ಹೃದಯರೋಗ, ಆರೋಗ್ಯ ಉಚಿತ ತಪಾಸಣಾ ಶಿಬಿರ ಯಶಸ್ವಿ

ಕೊಪ್ಪಳ 16: ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಎಸ್ಡಿಎಮ್ ನಾರಾಯಣ ಹಾಟರ್್ ಸೆಂಟರ್, ಧಾರವಾಡ ಹಾಗೂ ವಾತ್ಸಲ್ಯ ಆಸ್ಪತ್ರೆ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್. 13 ರಂದು ವಕೀಲರ ಸಂಘದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಉಚಿತ ಹೃದಯರೋಗ ಮತ್ತು ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಕೊಪ್ಪಳದ ಹಿರಿಯ ಸಿವಿಲ್ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ. ಶ್ರೀನಿವಾಸ ತಪಾಸಣೆ ಮಾಡಿಸಿಕೊಳ್ಳುವುದರ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ನ್ಯಾಯಾಧೀಶರು, ಕೊಪ್ಪಳ ವಕೀಲರ ಸಂಘದ ಅಧ್ಯಕ್ಷರು, ವಕೀಲರ ಸಂಘದ ಸರ್ವಸದಸ್ಯರು ಹಾಗೂ ಪದಾಧಿಕಾರಿಗಳು ಹಾಗೂ ನ್ಯಾಯಾಲಯದ ಎಲ್ಲ ಸಿಬ್ಬಂದಿ ವರ್ಗದವರು ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಹೆಚ್. ಮುರಡಿ, ಉಪಾಧ್ಯಕ್ಷರಾದ ಜಿ.ಸಿ ಹಮ್ಮಗಿ, ಕಾರ್ಯದರ್ಶಿ  ಬಿ.ವಿ.ಸಜ್ಜನ್, ಜಂಟಿ ಕಾರ್ಯದರ್ಶಿ  ಎಸ್.ಬಿ. ಪಾಟೀಲ್, ಖಜಾಂಚಿಯಾದ ಸುಭಾಸ್ ಹೆಚ್. ಬಂಡಿ, ವಾತ್ಸಲ್ಯ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಎಸ್ಡಿಎಮ್ ನಾರಾಯಣ ಹಾಟರ್್ ಸೆಂಟರ್ನ ವೈದ್ಯಾಧಿಕಾರಿಗಳು ಶಿಬಿರದಲ್ಲಿ ಹಾಜರಿದ್ದರು.

ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ, ಇ.ಸಿ.ಇ. ಮತ್ತು 2-ಡಿ ಇಕೋ ತಪಾಸಣೆ, ಹೃದಯರೋಗದ ಕುರಿತು ವೈದ್ಯರೊಂದಿಗೆ ಸಮಾಲೋಚನೆ ಹಮ್ಮಿಕೊಳ್ಳಲಾಗಿತ್ತು.