ರಾಣೇಬೆನ್ನೂರು ಜು.5: ಇಂದು ಪ್ರತಿಯೊಬ್ಬರೂ ತಮ್ಮ ನಿತ್ಯದ ಬದುಕಿನ ಜಂಜಾಟದಲ್ಲಿ ಸಿಲುಕಿ ಅನೇಕ ಸಂಕಷ್ಟಗಳನ್ನು ಎದುರಿಸುವಂತಾಗಿದೆ. ಇದರ ಪರಿಣಾಮ ಮಹಿಳೆಯರಾದಿಯಾಗಿ ಅನೇಕ ಕಾಯಿಲೆಗಳಿಂದ ಬಳಲುವಂತಾಗಿದೆ. ಆರೋಗ್ಯಯುತ ಬದುಕಿಗೆ ಯೋಗ-ಧ್ಯಾನ-ಪ್ರಾಣಾಯಾಮ ಇಂದಿಗೆ ಅತ್ಯಂತ ಅಗತ್ಯವಾಗಿದೆ ಎಂದು ಸ್ತ್ರೀ ರೋಗ ತಜ್ಞ ಮಹಿಳಾ ವಿಧ್ಯಾವರ್ಧಕ ಸಂಘದ ಅಧ್ಯಕ್ಷೆ ಡಾ|| ರಂಜನಾ ಎ. ನಾಯ್ಕ ಹೇಳಿದರು.
ಅವರು ಗುರುವಾರ ಇಲ್ಲಿನ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ನಡೆದ ವಿಶ್ವ ಅಂತರಾಷ್ಟ್ರೀಯ ಯೋಗ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾಥರ್ಿಗಳು ತಮ್ಮ ಜೀವನದಲ್ಲಿ ಪರಿಪೂರ್ಣತೆ ಸಾಧಿಸಬೇಕಾದರೆ, ಪರಿಶ್ರಮ ಪಡಬೇಕು, ಪರಿಶ್ರಮ ಪಡದೇ ಇದ್ದರೆ, ಸಮಾಜದಲ್ಲಿ ಇಂತಹ ಅಮೂಲ್ಯವಾದ ಮಾನ, ಸನ್ಮಾನ ಗೌರವ ದೊರಕಿಸಿಕೊಳ್ಳಲು ಸಾಧ್ಯವಾಗಲಾರದು ಎಂದ ಅವರು ಪರಿಪೂರ್ಣತೆ ಸಾಧಿಸಿ ಸಮಾಜದಲ್ಲಿ ಗೌರವ ಸಂಪಾಧನೆ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು.
ಯೋಗ ಸಾಧಕಿ ಜಿಲ್ಲಾ ಪತಂಜಲಿ ಮಹಿಳಾ ಅಧ್ಯಕ್ಷೆ ವಜ್ರೇಶ್ವರಿ ವಾಸುದೇವಸಾ ಲದ್ವಾ ಅವರು ಬಾಬಾ ರಾಮ್ದೇವಜೀ ಅವರ ತ್ಯಾಗ, ಸಾಧನೆ ಅವರು ಸಮಾಜಕ್ಕೆ ನೀಡಿದ ಅತ್ಯಮೂಲ್ಯ ಕೊಡುಗೆಯಿಂದಾಗಿ ಇಂದು ಕೋಟ್ಯಾಂತರ ನಾಗರೀಕರು ನಿತ್ಯವೂ ಯೋಗ ಧ್ಯಾನದ ಮೂಲಕ ಆರೋಗ್ಯವಂತ ಬದುಕು ಸಾಗಿಸಲು ಸಾಧ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ 15ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾಥರ್ಿಗಳನ್ನು ನಗದು ಮೊತ್ತ, ಪ್ರಮಾಣ ಪತ್ರ ವಿತರಿಸಿ ಗೌರವಿಸಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶ್ರೀಧರ ಮತ್ತು ವಜ್ರೇಶ್ವರಿ ಲದ್ವಾ ಮತ್ತಿತರ ಗಣ್ಯರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕಾರ್ಯದಶರ್ಿ ಗೀತಾ ಜಂಬಿಗಿ, ಸದಸ್ಯರಾದ ಶಾರದಾ ದಿಕ್ಷೀತ್, ಸಾವಿತ್ರಾಬಾಯಿ ಮೈಲಾರಿ, ಶಕುಂತಲಮ್ಮ ತಿಳವಳ್ಳಿ, ಅನ್ನಪೂರ್ಣಮ್ಮ ದಾನಪ್ಪನವರ, ಗಾಯತ್ರಮ್ಮ ಕುರವತ್ತಿ, ಮಾದುರಿ ಮುದ್ರಿ ಸೇರಿದಂತೆ ಮತ್ತಿತರ ಗಣ್ಯರು, ನಾಗರೀಕರು ಉಪಸ್ಥಿತರಿದ್ದರು.