ಹುನಗುಂದ 01: ಸತತ ಪ್ರಯತ್ನದಿಂದ ವಿದ್ಯಾರ್ಥಿಗಳು ಯಶಸ್ಸಿನ ಮೆಟ್ಟಲುಗಳನ್ನು ಏರಿ ಕೀತರ್ಿವಂತರಾಗಬಹುದು ಎಂದು ತಹಶೀಲ್ದಾರ ಬಸವರಾಜ ನಾಗರಾಳ ಹೇಳಿದರು.
ಇಲ್ಲಿನ ವ್ಹಿ.ಎಂ.ಕೆ.ಎಸ್.ಆರ್.ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿ.ಎಸ್.ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದ ಎನ್.ಸಿ.ಸಿ ಘಟಕದ ಆಶ್ರಯದಲ್ಲಿ ಜರುಗಿದ ಎನ್.ಸಿ.ಸಿ ಸಾಧಕ ವಿದ್ಯಾರ್ಥಿಗಳ ಸನ್ಮಾನ ಹಾಗೂ ಅಂತಿಮ ವರ್ಷದ ಎನ್ಸಿಸಿ ಕೆಡಟ್ಗಳ ಬೀಳ್ಳೊಡುಗೆ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತ ವಿದ್ಯಾರ್ಥಿ ಜೀವನದಲ್ಲಿ ಸತತ ಪ್ರಯತ್ನ, ಶಿಸ್ತು, ಸಂಯಮ, ಸಮಯಪಾಲನೆ ಮುಂತಾದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದರು.
ಪ್ರಾಚಾರ್ಯ ಶಶಿಕಲಾ ಮಠ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಎನ್.ಸಿ.ಸಿ ತೆಗೆದುಕೊಳ್ಳವದರಿಂದ ಸಾಕಷ್ಟು ಅವಕಾಶಗಳಿವೆ. ಈ ತರಬೇತಿಯಿಂದ ಬದ್ದತೆ ಮತ್ತು ನಾಯತ್ವದ ಗುಣಗಳನ್ನು ಕಲಿತುಕೊಳ್ಳಬಹುದು ಎಂದರು. ಇದೇ ಸಂದರ್ಭದಲ್ಲಿ ಎನ್.ಸಿ.ಸಿ ಕೆಡೆಟ್ಗಳಾದ ಭರಮಣ್ಣ ವತ್ತಿ, ಮಹೇಶಕುಮಾರ ಎಸ್. ದೆಹಲಿಯಲ್ಲಿ ಅಖಿಲ ಭಾರತ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ ಪ್ರಯುಕ್ತ ಸನ್ಮಾನಿಸಲಾಯಿತು. ಹಾಗೂ ಬಸವರಾಜ ನಾಗರಾಳ ತಹಶೀಲ್ದಾರ ಹುನಗುಂದ ಅವರನ್ನು ಮಹಾವಿದ್ಯಾಲಯದ ಪರವಾಗಿ ಸನ್ಮಾನಿಸಲಾಯಿತು. ಡೈರೆಕ್ಟರ್ ಜನರಲ್ ಅಪ್ರಿಶಿಯೇಶನ್ ಅವಾರ್ಡ, ಡೆಪ್ಯೂಟಿ ಡೈರೆಕ್ಟರ್ ಜನರಲ್ ಕಮಾಂಡೇಶನ್ ಅವಾರ್ಡ, ಬೆಸ್ಟ್ ಇನ್ಸ್ಟಿಟುಶನ್ ಎನ್.ಸಿ.ಸಿ ಅವಾರ್ಡ ಹಾಗೂ ಜಿಲ್ಲಾ ರಾಜ್ಯೋತ್ಸವ ಪಡೆದ ಎನ್.ಸಿ.ಸಿ ಅಧಿಕಾರಿ ಲೆಪ್ಟಿನೆಂಟ್ ಎಸ್.ಬಿ. ಚಳಗೇರಿಯವರನ್ನು ಮಹಾವಿದ್ಯಾಲಯದ ಎನ್.ಸಿ.ಸಿ ವಿದ್ಯಾರ್ಥಿಗಳು ಸನ್ಮಾನಿಸಿದರು. ಕಡೆಟ್ಗಳಾದ ಭರಮಣ್ಣ ವತ್ತಿ ಹಾಗೂ ಅಲ್ತಾಫ್ ಹುಸೇನ ಹುನಗುಂದ ಎನ್.ಸಿ.ಸಿ. ಅನುಭವಗಳನ್ನು ಹಂಚಿಕೊಂಡರು.
ಸಂಘದ ನಿರ್ದೇಶಕ ಎಮ್.ಎನ್. ತೆನಿಹಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಜೀವನದಲ್ಲಿ ದೊಡ್ಡ ಗುರಿ ಇರಬೇಕು ಗುರಿ ಇಲ್ಲದ ಜೀವನ ಗರಿ ಇಲ್ಲದ ಹಕ್ಕಿಯಂತೆ ಎಂದರು. ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆ ಮಾಡಿ ಆ ಸಾಧನೆಗೆ ನೆರವಾದವರನ್ನು ಗೌರವದಿಂದ ಕಾಣಬೇಕು ಎಂದು ಹೇಳಿದರು. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಎಚ್.ಎಸ್. ಬೋಳಿಶೆಟ್ಟರ, ಎನ್.ಸಿ.ಸಿ ಕೆಡೆಟ್ಗಳಾದ ಆಲ್ತಾಫ್ ಹುಸೇನ ಹುನಗುಂದ ಹಾಗೂ ಕು.ರಕ್ಷಿತಾ ಕರೆಕೋಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಲೆಪ್ಟಿನೆಂಟ್ ಎಸ್.ಬಿ.ಚಳಗೇರಿಯವರು ಸ್ವಾಗತಿಸಿ,ಪ್ರಾಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನು ಪರಿಚಯಿಸಿದರು. ದಿವ್ಯಾ ಆಲದಿ ಹಾಗೂ ಸಂಗಡಿಗರು ಪ್ರಾರ್ಥನೆ ಗೈದರು. ಎನ್.ಸಿ.ಸಿ ಅಧಿಕಾರಿಗಳಾದ ಫಸ್ಟ್ ಆಫೀಸರಾದ ವಾಯ್.ಕೆ ವಾಲೀಕಾರ ವಂದಿಸಿದರು. ಎಸ್.ಎಸ್. ಮುಡಪಲದಿನ್ನಿಯವರು ಕಾರ್ಯಕ್ರಮ ನಿರೂಪಿಸಿದರು.