ಮಹಿಳೆಗೆ ಅಂಡಾಶಯದ ಪಕ್ಕದಲ್ಲಿ 4ಕೆಜಿ ಗಂಟು: ಕೆಎಲ್‌ಇ ಶತಮಾನೋತ್ಸವ ಚಾರಟೆಬಲ್ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

ಮಹಿಳೆಗೆ ಅಂಡಾಶಯದ ಪಕ್ಕದಲ್ಲಿ 4ಕೆಜಿ ಗಂಟು: ಕೆಎಲ್‌ಇ ಶತಮಾನೋತ್ಸವ ಚಾರಟೆಬಲ್ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ Successful surgery by KLE Centenary Charitable Doctor

ಬೆಳಗಾವಿ 19: ಸುಮಾರು  ವರ್ಷಗಳಿಂದ ಅಂಡಾಶಯದಲ್ಲಿ ಉಂಟಾದ ಗಂಟಿನಿಂದ ನರಳುತ್ತಿದ್ದ 20 ವರ್ಷದ ಅವಿವಾಹಿತ ಮಹಿಳೆಗೆೆ ಯಳ್ಳೂರ ರಸ್ತೆಯಲ್ಲಿನ ಕೆ.ಎಲ್‌.ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಗಂಟಿನಿಂದ ಮುಕ್ತಿ ನೀಡಲಾಯಿತು.  

ಆ ಮಹಿಳೆಯು ತಮ್ಮ ಸಂಬಂಧಿಕರ ಸಲಹೆಯಂತೆ  ಕೆಎಲ್‌ಇ ಆಸ್ಪತ್ರೆಗೆ ಬಂದು ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗದ ಮುಖ್ಯಸ್ಥ ಹಾಗೂ ಪ್ರಸಿದ್ಧ ವೈದ್ಯರಾದ ಡಾ. ಸತೀಶ ಧಾಮಣಕರ ಇವರಿಗೆ ತೋರಿಸಿದಾಗ ಆ ಮಹಿಳೆಗೆ ಅಂಡಾಶಯದ ಪಕ್ಕದಲ್ಲಿ ಸುಮಾರು 27 ಥ 23 ಥ 12  ಘನ ಸೆಂಟಿಮೀಟರನಷ್ಟು ಉದ್ದದ, 4 ಕಿಲೋಗ್ರಾಮನಷ್ಟು ತೂಕದ ದೊಡ್ಡದಾದ ಗಂಟೊಂದು ಬೆಳೆದಿರುವದು ಕಂಡು ಬಂದಿತು. ಇದನ್ನು ಸೋನೊಗ್ರಾಫಿಯ ಮೂಲಕ ಕಂಡುಕೊಂಡ ವೈದ್ಯರು ತನ್ನ ಸಹ ವೈದ್ಯರಾದ ಡಾ. ಗೀತಾಂಜಲಿ ತೋಟಗಿ ಹಾಗೂ  ಡಾ. ಪ್ರಿಯಾಂಕಾ ಇಂಗಳಗಿ ಹಾಗೂ ಅರವಳಿಕೆ ತಜ್ಞ ಡಾ. ಕೆನ್ನಿ ಅರುಲ, ಡಾ. ಅರುಣ ಮಳಗೇರ ಇವರ ನೆರವಿನಿಂದ ಶಸ್ತ್ರ ಚಿಕಿತ್ಸೆಗೆ ಮುಂದಾದರು. ಡಾ. ಸತೀಶ ಧಾಮಣಕರ ಅವರ ನೇತೃತ್ವದ ಈ ತಂಡವು ಸುಮಾರು ಒಂದೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದರು. 

ಡಾ. ಸತೀಶ ಧಾಮಣಕರ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಊಟೋಪಚಾರದಲ್ಲಿನ ಬದಲಾವಣೆ, ಜೀವನಶೈಲಿಯಲ್ಲಿನ ಬದಲಾವಣೆಗಳು ಹಾಗೂ ಮಹಿಳೆಯರ ಜೀವನದ ಒಂದು ಹಂತದಲ್ಲಾಗುವ ದೈಹಿಕ ಬದಲಾವಣೆಗಳು ಹಾಗೂ ಹಾರ್ಮೋನುಗಳಲ್ಲಾಗುವ ಬದಲಾವಣೆಗಳಿಂದ ಈ ರೀತಿಯ ಗೆಡ್ಡೆಗಳು ಬೆಳೆಯಬಹುದಾಗಿದೆ. ಇವುಗಳಿಗೆ ಹೆದರದೇ ಸಕಾಲದಲ್ಲಿ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯುವದು ಒಳಿತು.  ಈ ಪ್ರಕರಣದಲ್ಲಿ ಮಹಿಳೆಗೆ ಭವಿಷ್ಯದಲಿ ್ಲ ಮಕ್ಕಳು ಹಾಗೂ ಆಕೆಯ ಋತುಸ್ರಾವದಲ್ಲಿ ಯಾವುದೇ ರೀತಿಯ ತೊಡಕು ಉಂಟಾಗದಂತೆ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿದೆ ಎಂದು ತಿಳಿಸಿದರು.  

ಇಂತಹ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಯನ್ನು ಸರಳವಾಗಿ ನೆರವೇರಿಸಿದ ವೈದ್ಯರ ತಂಡವನ್ನು  ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ವೈದ್ಯಕೀಯ ನೀರೀಕ್ಷಕ ಡಾ. ಆರ್ ಜಿ ನೆಲವಿಗಿ, ಮುಖ್ಯ ಕಾರ್ಯನಿರ್ವಹನಾಧಿಕಾರಿ ಪ್ರಶಾಂತ ದೇಸಾಯಿ ಅವರು, ಯುಎಸ್‌ಎಮ್ ಕೆಎಲ್‌ಇಯ ನಿರ್ದೇಶಕ ಡಾ. ಹೆಚ್ ಬಿ ರಾಜಶೇಖರ ಅವರು ಅಭಿನಂದಿಸಿದ್ದಾರೆ.  

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.