ಯಶಸ್ವಿ ಸಂಪನ್ನಗೊಂಡ 'ಸಹ್ಯಾದ್ರಿ ಸ್ವರ ಸಂಭ್ರಮ'

ಲೋಕದರ್ಶನ ವರದಿ

ದಾಂಡೇಲಿ 27:  ನಗರದ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾದ ಸಹ್ಯಾದ್ರಿ ಲಲಿತ ಕಲಾ ಕೇಂದ್ರದ ಸಂಗೀತ ತರಗತಿಯ ವಾಷರ್ಿಕೋತ್ಸವ 'ಸಹ್ಯಾದ್ರಿ ಸ್ವರ ಸಂಭ್ರಮ'  ಕಾರ್ಯಕ್ರಮಲ್ಲಿ ಪ್ರಸ್ತುತಗೊಂಡ ಹಿಂದೂಸ್ಥಾನಿ ಸಂಗೀತದ ಹಾಡುಗಳು ಸೇರಿದ ಪ್ರೇಕ್ಷಕರನ್ನು ರಂಜಿಸಿ, ರಸದೌತಣ ನೀಡುವಲ್ಲಿ ಯಶಸ್ವಿಯಾಗಿತ್ತು. 

ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ಪ್ರ್ರಾಚಾರ್ಯ, ಹಿರಿಯ ಪತ್ರಕರ್ತ ಯು.ಎಸ್. ಪಾಟೀಲ ಮಾತನಾಡಿ ಸಹ್ಯಾದ್ರಿ ಸಂಸ್ಥೆಯು ನಗರದಲ್ಲಿ ಹಲವು ಕಲೆಗಳ ತರಬೇತಿಗಳನ್ನು ನೀಡುತ್ತ ದಾಂಡೇಲಿಯ ಒಂದು ಮಿನಿ ಸಾಂಸ್ಕೃತಿಕ ವಿಶ್ವ ವಿದ್ಯಾಲಯದಂತೆ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ನಗರದ ನೂರಾರು ವಿದ್ಯಾಥರ್ಿಗಳು ನೃತ್ಯ, ಸಂಗೀತ, ಚಿತ್ರಕಲೆಯಂತಹ ಹಲವು ತರಬೇತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದು ಇಂದಿನ ಕಾಲದಲ್ಲಿ ಅತಿ ಅವಶ್ಯವಾಗಿದೆ ಎಂದರು.  

ಮುಖ್ಯ ಅತಿಥಿಗಳಾಗಿದ್ದ ಪದವಿ ಕಾಲೇಜಿನ ಪ್ರಾದ್ಯಾಪಕ, ಲೇಖಕ ಡಾ. ಆರ್.ಜಿ. ಹೆಗಡೆ ಮಾತನಾಡಿ  ಇಂದು ಮಕ್ಕಳಿಗೆ ಲಲಿತಕಲೆಗಳ ಬಗ್ಗೆಯೂ ಆಸಕ್ತಿ ಮೂಡಿಸಬೇಕಾಗಿದೆ. ಇದು ಪಾಲಕರ ಜವಾಬ್ದಾರಿ ಕೂಡಾ. ಕಲೆ, ಸಾಹಿತ್ಯ, ಸಂಗೀತದಿಂದ ಮನಸ್ಸು ಮುದಗೊಳ್ಳುತ್ತದೆ, ಮಾನಸಿಕ ನೆಮ್ಮದಿ ಸಿಗುತ್ತದೆ, ವಿದ್ಯಾಥರ್ಿಗಳು ಚಿಕ್ಕಂದಿನಿಂದಲೇ ಇಂತಹ ಕಲೆಗಳ ಬಗ್ಗೆ ಆಸಕ್ತಿ ಹೊಂದಿದರೆ ಅದು ಅವರ ಸುಂದರ ಬದುಕನ್ನು ರೂಪಿಸುತ್ತದೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ ನಗರದಲ್ಲಿ ಮಕ್ಕಳಿಗೆ ಒಂದು ಸಾಂಸ್ಕೃತಿಕವಾದ ಶಿಕ್ಷಣವನ್ನು ನೀಡಬೇಕೆಂಬ ಆಶಯದೊಂದಿಗೆ ನಮ್ಮ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿಯ ಮಕ್ಕಳಿಗೆ ಅವರ ಆಸಕ್ತಿಗನುಗುಣವಾಗಿ ತರಬೇತಿ ನೀಡಿ ರಾಜ, ರಾಷ್ಟ್ರ ಮಟ್ಟದವರೆಗೂ ಕೊಂಡಯ್ಯಬೇಕೆಂಬುದು ನಮ್ಮ ಮಹತ್ವಾಕಾಂಕ್ಷೆಯಾಗಿದೆ. ಅದಕ್ಕೆ ಪಾಲಕರ ಹಾಗೂ ಸರ್ವರ ಸಹಕಾರದ ಅಗತ್ಯತೆಯಿದೆ ಎಂದರು.  ವೇದಿಕೆಯಲ್ಲಿ ಕೇಂದ್ರದ ಸಂಗೀತ ಗುರುಗಳಾದ ಸುಧಾಮ ದಾನಗೇರಿ, ಖ್ಯಾತ ಹಿಂದುಸ್ಥಾನಿ ಗಾಯಕಿ ವಿದೂಷಿ ವಾಣಿ ರಮೇಶ ಹೆಗಡೆ,  ಹಾಮರ್ೋನಿಯಂ ವಾದಕ ಸತೀಶ ಭಟ್ಟ ಹೆಗ್ಗಾರ,  ತಬಲಾ ವಾದಕ ರಾಜೇಂದ್ರ ಭಾಗ್ವತ ಹೆಬ್ಬಾರ, ಆಶಾಕಿರಣ ಐ.ಟಿ.ಐ ಕಾಲೇಜಿನ ಪ್ರಾಚಾರ್ಯ ಎನ್.ಆರ್. ನಾಯ್ಕ, ಸಮಾಜ ಸೇವಕ ಸುರೇಶ ಕಾಮತ, ಉಪನ್ಯಾಸಕಿ, ಲೇಖಕಿ, ನಾಗರೇಕಾ ಗಾಂವಕರ, ಸಹ್ಯಾದ್ರಿ ಲಲಿತ ಕಲಾ ಕೇಂದ್ರದ ಸಂಯೋಜಕಿ ಜಲಜಾ ಬಿ. ವಾಸರೆ ಉಪಸ್ಥಿತರಿದ್ದರು. 

ಸಂಗೀತ ಗುರುಗಳಾದ ಸುಧಾನ ದಾನಗೇರಿಯವರಿಗೆ ವಿದ್ಯಾಥರ್ಿಗಳು ಗುರುವಂದನೆ ಸಲ್ಲಿಸಿದರು. ಸಹ್ಯಾದ್ರಿ ಲಲಿತ ಕೇಂದ್ರದ ಸಂಯೋಜಕಿ ಜಲಜಾ ಬಿ. ವಾಸರೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ನಾಗರೇಖಾ ಗಾಂವಕರ ನಿರೂಪಿಸಿದರು. ಶಿವಾನಿ ಪಡವಲಕರ ವಂದಿಸಿದರು. 

ಸಂತಾಪ: ಅಗಲಿದ  ಸಿನಿಮಾ ರಂಗದ ಹಿರಿಯ ಕಲಾವಿದ, ಮಾಜಿ ಸಚಿವ ಅಂಬರೀಷ್ ಹಾಗೂ ಮಾಜಿ ಸಚಿವ ಜಾಫರ್ ಷರೀಪ ಅವರಿಗೆ ಸಕ್ಯಾದ್ರಿ ಸಂಸ್ಥೆಯಿಂದ ಮೌನ ಆಚರಿಸಿ, ಶೃದ್ದಾಂಜಲಿ ಸಲ್ಲಿಸಲಾಯಿತು. 

ರಂಜಿಸಿದ ವಾಣಿ ಗಾಯನ; ಪುಟಾಣಿಗಳ ಆಲಾಪನ  : 

ಸಹ್ಯಾದ್ರಿ ಸ್ವರ ಸಂಭ್ರಮ ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಲಲಿತ ಕಲಾ ಕೇಂದ್ರದ ಗುರುಗಳಾದ ಸುಧಾಮ ದಾನಗೇರಿಯವರಿಂದ  ಕೇವಲ ಒಂದು ವರ್ಷಗಳ ಕಾಲ ತರಬೇತಿ ಪಡೆದ ಪುಟಾಣಿ ವಿದ್ಯಾಥರ್ಿಗಳು  ರಾಗ ಭೂಪಾಲಿ, ದುಗರ್ಾ, ಭೀಮಪಲಾಸ್, ಮಾಲಕಂಸ, ಮದುಮಾದಸಾರಂಗ, ಭೀಮ ಪಲಾಸ್, ಭ್ರಂದಾವನಿ ಸಾರಂಗ,  ಶುದ್ದ ಸಾರಂಗ ಮುಂತಾದ ರಾಗಗಳನ್ನು ಸುಶ್ರಾವ್ಯವಾಗಿ ಪ್ರಸ್ತುತ ಪಡಿಸಿ, ಪೃಏಕ್ಷಕರ ಮನ ಗೆದ್ದರು. ನಂತರ ನಾಡಿನ ಖ್ಯಾತ ಹಿಂದುಸ್ಥಾನಿ ಗಾಯಕಿ ಯಲ್ಲಾಪುರದ ವಾಣಿ ರಮೆಶ ಹೆಗಡೆಯವರು ಪ್ರಸ್ತುಯ ಪಡಿಸಿದ ರಾಗ ಪೂರಿಯಾ ಧನಶ್ರೀ, ಭಾಗೇಶ್ರೀ ತರಾನಾ  ಗಾಯನ ಹಾಗೂ ಗುರುಗಳಾದ ಸುಧಾಮ ದಾನಗೇರಿಯವರ ಪಟದೀಪ ಹಾಗೂ ಭೈರವಿ ರಾಗದ ಭಜನೆ ಇಂಪಾಗಿತ್ತು.  ಸತೀಶ ಭಟ್ಟ  ಹೆಗ್ಗಾರ ಹಾಮರ್ೋನಿಯಂ ಸಾಥ್ ನೀಡಿದರೆ,  ರಾಜೇಂದ್ರ ಬಾಗ್ವತ ಹೆಗ್ಗಾರ ತಬಲಾ ಸಾಥ್ ನೀಡಿದ್ದರು.