ನವದೆಹಲಿ, ಏ 5,ರಾಷ್ಟ್ರಾದ್ಯಂತ ಲಾಕ್ ಡೌನ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಯಾವುದೇ ಅಗತ್ಯ ವಸ್ತುಗಳ ಕೊರತೆ ಉಂಟಾಗದಂತೆ ತಡೆಯಲು ಭಾರತೀಯ ರೈಲ್ವೆ ಮಾ. 23ರಿಂದ ಏ.4ರವರೆಗೆ 1,342 ವೇಗನ್ ಸಕ್ಕರೆ, 958 ವೇಗನ್ ಉಪ್ಪು ಮತ್ತು 378 ವೇಗನ್ ಟ್ಯಾಂಕ್ ಅಗತ್ಯ ಎಣ್ಣೆ ಸಾಗಿಸಿದೆ. ಏ. 23ರಂದು 42 ವೇಗನ್ ಸಕ್ಕರೆ ಹಾಗೂ 168 ವೇಗನ್ ಉಪ್ಪು ಲೋಡ್ ಮಾಡಲಾಗಿತ್ತು ಇಲಾಖೆಯ ಪ್ರಕಟಣೆ ತಿಳಿಸಿದೆ. ಲಾಕ್ ಡೌನ್ ಅವಧಿಯಲ್ಲಿ ದೇಶದ ಯಾವುದೇ ವ್ಯಕ್ತಿಗೆ ಸಕ್ಕರೆ, ಉಪ್ಪು ಮತ್ತು ಅಗತ್ಯ ಎಣ್ಣೆಯ ಕೊರತೆ ಎದುರಾಗದಂತೆ ತಡೆಯಲು ರೈಲ್ವೆ ಇಲಾಖೆ ಪ್ರಯತ್ನ ನಡೆಸಿದೆ.ಈ ರೈಲಿನ ಪಯಣದ ಮೇಲೆ ಹಿರಿಯ ಅಧಿಕಾರಿಗಳು ತೀವ್ರ ನಿಗಾ ವಹಿಸಿದ್ದಾರೆ.