ಕಬ್ಬಿನ ಬೆಳೆಗೆ ಬೆಂಕಿ..! ಸುಮಾರು 200 ಎಕರೆ ಬೆಳೆದ ಕಬ್ಬು ಅಗ್ನಿಗಾಹುತಿ..! ಕೋಟ್ಯಾಂತರ ರೂಪಾಯಿ ಹಾನಿ..!!

ಕಬ್ಬಿನ ಬೆಳೆಗೆ ಆಕಸ್ಮಿಕ ಬೆಂಕಿ

ಕಾಗವಾಡ 25: ಪಟ್ಟಣದ ಶಿರಗುಪ್ಪಿ ರಸ್ತೆಗೆ ಹೊಂದಿಕೊಂಡಿರುವ ಬ್ರಹ್ಮಾ ನೀರಾವರಿ ಸಂಘದ ಹತ್ತಿರವಿರುವ ಅನೇಕ ರೈತರ ಸುಮಾರು 150 ರಿಂದ 200 ಎಕರೆ ಕಬ್ಬಿನ ಬೆಳೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ, ಬೆಳೆದು ನಿಂತ ಕಬ್ಬು ಅಗ್ನಿಗಾಹುತಿಯಾಗಿ, ಕೊಟ್ಯಾಂತರ ರೂಪಾಯಿ ಹಾನಿಯಾಗಿರುವ ಘಟನೆ ಸಂಭವಿಸಿದೆ. 

ಸೋಮವಾರ ಬೆಳಿಗ್ಗೆ ಸುಮಾರು 10 ಗಂಟೆಗೆ ಹೊತ್ತಿಕೊಂಡ ಬೆಂಕಿ ಮಧ್ಯಾಹ್ನ ವರೆಗೂ ನಿಯಂತ್ರಣಕ್ಕೆ ಬಾರದಿರುವದರಿಂದ ಬೆಂಕಿ ನಂದಿಸಲು ರೈತರು ಹಾಗೂ ಅಗ್ನಿ ಶಾಮಕ ಸಿಬ್ಬಂದಿಗಳು ಹರಸಾಹಸ ಪಟ್ಟರು. ರಾಯಬಾಗ ಮತ್ತು ಉಗಾರ ಶುಗರ್ಸನ ಎರಡು ಅಗ್ನಿಶಾಮಕ ವಾಹನ ಹಾಗೂ ಮಹಾರಾಷ್ಟ್ರದ ದತ್ತ ಶುಗರ್ಸ ಕಾರ್ಖಾನೆ ಅಗ್ನಿಶಾಮಕ ವಾಹನಗಳು ಮತ್ತು ಸಿಬ್ಬಂದಿಗಳು ಬೆಂಕಿ ನಂದಿಸುವ ಕೆಲಸ ಮಾಡಿದರು.  

ಈ ವೇಳೇ ರೈತ ಮುಖಂಡ ಮಹಾದೇವ ಉದಗಾಂವೆ ಮಾತನಾಡಿ, ಹೆಸ್ಮಾಂ ಇಲಾಖೆಯ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದ್ದು, ಅವರಿಗೆ ಹಲವು ಬಾರಿ ಮನವಿ ಮಾಡಿಕೊಂಡರೂ ನಮ್ಮ ಮನವಿಗೆ ಸ್ಪಂದಿಸುವ ಕೆಲಸ ಅವರು ಮಾಡಲಿಲ್ಲಾ. ಕಾರಣ ಇಂದು ಈ ಪರಿಸ್ಥಿತಿ ಬಂದಿದೆ. ಕೊಟ್ಯಾಂತರ ರೂ. ಗಳ ಬೆಳೆ ಕಣ್ಣ ಮುಂದೆ ಸುಟ್ಟು ಹೋಗುತ್ತಿದೆ ಎಂದು ಆರೋಪಿಸಿದರು. ಕೂಡಲೇ ಸರ್ಕಾರ ನಮ್ಮಗೆ ನೋವಿಗೆ ಸ್ಪಂದಿಸಿ, ಸುಮಾರು 25 ಟ್ರಾಕ್ಟರ್‌ಗಳ ಜೊತೆಗೆ ಕಟಾವು ಕಾರ್ಮಿಕರನ್ನು ಕಳುಹಿಸಿ, ಸುಟ್ಟ ಕಬ್ಬನ್ನು ದರದಲ್ಲಿ ಯಾವುದೇ ಕಡಿತ ಮಾಡದೇ ಕಬ್ಬು ಕಟಾವು ಮಾಡಿ, ಕಾರ್ಖಾನೆಗಳು ಕೊಂಡೊಯ್ಯುವಂತೆ ಸೂಚಿಸಬೇಕು. ಮತ್ತು ಹೆಸ್ಕಾಂ ಇಲಾಖೆ ಬೆಂಕಿಗೆ ಬೆಳೆಗಳಿಗೆ ಪರಿಹಾರ ನೀಡಬೇಕು. ಕಬ್ಬಿನ ಗದ್ದೆಗಳಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳು ಸಡಿಲಾಗಿ ಶಾರ್ಟ ಸರ್ಕಿಟ್ ಆಗದಂತೆ ಕ್ರಮ ಕೈಗೊಳ್ಳಬೇಕು. ತಾಲೂಕಿನ ಕೇಂದ್ರಕ್ಕೆ ಇದ್ದ ಅಗ್ನಿಶಾಮಕ ವಾಹನ ಸರಿಯಾಗಿ ನಿರ್ವಹಣೆ ಇಲ್ಲದೆ ಇರುವದರಿಂದ ಇಂದು ಬೇರ ತಾಲೂಕಿನ ಮೊರೆ ಹೊಗಬೇಕಾಗಿದೆ. ಕೂಡಲೇ ನಮ್ಮ ತಾಲೂಕಿನ ಅಗ್ನಿಶಾಮಕ ಠಾಣೆ ಸ್ಥಾಪಿಸಿಬೇಕು ಎಂದು ಆಗ್ರಹಿಸಿದರು. 

ಸ್ಥಳಕ್ಕೆ ತಹಶಿಲ್ದಾರ ರಾಜೇಶ ಬುರ್ಲಿ, ಪಿಎಸ್‌ಐ ಜಿ.ಜಿ. ಬಿರಾದರ ಭೇಟಿ ನೀಡಿ ಪರೀಶೀಲನೆ ನಡೆಸಿದರು. 

ಕಾಗವಾಡ ಪಟ್ಟಣದ ರೈತರು ಬೆಳೆದ ಕಬ್ಬಿಗೆ ಬೆಂಕಿ ಹೊತ್ತಿ ಅಪಾರ ಪ್ರಮಾಣದ ನಷ್ಟವಾಗಿದೆ. ಸ್ಥಳಕ್ಕೆ ಕೂಡಲೇ ಭೇಟಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತಾಲೂಕಿನ ಮೂರು ಸಕ್ಕರೆ ಕಾರ್ಖಾನೆಗಳಿಗೆ ಪೋನ್ ಮೂಲಕ ಮಾತನಾಡಿ, ಆದಷ್ಟು ಬೇಗ ರೈತರ ಕಬ್ಬು ಕಟಾವು ಮಾಡಿಸಿ ಕೊಂಡೊಯ್ಯುವಂತೆ ಸೂಚನೆ ನೀಡಲಾಗಿದೆ. 

ರಾಜು ಕಾಗೆ, ಕಾಗವಾಡ ಶಾಸಕ 

ಕಬ್ಬಿನ ಗದ್ದೆಗಳಿಗೆ ಬೆಂಕಿ ತಗುಲಿರುವ ಬಗ್ಗೆ ಹೆಸ್ಕಾಂ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ಅವರಿಂದ ತನಿಖೆ ನಡೆಸಲಾಗುವು ತನಿಖೆಯ ನಂತರ ಗೊತ್ತಾಗಲಿದೆ ಸದ್ಯ ಸರ್ವೆ ಆದ ನಂತರ ಎಷ್ಟು ಎಕರೆ ಎಂಬ ಮಾಹಿತಿ ತಿಳಿಯಲಿದೆ. 

ದುರ್ಯೋಧನ ಮಾಳಿ. ಎಇಇ ಉಗಾರ ಹೆಸ್ಕಾಂ.