ವಿದ್ಯಾಥಿಗಳ ಸತತ ಪರಿಶ್ರಮದಿಂದ ಯಶಸ್ಸು ಸಾಧ್ಯ: ಪುರಾಣಿಕ

ಲೋಕದರ್ಶನವರದಿ

ಶಿಗ್ಗಾವಿ23: ವಿದ್ಯಾಥರ್ಿಗಳು ಸತತ ಪರಿಶ್ರಮ ವಹಿಸಿ ಅಧ್ಯಯನ ಮಾಡಬೇಕು ಪರಿಶ್ರಮದ ಹಿಂದೆ ಯಶಸ್ವಿ ಕಾಣಲು ಸಾಧ್ಯವಿದೆ. ಎಂದು ತಾಲೂಕಿನ ಹೊತ್ನಹಳ್ಳಿಯಲ್ಲಿ ಶುಕ್ರವಾರ ನಡೆದ ಡಿ.ದೇವರಾಜ ಅರಸು ಮೆ.ಪೂ.ಬಾಲಕರ ಸಕರ್ಾರಿ ವಸತಿ ನಿಲಯದ ವಾಪರ್ಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸಿ.ಎಸ್.ಪುರಾಣಿಕ ಹೇಳಿದರು.

         ತಾಲೂಕಿನ ಅವರು ಪಠ್ಯ ಪುಸ್ತಕದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಹಿತ ಯಶಸ್ಸನ್ನು ಕಂಡಾಗ ಮುಂದಿನ ದಿನಮಾನಗಳಲ್ಲಿ ಬರುವ ಪ್ರತಿಯೊಂದು ಸಮಸ್ಯೆಗಳನ್ನು ಯಾವುದೇ ತೊಂದರೆ ಇಲ್ಲದೇ ಬಗೆಹರಿಸುವ ಶಕ್ತಿ ನಮ್ಮದಾಗುತ್ತದೆ ಎಂದರು.

ಹಾನಗಲ್ಲ ತಾಲ್ಲೂಕು ಅಕ್ಷರ ದಾಸೋಹ ಅಧಿಕಾರಿ ಶೇಖರ ಹಂಚಿನಮನಿ ಮಾತನಾಡಿ,  ಸಮಸ್ಯೆ, ಸವಾಲುಗಳನ್ನು ಎದುರಿಸುವ ಮೂಲಕ ಜ್ಞಾನ ಸಂಪಾದನೆಗೆ ಮುಂದಾಗಿರಿ. ಕೃಷಿಕ, ಸೈನಿಕರ ಶ್ರೇಷ್ಟ ಕಾಯಕ ಅದರ ಜೊತೆಗೆ ಶಿಕ್ಷಕ ಇವರಿಬ್ಬರಿಗೂ ಮಾರ್ಗದರ್ಶಕನಾಗಿರುತ್ತಾನೆ  ಅಲ್ಲದೇ ಈ  ದೇಶದ ಪ್ರಗತಿಗೆ  ಕಾರಣಿಕರ್ತನು ಆಗಿರುತ್ತಾನೆ  ಎಂದರು.

          ಕನರ್ಾಟಕ ಬಯಲಾಟ ಅಕಾಡೆಮಿ ಸದಸ್ಯ ಬಸವರಾಜ ಶಿಗ್ಗಾವಿ ಮಾತನಾಡಿ, ನಿಮ್ಮ ಭವಿಷ್ಯದ  ನಿಧರ್ಾರವನ್ನು ನೀವೇ ರೂಪಿಸಿಕೊಳ್ಳಬೇಕು. ಸೇವಾ ಮನೋಭಾವನೆಯಿಂದ ಕಾಯಕ ನಡೆಸಿದಾಗ ಬದುಕಿನಲ್ಲಿ ಜಯ ಕಾಣಲು ಸಾಧ್ಯವಿದೆ ಅಲ್ಲದೇ ಬಡವರು, ದೀನದಲಿತರು, ಅಂಗವಿಕಲರು, ವಯೋವೃದ್ದರು ಬಂದಾಗ ಮಾನವೀಯತೆಯಿಂದ ಅವರನ್ನು ಕಾಣುವುದರ ಜೊತೆಗೆ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು  ಎಂದರು.

       ಮಾನವ ಬಂಧುತ್ವ ಸಂಘಟನೆ  ಜಿಲ್ಲಾ ಸಂಚಾಲಕ ಪ್ರಕಾಶ ಹಾದಿಮನಿ ಮಾತನಾಡಿ, ನಿಮ್ಮ ಪ್ರಯತ್ನದಲ್ಲಿ ಫಲವಿದೆ ಹಾಗೂ ಗುರಿ ಇದ್ದಲ್ಲಿ ಪ್ರರಿಶ್ರಮ ಮತ್ತು ಪ್ರಯತ್ನ ಇದ್ದೇ ಇರುತ್ತದೆ ಅದನ್ನು ಸಾಕಾರ ಮಾಡಿಕೋಳ್ಳುವ ಗುಣ ನಿಮ್ಮದಾಗಿರಬೇಕು , ಶಕ್ತಿ ಮೇಲೆ ನಂಬಿಕೆ ಇರಬೇಕು ಹೊರತಾಗಿ ಅದೃಷ್ಟದ ಮೇಲಲ್ಲ. ಸಿಕ್ಕ ಅವಕಾಶಗಳ ಬಳಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಮುಂದಾಗಬೇಕು ಎಂದರು.

ಪಿಡಿಒ ಶಾಂತಿನಾಥ ಜೈನ್ ಮಾತನಾಡಿ, ನಮ್ಮ ಕಡೆಯಲ್ಲಿ ಈ ತರಹದ ವಸತಿ ಶಾಲೆಗಳು ನಿಜವಾಗಿಯೂ ನಾನು ಕಂಡಿಲ್ಲ ಏಕೆಂದರೆ ಈ ತರಹದ ಸುವ್ಯವಸ್ಥಿತವಾಗಿ ಇರುವಂತಹ ಮತ್ತು ಸ್ವಚ್ಚತೆಯಿಂದ ಇರುವ ವಸತಿ ಶಾಲೆಗಳು ಕೇವಲ ಬೇರಳಣಿಕೆ ಎಷ್ಟು ಅಲ್ಲದೇ ಬಾಲ್ಯ ಜೀವನವನ್ನು ಆನಂದಿಸಿ ಅನಬೋಗಿಸಿ ನಿಮ್ಮ ಭವಿಷ್ಯಕ್ಕೆ ದಾರಿ ದೀಪವಾಗಿರಿ ಎಂದರು.

   ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸಿ.ಎಸ್.ಪುರಾಣಿಕ ಹಾಗೂ  ಹಾನಗಲ್ಲ ತಾಲ್ಲೂಕು ಅಕ್ಷರ ದಾಸೋಹ ಅಧಿಕಾರಿ ಶೇಖರ ಹಂಚಿನಮನಿಯವರನ್ನು ವಸತಿ ನಿಲಯದ ವತಿಯಿಂದ ಸನ್ಮಾನಿಸಲಾಯಿತು. ಮಕ್ಕಳಿಗೆ ಕೆಲವೊಂದು ಪಠ್ಯೇತರ ಚಟುವಟಿಕೆಯಲ್ಲಿ ಭಾಗಿಯಾಗಿ ವಿಜೇತರಿಗೆ ಬಹುಮಾನವನ್ನು ನೀಡಲಾಯಿತು.

          ಈ ಕಾರ್ಯಕ್ರಮದಲ್ಲಿ ವಸತಿ ನಿಲಯದ ಮೇಲ್ವಿಚಾರಕ ರಮೇಶ, ಚನ್ನಪ್ಪ ಬಿ.ಎಂ,  ವಿ.ಎಂ.ಅವಜಿ, ಎಸ್.ಬಿ.ಹೊಲಜೋಗಿ, ಸ್ಮೀತಾ ಮೋಹಿತೆ, ರೂಪಾ ನಾಯ್ಕ, ಜೆ.ಟಿ.ಹುಲ್ಮನಿ, ಹೆಸರೂರ, ಹಿತ್ತಲಮನಿ, ಹತ್ರೊಟ್ಟಿ, ನಂದಿಹಳ್ಳಿ, ಮಸಳಿ ಮತ್ತಿತರರು ಇದ್ದರು.  ಸ್ವಾಗತವನ್ನು ರಮೇಶ ಸರ್, ಚಂದ್ರು ನಿರೂಪಿಸಿ ವಂದಿಸಿದರು.