ಜೈವಿಕ ಇಂಧನ ಸಂಶೋಧನೆ ಮಾಹಿತಿ, ಪ್ರಾತ್ಯಕ್ಷಿಕೆ ಕೇಂದ್ರಕ್ಕೆ ಸುಧೀಂದ್ರ ಭೇಟಿ
ಬೆಳಗಾವಿ,18: ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಎಸ್. ಈ . ಸುಧೀಂದ್ರ ಅವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ವತಿಯಿಂದ ಸ್ಥಾಪಿಸಲಾಗಿರುವ ಜೈವಿಕ ಇಂಧನ ಸಂಶೋಧನೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ವಿದ್ಯಾಶಂಕರ ಎಸ್., ಅವರು ಅಧ್ಯಕ್ಷರನ್ನು ಸನ್ಮಾನಿಸಿದರು ಮತ್ತು ವಿಶ್ವವಿದ್ಯಾನಿಲಯದ ಜೈವಿಕ ಇಂಧನ ಯೋಜನೆಗಳು ಮತ್ತು ಅದರ ಶೈಕ್ಷಣಿಕ ಉಪಕ್ರಮಗಳ ಅವಲೋಕನವನ್ನು ಒದಗಿಸಿದರು.
ಜೈವಿಕ ಇಂಧನ ಸಂಶೋಧನೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರದಲ್ಲಿ ಕೇಂದ್ರದ ಸಂಯೋಜಕರಾದ ಡಾ. ನಾಗರಾಜ ಎಸ. ಪಾಟೀಲ್ ಅವರು ಕೇಂದ್ರದ ಜೈವಿಕ ಇಂಧನ ಬೀಜ ಸಂಗ್ರಹಣೆ, ಬಯೋಡೀಸೆಲ್ ಉತ್ಪಾದನೆ ಹಾಗೂ ವಾಹನಗಳಲ್ಲಿ ಬಳಕೆ ಕುರಿತು ವಿವರಿಸಿದರು. ಮಂಡಳಿಯ ಅಧ್ಯಕ್ಷರು ಕೇಂದ್ರದ ಕಾರ್ಯ ಚಟುವಟಿಕೆಗಳನ್ನು ವೀಕ್ಷಿಸಿ ಕೇಂದ್ರವು ಕೈಗೊಂಡಿರುವ ಜೈವಿಕ ಇಂಧನ ಅಭಿವೃದ್ಧಿಯ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಮಂಡಳಿಯು ಹೊಸ ಜೈವಿಕ ಇಂಧನ ನೀತಿಯನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿದೆ ಎಂದು ಅಧ್ಯಕ್ಷರು ವ್ಯಕ್ತಪಡಿಸಿದ್ದಾರೆ.