ಕೋಲ್ಕತ್ತಾ ರೋಗಿಗೆ ಮಹಾಲಿಂಗಪುರದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ !

ಮಹಾಲಿಂಗಪುರ 03: ಸ್ಥಳೀಯ ವೆಂಕಟೇಶ್ ಆಸ್ಪತ್ರೆಯ ಅಥರ್ೋ ವಿಭಾಗದಲ್ಲಿ ಇತ್ತೀಚೆಗೆ ಪಶ್ಚಿಮ ಬಂಗಾಳದ ರೋಗಿಗೆ ಯಶಸ್ವಿ ಚಪ್ಪೆ ಕೀಲು ಬದಲಾವಣೆ ಶಸ್ತ್ರ ಚಿಕಿತ್ಸೆ ನೀಡಲಾಯಿತು. ಕೋಲ್ಕತ್ತಾ ನಗರದ ರಂಪಾ ಕೀರ್ತನೀಯ ಎಂಬ 36 ವಯಸ್ಸಿನ ಮಹಿಳೆ ಚಪ್ಪೆ ಮೂಳೆ ಮುರಿತದಿಂದ ನೋವು ಅನುಭವಿಸುತ್ತಿದ್ದು ಟ್ರೇನ್ ಮೂಲಕ 3 ತಿಂಗಳಲ್ಲಿ 4 ಬಾರಿ ಇಲ್ಲಿನ ವೆಂಕಟೇಶ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆದಿದ್ದರು. 

ಕನ್ನಡ ಗೊತ್ತಿಲ್ಲದ, ಹಿಂದಿಯೂ ಬಾರದ ರೋಗಿಯ ಸಮಸ್ಯೆಯನ್ನು ಅರಿತುಕೊಂಡ ಇಲ್ಲಿನ ಅಥರ್ೋ ವಿಭಾಗದ ಮುಖ್ಯಸ್ಥ ಡಾ.ಸಂದೀಪ ಕನಕರಡ್ಡಿ ಶಸ್ತ್ರ ಚಿಕಿತ್ಸೆ ಮೂಲಕ ಚಪ್ಪೆ ಕೀಲು ಬದಲಾವಣೆ ಮಾಡಿ ಸಲೀಸಾಗಿ ನಡೆದಾಡುವಂತಾದ ಮೇಲೆ ಊರಿಗೆ ಕಳಿಸಿದ್ದಾರೆ. ರೋಗಿಗೆ ಅನುಕೂಲವಾಗುವಂತೆ ಕೋಲ್ಕತ್ತಾದಿಂದಲೇ ಪ್ರತಿ 3 ತಿಂಗಳಿಗೊಮ್ಮೆ ರೋಗಿಯ ಎಕ್ಸ್ ರೇ ರಿಪೋಟರ್್ ತರಿಸಿ ರೋಗಿ ಸಂಪೂರ್ಣ ಗುಣಮುಖವಾದ ಬಗ್ಗೆ ವೈದ್ಯರು ಖಾತ್ರಿ ಮಾಡಿಕೊಳ್ಳುತ್ತಿದ್ದಾರೆ. 

ಮುಂಗೈ ಕೀಲುಗಳ ವಿಶೇಷ ತಜ್ಞರೂ ರಾಜ್ಯದ ಅತ್ಯಂತ ಉತ್ತಮ ಸ್ಪೈನ್ ಅಥರ್ೋ ತಜ್ಞರೂ ಎನಿಸಿದ ಡಾ. ಸಂದೀಪ ಕನಕರಡ್ಡಿ ಅವರು ದುಬಾರಿ ಶಸ್ತ್ರಚಿಕಿತ್ಸೆಯನ್ನು ಕಡಿಮೆ ವೆಚ್ಚದಲ್ಲಿ ವಿದೇಶಿ ಹೈಟೆಕ್ ಸಾಮಗ್ರಿ ಬಳಸಿ ಯಶಸ್ವಿ ಮಾಡಿದ್ದಾರೆ. ಗಂಭೀರ ಮೂಳೆ ರೋಗಕ್ಕೆ ದೂರದ ಬೆಂಗಳೂರು, ವೆಲ್ಲೂರು ಕಡೆ ಮುಖ ಮಾಡುತ್ತಿದ್ದ ರೋಗಿಗಳು ಮಹಾಲಿಂಗಪುರದ ಕಡೆ ಆಗಮಿಸುತ್ತಿರುವುದು ಇಲ್ಲಿನ ವೈದ್ಯರ ಕೈಗುಣ ಮತ್ತು ಕಾಳಜಿ ಗುಣಕ್ಕೆ ಸಾಕ್ಷಿಯಾಗಿದೆ.