ಬಾಗಲಕೋಟೆ: ಸಕ್ಕರೆ ಕಾಖರ್ಾನೆ ಮಾಲಿಕರು ಪ್ರತಿ ಕ್ವಿಂಟಲ್ಗೆ ಘೋಷಿಸಿದ ಹೆಚ್ಚುವರಿ ಕಬ್ಬು ಬಾಕಿ ಪಾವತಿ ಕುರಿತು ಕಾಖರ್ಾನೆಯ ಮಾಲಿಕರಿಗೆ ನಿದರ್ೇಶನ ನೀಡಲಾಗುವುದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಕಬ್ಬು ಬೆಳೆಗಾರರ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು ಸಕ್ಕರೆ ಕಾಖರ್ಾನೆ ಮಾಲಿಕರು ಕಬ್ಬು ಬೆಳೆಗಾರರಿಗೆ ನೀಡಬೇಕಾದ ಬಾಕಿ ಪಾವತಿ ಕುರಿತಂತೆ ಕಳೆದ ನ.8, 14 ಹಾಗೂ 16 ರಂದು ಜರುಗಿದ ಸಭೆಯಲ್ಲಿ ತಿಮರ್ಾನಿಸಿದಂತೆ ಕಾಖರ್ಾನೆ ಪ್ರಾರಂಭಿಸುವ ಪೂರ್ವದಲ್ಲಿ ಕಳೆದ 2017-18ನೇ ಸಾಲಿನಲ್ಲಿ ಪ್ರತಿ ಕ್ವಿಂಟಲ್ಗೆ ಘೋಷಿಸಿದ ಹೆಚ್ಚುವರಿ ಬಾಕಿ ಹಣದಲ್ಲಿ ಶೇ.50 ರಷ್ಟು ಪಾವತಿಸಬೇಕು. ಕಾಖರ್ಾನೆ ಪ್ರಾರಂಭಿಸಿದ ನಂತರ 15 ದಿನದೊಳಗಾಗಿ ಉಳಿದ ಶೇ.50 ಬಾಕಿ ಹಣವನ್ನು ಪಾವತಿಸುವ ಕುರಿತು ತೀಮರ್ಾನಿಸಲಾಗಿತ್ತು. ಇದಕ್ಕೆ ಕಾಖರ್ಾನೆಯ ಮಾಲಿಕರು ಹಾಗೂ ರೈತರು ಒಪ್ಪಿಗೆ ನೀಡಿದ್ದರು ಎಂದರು.ಈ ಹಿನ್ನಲೆಯಲ್ಲಿ ವಿವಿಧ ಕಾಖರ್ಾನೆಯವರು ಪ್ರತಿ ಕ್ವಿಂಟಲ್ಗೆ ಘೋಷಿಸಿರುವ ಹೆಚ್ಚುವರಿ ಬಾಕಿ ಒಟ್ಟು 130 ಕೋಟಿಗಳಲ್ಲಿ 79 ಕೋಟಿ ರೂ. ಪಾವತಿಸಿದ್ದಾರೆ. ಬಾಕಿ ಉಳಿದ ಹಣವನ್ನು ಕಾಖರ್ಾನೆ ಪ್ರಾರಂಭಿಸಿ 15 ದಿನಗಳಾದರೂ ಬಾಕಿ ಹಣವನ್ನು ಪಾವತಿಸಿರುವದಿಲ್ಲವೆಂದು ಕಬ್ಬು ಬೆಳೆಗಾರರು ತಿಳಿಸಿದರು. ಪ್ರಸಕ್ತ ಸಾಲಿಗೆ ಸಕ್ಕರೆ ಕಾಖರ್ಾನೆಗಳಿಗೆ ಕಬ್ಬು ಪೂರೈಸಲಾಗಿದ್ದು, ಎಫ್ಆರ್ಪಿ ಪ್ರಕಾರ ಕಬ್ಬು ಪೂರೈಸಿದ 14 ದಿನಗಳೊಳಗಾಗಿ ಪಾವತಿ ಮಾಡಬೇಕುಜಗಲಾಸರ ತಿಳಿಸಿದರು. ತೇರದಾಳದ ಸಾವರಿನ್ ಸುಗರ್ಸ್ ಪ್ಯಾಕ್ಟರಿಯ ಹಜಾರು ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು. ಸಭೆಯಲ್ಲಿ ಆಹಾರ ಇಲಾಖೆಯ ಉಪನಿದರ್ೇಶಕ ಶ್ರೀಶೈಲ ಕಂಕಣವಾಡಿ, ಕಬ್ಬು ಬೆಳೆಗಾರರಾದ ರೈತ ಮುಖಂಡರಾದ ವಿಶ್ವನಾಥ ಉದಗಟ್ಟಿ, ವಿಠಲ ತುಮ್ಮರಮಟ್ಟಿ, ದುಂಡಪ್ಪ ಲಿಂಗರಡ್ಡಿ, ಸುಭಾಷ ಶಿರಬೂರ, ಗಂಗಾಧರ ಮೇಟಿ ಸೇರಿದಂತೆ ಇತರರು ಇದ್ದರು.