ಲೋಕದರ್ಶನ ವರದಿ
ಬೈಲಹೊಂಗಲ 05: ಸಕ್ಕರೆ ಕಾರ್ಖಾನೆಗಳು ಪ್ರಗತಿ ಪಥದತ್ತ ಸಾಗಬೇಕಾದರೆ ಆಡಳಿತ ಮಂಡಳಿ, ಕಾಮರ್ಿಕರ ಸೇವಾ ಮನೋಭಾವನೆ ಬಹುಮುಖ್ಯವಾಗಿದೆ ಎಂದು ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಬಿ.ಕೆ. ಪ್ರಭಾ ಅಕ್ಕನವರು ಹೇಳಿದರು.
ಅವರು ಮಂಗಳವಾರ ಸಮೀಪದ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾಖರ್ಾನೆಯ ಬಾಯ್ಲರ್ ಪ್ರದೀಪನ ಪೂಜಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಈ ಭಾಗದ ಕಬ್ಬು ಬೆಳೆಗಾರ ರೈತರ ಸಮಸ್ಯೆಗಳನ್ನು ಅರಿತು ದಿ. ಆರ್.ಸಿ. ಬಾಳೇಕುಂದರಗಿ ಅವರು ತಮ್ಮ ಅವೀರತ ಪರಿಶ್ರಮದಿಂದ ಬ್ರಹತ್ತಾಕಾರದ ಕಾಖರ್ಾನೆಯನ್ನು ಹುಟ್ಟು ಹಾಕಿದ್ದು, ಆಡಳಿತ ಮಂಡಳಿ ಅವರ ಕನಸು ನನಸು ಮಾಡುತ್ತಿರು ಕಾರ್ಯ ಶ್ಲಾಘಣೀಯ ಎಂದರು.
ಖಾಸಗಿ ಸಕ್ಕರೆ ಕಾಖರ್ಾನೆಯ ಪೈಪೋಟಿಯ ಮಧ್ಯೆ ಕೂಡಾ ಸೋಮೇಶ್ವರ ಸಹಕಾರಿ ಸಕ್ಕರೆ ಕಾಖರ್ಾನೆ ರಾಜ್ಯದಲ್ಲಿಯೇ ಅತ್ತುತ್ತಮವಾಗಿ ಕಾರ್ಯನಿರ್ವಹಿಸುತ್ತಾ ರೈತರ ಬಾಳಿಗೆ ಕಾಮಧೇನು ಕಲ್ಪವೃಕ್ಷವಾಗಿದೆ. ಮುಂಬರುವ ದಿನಗಳಲ್ಲಿ ಕಾಖರ್ಾನೆ ಇನ್ನೂ ಹೆಚ್ಚಿನ ಅಭಿವೃದ್ದಿ ಹೊಂದಲಿ ಎಂದು ಹಾರೈಸಿದರು.
ಕಾಖರ್ಾನೆಯ ಹಿರಿಯ ನಿದರ್ೇಶಕ ಮಲ್ಲಪ್ಪ ಮುರಗೋಡ ಮಾತನಾಡಿ, ಸಕ್ಕರೆ ಕಾಖರ್ಾನೆ ರೈತರ, ಕಾಮರ್ಿಕರ ಕಾಖರ್ಾನೆಯಾಗಿದ್ದು, ರೈತರು ಪ್ರಸಕ್ತ ಹಂಗಾಮಿಗೆ ಹೆಚ್ಚಿನ ಪ್ರಮಾಣದಲ್ಲಿ ಗುಣಮಟ್ಟದ ಕಬ್ಬು ಪೂರೈಕೆ ಮಾಡಬೇಕೆಂದು ಮನವಿ ಮಾಡಿ, ಈ ಬಾರೀ ಅತೀ ಹೆಚ್ಚು ಕಬ್ಬು ನುರಿಸುವ ಗುರಿ ಹೊಂದಲಾಗಿದೆ ಎಂದರು.
ಶಿವಾನಂದ ಮಠದ ಮಹಾದೇವ ಸರಸ್ವತಿ ಸ್ವಾಮೀಜಿ ಸಾನಿಧ್ಯವಹಿಸಿದ್ದರು. ಕಾಖರ್ಾನೆಯ ಅಧ್ಯಕ್ಷ ಗುರುಪುತ್ರಪ್ಪ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪಾರೀಸಪ್ಪ ಭಾವಿ, ಮಲ್ಲಿಕಾಜರ್ುನ ಗೂಳಪ್ಪನವರ, ರಾಜು ಕುಡಸೋಮಣ್ಣವರ, ಪ್ರದೀಪ ವಣ್ಣೂರ, ಬಸವರಾಜ ಇಂಗಳಗಿ, ಅದೃಶ್ಯಪ್ಪ ಕೋಟಬಾಗಿ, ಸಣ್ಣಭೀಮಶೆಪ್ಪ ಅಂಬಡಗಟ್ಟಿ, ಗಂಗಪ್ಪ ಭರಮಣ್ಣವರ, ಕಮಲಾ ಅವ್ವಕ್ಕನವರ, ಕಸ್ತೂರಿ ಸೊಮನಟ್ಟಿ, ಹಿರಿಯರಾದ ಶಿವಪುತ್ರಪ್ಪ ಅವ್ವಕ್ಕನವರ, ಬಸವರಾಜ ಸೋಮನಟ್ಟಿ, ಬಸವರಾಜ ತಿಗಡಿ, ಸುವಣರ್ಾ ಅಕ್ಕ, ಪಾರ್ವತಿ ಅಕ್ಕ, ಅಕೌಂಟಂಟ್ ಬಸಯ್ಯ ಪೂಜೇರಿ, ಅಮೂಲ್ಯಾ ಬಾಳೆಕುಂದರಗಿ, ಮುಖ್ಯ ಇಂಜನೀಯರ್ ಉಮಾಪತಿ, ಜಿ.ಜಿ. ಬಿಕರ್ೇ ಎಸ್.ಬಿ. ಕಣವಿ, ಜಿ.ಆರ್. ಜಮನಾಳ, ಕಾಮರ್ಿಕರು, ಸಿಬ್ಬಂದಿ, ರೈತರು ಉಪಸ್ಥಿತರಿದ್ದರು.
ಗದಗಯ್ಯ ಹಿರೇಮಠ ಹೋಮ-ಹವನ, ವಿಶೇಷ ನೇರವೇರಿಸಿದರು.
ನಿದರ್ೇಶಕ ಅಶೋಕ ಬಾಳೇಕುಂದರಗಿ, ದಂಪತಿ ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು. ಅಶೋಕ ಬೊಮ್ಮಣ್ಣವರ ನಿರೂಪಿಸಿ, ವಂದಿಸಿದರು.