೂರು ಬಾರಿ ಹೊಡೆಯಲಾಗಿದೆ ಹಾಗೂ ತಮ್ಮನ್ನು ಭಾರತಕ್ಕೆ ಹಸ್ತಾಂತರಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ, ಭಾರತದಲ್ಲಿ ನ್ಯಾಯಯುತ ವಿಚಾರಣೆ ನಡೆಯುವ ವಿಶ್ವಾಸ ತಮಗಿಲ್ಲ ಎಂದಿದ್ದಾರೆ. ಆದರೂ ನ್ಯಾಯಾಲಯ ಅವರಿಗೆ ಜಾಮೀನು ನೀಡಲು ನಿರಾಕರಿಸಿದೆ. 

  ನೀರವ್ ಮೋದಿಯ ಐದನೇ ಜಾಮೀನು ಅರ್ಜಿಯನ್ನು ಬುಧವಾರ ಅವರ ವಕೀಲ ಹುಗೋ ಕೀತ್ ಕ್ಯು ಸಿ ಸಲ್ಲಿಸಿದರು. ಅವರ ಪರ ವಾದ ಮಂಡಿಸಿದ ವಕೀಲ ತಮ್ಮ ಕಕ್ಷಿದಾರರಿಗೆ ಕಾರಾಗೃಹದಲ್ಲಿ ಎರಡು ಬಾರಿ ಹಾಗೂ ಕಳೆದ ಮಂಗಳವಾರ ಹೊಡೆಯಲಾಗಿದೆ ಎಂದರು.   

ಅಲ್ಲದೇ ಹಲ್ಲೆಗೆ ಜೈಲಿನ ಅಧಿಕಾರಿಗಳು ಪ್ರತಿಕ್ರಯಿಸಲಿಲ್ಲ ಮತ್ತು ನೀರವ್ ಮೋದಿ ವಕೀಲರನ್ನು ಭೇಟಿಯಾಗುವ ಅವಕಾಶವನ್ನೂ ನಿರಾಕರಿಸಲಾಯಿತು ಎಂದು ಅವರ ವಕೀಲರು ಆರೋಪಿಸಿದ್ದಾರೆ.