ನಿತ್ಯದ ದಿನಚರಿಯಿಂದ ಕಾರ್ಯದಲ್ಲಿ ಯಶಸ್ಸು ಸಾಧ್ಯ: ಭವರಲಾಲ ಆಯರ್ಾ

ಅಥಣಿ 12: ಪ್ರತಿಯೊಂದು ಕಾರ್ಯವನ್ನು ಯೋಗದಿಂದ ನಿಮ್ಮ ನಿತ್ಯ ದಿನಚರಿಯನ್ನು ಆರಂಭಿಸಿ ಯಶಸ್ಸನ್ನು ಕಾಣಲು ಸಾಧ್ಯವಾಗುತ್ತದೆ. ಈ ರೀತಿ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು, ಬಹುದೊಡ್ಡ ಯಶಸ್ಸನ್ನು ಕಂಡಿರುವ ಬಾಬಾ ರಾಮದೇವ ಮಹಾರಾಜರೆ ಇದಕ್ಕೆ ಪ್ರತ್ಯಕ್ಷ ನಿದರ್ಶನ ಎಂದು ಪತಂಜಲಿ ಯೋಗ ಪೀಠದ ರಾಜ್ಯ ಪ್ರಭಾರಿ ಭವರಲಾಲ ಆಯರ್ಾ ಹೇಳಿದರು.

        ಅಥಣಿಯ ವಿಕ್ರಮಪೂರದ ಬಡಾವಣೆಯಲ್ಲಿ ಡಾ. ವಿನಾಯಕ ಚಿಂಚೋಳಿಮಠರವರು ಆರಂಭಿಸಿರುವ ಪತಂಜಲಿ ಆರೋಗ್ಯಕೇಂದ್ರ ಮತ್ತು ಮಾರಾಟ ಮಳಿಗೆ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತಿದ್ದರು. 

ಬರುವ ದಿನಮಾನದಲ್ಲಿ ಪತಂಜಲಿ 11000 ಸಾವಿರ ಯೋಗ ಶಿಕ್ಷಕರನ್ನು ತರಬೇತುಗೊಳಿಸಿ ಸಿದ್ಧಗೊಳಿಸುವ ಗುರಿಹೊಂದಿದೆ. ಅಲ್ಲದೆ ಇದೇ ಡಿಸೆಂಬರ 31 ರಂದು ಕನ್ನಡದಲ್ಲಿ ಆಸ್ತಾ ಚಾನೆಲ್ ಆರಂಭವಾಗಲಿದೆ. ಈ ಕಾರ್ಯಕ್ರಮದಲ್ಲಿ ಅನೇಕ ಸ್ವಾಮೀಜಿಯವರ ಪ್ರವಚನ, ಅಲ್ಲದೆ ಕನರ್ಾಟಕದ ವಿವಿಧ ಯೋಗ ಕಾರ್ಯಕ್ರಮಗಳು ಪ್ರಸಾರಗೊಳ್ಳಲಿದೆ. ಈ ಚಾನೆಲ್ಗೆ ವಿಜಯಪೂರದ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಚಾಲನೆಯನ್ನು ನೀಡಲಿದ್ದಾರೆ.

ಆರೋಗ್ಯಕ್ಕಾಗಿ ಹೋರಾಟ ನಡೆಯಬೇಕಾದ ಅಗತ್ಯವಿದೆ. ಯೋಗ ಎನ್ನುವುದು ವ್ಯಕ್ತಿಯ ಸವರ್ಾಂಗೀಣ ಬೆಳವಣಿಗೆಗೆ ಪೂರಕವಾಗುವುದು. ಉತ್ತಮ  ಆರೋಗ್ಯವಂತ ಆಹಾರ ಸೇವಿಸುವುದು ಅಷ್ಟೇ ಪ್ರಾಮುಖ್ಯ. ಇಂತಹ ಉತ್ತಮ ಕಲಬೆರಕೆರಹಿತ ದಿನೋಪಯೋಗಿ ವಸ್ತುಗಳನ್ನು ಪತಂಜಲಿ ನೀಡುತ್ತಿದೆ. ನಾವು ಇಂದು ರೈತರೆ ಆಗಲಿ. ನೌಕರರಾಗಲಿ, ಕೂಲಿಯವರೇ, ಆಗಲಿ ಯಾವುದೆ ಉದ್ಯೋಗ ಮಾಡುತ್ತಿರಲಿ ನಿರಂತರ ಯೋಗದಿಂದ ಉತ್ತಮ ಯಶಸ್ಸು ಕಾಣಲು ಸಹಕಾರಿಯಾಗಿದೆ ಎಂದು ತಿಳಿಸಿದರು.

   ಯೋಗಗುರು ಎ ಬಿ ಪಾಟೀಲ, ಡಾ ವಿನಾಯಕ ಚಿಂಚೋಳಿಮಠ, ಪತಂಜಲಿ ಯೋಗ ಸಮೀತಿಯ ತಾಲೂಕಾ ಪ್ರಭಾರಿ ಎಸ್ ಕೆ ಹೊಳೆಪ್ಪನವರ, ಸಾಹಿತಿ ಅಪ್ಪಾಸಾಬ ಅಲಿಬಾದಿ, ಎಂ. ಎನ್. ಚಿಂಚೋಳಿಮಠ, ಸುರೇಶ ಚಿಕ್ಕಟ್ಟಿ, ಅಪ್ಪಾಸಾಬ ತಾಂಬಟ,ರಾಜಶೇಖರ ಗುಡೋಡಗಿ, ಉಜ್ವಲಾ ಹೀರೆಮಠ, ಸುರೇಖಾ ತಾಂಬಟ, ರಾಜು ಇನಾಮದಾರ, ಶಿವಾನಂದ ಮಾಲಗಾವಿ, ಡಾ ಆರ್. ಎಸ್. ದೊಡ್ಡನಿಂಗಪ್ಪಗೋಳ ಮುಂತಾದ ಯೋಗ ಬಳಗದ ಸದಸ್ಯರು ಹಾಗೂ ಅಥಣಿಯ ಜನತೆ ಕಾರ್ಯಕ್ರಮದಲ್ಲಿ ಸಹಭಾಗಿಗಳಾಗಿದ್ದರು.