ಯಶಸ್ವಿ ಜನಸ್ಪಂದನ ಕಾರ್ಯಕ್ರಮ

ಬೆಳಗಾವಿ 04: ಸತತ ಮೂರು ದಿನಗಳಿಂದ ಜನರೊಂದಿಗೆ,  ಬೆರೆತು ನೇರವಾಗಿ ಸಂಬಂಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯುತ್ತಿರುವ "ಜನಸ್ಪಂದನ ಕಾರ್ಯಕ್ರಮ "  ದಕ್ಷಿಣ ಮತಕ್ಷೇತ್ರದ 26 ವಾಡರ್್ ಗಳಲ್ಲಿ  ಅತ್ಯಂತ ಯಶಸ್ವಿಯಾಗಿ ಮೂಡಿ ಬಂದಿತು.  ಜನರ ದೈನಂದಿನ ಸಮಸ್ಯೆಗಳಾದ ನೀರು,  ಒಳಚರಂಡಿ,  ರಸ್ತೆ ನಿಮರ್ಾಣ,  ಕಸ ವಿಲೇವಾರಿ,  ಬೀದಿ ದೀಪಗಳು ಇವುಗಳು ಬಹು ಮುಖ್ಯ ಸಮಸ್ಯೆಗಳಾಗಿ ಕಂಡು ಬಂದವು. 

         ಒಟ್ಟಾರೆ,   942 ಬಂದ ಸಮಸ್ಯೆಗಳ ಅಜರ್ಿ ಗಳಲ್ಲಿ   97 ವಿಷಯಗಳ ಬಗ್ಗೆ ಅಧಿಕಾರಿಗಳ ಸಮ್ಮುಖದಲ್ಲಿ ಶಾಸಕ  ಅಭಯ ಪಾಟೀಲ ರವರು ಪರಿಹಾರ ಒದಗಿಸುವ ಮೂಲಕ ಜನರ ಮನ ಗೆದ್ದರು...!  ಇನ್ನೂಳಿದ ಸಮಸ್ಯೆ  ಕುರಿತಂತೆ ಸ್ವತಂ ಶಾಸಕರು,  ಅಧಿಕಾರಿಗಳ ತಂಡ ಕಟ್ಟಿಕೊಂಡು ನಾಳೆಯಿಂದ  ಬೆಳಿಗ್ಗೆ : 7:00 ಯಿಂದ ಸಂಬಂಧಿಸಿದ ಸಮಸ್ಯೆಗಳ ಸ್ಥಳೀಯ ಪರಿಶೀಲನೆ ಮಾಡುವ ಕಾರ್ಯ ಕೈಗೊಂಡಿದ್ದು,  ಇದು ಕೂಡ ಜನಸಾಮಾನ್ಯರ ಮೆಚ್ಚುಗೆ  ಸಂಗತಿ ಎನ್ನಬಹುದು...,   ಈ ಹೊಸ ಪ್ರಯೋಗದ ಕುರಿತು  ಇಡೀ ಕ್ಷೇತ್ರದ ಜನತೆ ಸಂತಸ ವ್ಯಕ್ತ ಪಡಿಸುವುದಲ್ಲದೇ ಶಾಸಕರ ಕಾರ್ಯ ವೈಖರಿ ಮನೆ ಮನೆ ಮಾತಾಗಿದೆ.  

        ಅಲ್ಲದೇ,  ಶಾಸಕರು ಹೇಳುವಂತೆ,    ಜನರ ಈ ಸಮಸ್ಯೆ ಗಳಿಗೆ ಸಂಪೂರ್ಣ ಪರಿಹಾರ ಸಿಕ್ಕಾಗ ಮಾತ್ರ,  ಈ ಜನಸ್ಪಂದನ ಕಾರ್ಯಕ್ರಮ ಒಂದು ಅರ್ಥ ಪೂರ್ಣ ಕಾರ್ಯಕ್ರಮ, ಹಾಗಾಗಿ ಅಂದುಕೊಂಡಂತೆ,  ಎಲ್ಲಾ ಇಲಾಖೆಗಳ ಅಧಿಕಾರಿಗಳು ಹೆಚ್ಚಿನ ಆಸಕ್ತಿ ವಹಿಸಿ ಜನರ ಸಹಭಾಗಿತ್ವದೊಂದಿಗೆ ಅವರ ಆಶೋತ್ತರಗಳನ್ನು ಈಡೇರಿಸುವತ್ತ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು!   

ಈ ಮೊದಲನೆ ಹೆಜ್ಜೆಯ ಇಡೀ ಕ್ಷೇತ್ರದ ಸವರ್ಾಂಗೀಣ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿಮರ್ಾಣ ವಾಗಬೇಕು, ಒಟ್ಟಾರೆ,  ಜನಸ್ಪಂದನ ಕಾರ್ಯಕ್ರಮ ಜನತೆಯ ಭಾವನೆ ಗಳ ಅವರ ಕಷ್ಟ,  ನೋವುಗಳ ಪರಿಹಾರದ ಅನಾವರಣವಾಗಿ ಜರುಗುತ್ತಿರುವುದು ಖುಷಿ ತಂದಿದೆ.