ಬೆಳಗಾವಿ, 1: ಇಂದಿನ ಸ್ಪಧರ್ಾತ್ಮಕ ಯುಗದ ಶೈಕ್ಷಣಿಕ ಕ್ಷೇತ್ರದಲ್ಲಿ ಅದರಲ್ಲೂ ಪಿಯುಸಿಯಲ್ಲಿ ಸಾಕಷ್ಟು ಮಾಪರ್ಾಡುಗಳು ಆಗುತ್ತಿದೆ. ಈ ನಿಟ್ಟಿನಲ್ಲಿ ರಾಷ್ಟ್ರಮಟ್ಟದ ಸ್ಪಧರ್ಾತ್ಮಕ ಪರೀಕ್ಷೆಗಳಿಗೆ ವಿದ್ಯಾಥರ್ಿಗಳನ್ನು ಅಣಿಗೊಳಿಸುವ ಅನಿವಾರ್ಯತೆ ಇದೆ ಎಂದು ನುಡಿಯುತ್ತಾ ಇಂದಿನ ವಿದ್ಯಾಥರ್ಿಗಳು ಶಿಕ್ಷಣ ಬಡತನ ಮತ್ತು ನಿರುದ್ಯೋಗದಂತಾ ಸುನಾಮಿ ಸುಳಿಗೆ ಸಿಕ್ಕು ಒದ್ದಾಡುತ್ತಿದ್ದಾರೆ. ಈ ಸುನಾಮಿಯನ್ನು ಎದುರಿಸಿ ಸತತ ಪರಿಶ್ರಮ ಮತ್ತು ಕಠಿಣ ಪ್ರಯತ್ನವನ್ನು ಮಾಡಿದರೆ ಯಶಸ್ಸು ಸಾಧಿಸಲು ಸಾಧ್ಯ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಎಂ.ಬಿ.ಎ. ವಿಭಾಗದ ಮುಖ್ಯಸ್ಥ ಡಾ. ಸಿ.ಎಮ್.ತ್ಯಾಗರಾಜ ಅಭಿಪ್ರಾಯ ಪಟ್ಟರು. ನಗರದ ಗೋವಾವೇಸ್ ಬಳಿಯ ನಾಯ್ಕರ್ ಶಿಕ್ಷಣ ಸಂಸ್ಥೆಯ ರವೀಂದ್ರನಾಥ ಟ್ಯಾಗೋರ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಶನಿವಾರ ದಿ. 01ರಂದು ಉದ್ಘಾಟಿಸಿ ಮಾತನಾಡಿದರು.
ಮುಂದುವರೆದು ಮಾತನಾಡುತ್ತಾ ಇಂದಿನ ಶೈಕ್ಷಣಿಕ ಅಧ್ಯಯನವು ಕೌಶಲ್ಯವನ್ನು ಒಳಗೊಂಡು ಆಧುನಿಕ ಸ್ಪದರ್ಾತ್ಮಕ ಯುಗವನ್ನು ಎದುರಿಸಲು ವಿದ್ಯಾಥರ್ಿಗಳನ್ನು ಅಣಿಗೊಳಿಸುವಂತಿರಬೇಕು ಎಂದು ಅಭಿಪ್ರಾಯ ಪಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಡಾ|| ಸಿ.ಎನ್. ನಾಯ್ಕರ ಮಾತನಾಡಿ ಇಂದಿನ ವಿದ್ಯಾಥರ್ಿಗಳು ಬಲವಾದ ನಂಬಿಕೆ ಮತ್ತು ಪ್ರಯತ್ನವನ್ನು ಒಗ್ಗೂಡಿಸಿ ಕಾರ್ಯ ಪ್ರವರ್ತರಾದರೆ ಶೈಕ್ಷಣಿಕ ಯಶಸ್ಸು ಸಾಧ್ಯ ಎಂದು ನುಡಿಯುತ್ತ ಈ ವಾತಾವರಣವನ್ನು ಕಲ್ಪಿಸಿಕೊಡುವ ಉದ್ದೇಶದಿಂದ ನಾಯ್ಕರ ಶಿಕ್ಷಣ ಸಂಸ್ಥೆ ಆರಂಭಗೊಂಡಿದ್ದು ವಿದ್ಯಾಥರ್ಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ನುಡಿದರು. ಇದೇ ಸಂದರ್ಭದಲ್ಲಿ ಡಾ|| ಸಿ.ಎನ್. ನಾಯ್ಕರ ಅವರ ಹುಟ್ಟು ಹಬ್ಬ ಆಚರಿಸಲಾಯಿತು ನಾಯ್ಕರ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಶ್ವೇತಾ ನಾಯ್ಕರ ಉಪಸ್ಥಿತರಿದ್ದರು.
ಆರಂಭದಲ್ಲಿ ರಂಜಿತಾ ಮತ್ತು ತಂಡದವರು ಪ್ರಾಥರ್ಿಸಿದರು, ಪ್ರಾಚಾರ್ಯ ಎಂ.ಐ. ಮುಲ್ತಾನಿ ಸ್ವಾಗತಿಸದರು, ಶ್ರೀಮತಿ ಸುಧಾ ಎಸ್ ಕೆ ಪರಿಚಯಿಸಿದರು, ಶ್ರೀಮತಿ ರಾಜೇಶ್ವರಿ ರಾವ್ ವಂಧಿಸಿದರು ಹಾಗೂ ಶ್ರೀಮತಿ ದೀಪಾ ಎ. ಸಿ. ನಿರೂಪಿಸಿದರು.