ಲೋಕದರ್ಶನವರದಿ
ಮುಧೋಳ: ಕುಷ್ಠರೋಗ ಪ್ತೆ ಹಚ್ಚುವ ಅಭಿಯಾನಇದೇ ದಿ.25 ರಿಂದ ಡಿ.11 ವರೆಗೆ ನಡೆಯಲಿದ್ದು, ತಾಲ್ಲೂಕಿನಲ್ಲಿ 64329 ಕುಟುಂಬಗಳನ್ನು ಸಂಪರ್ಕಿಸಲಾಗುವುದು ಇದಕ್ಕಾಗಿ 240 ತಂಡಗಳನ್ನು ರಚಿಸಲಾಗಿದೆ. 480 ಜನರು ಸಮೀಕ್ಷೆ ಮಾಡಲಿದ್ದಾರೆ.48 ಮೇಲ್ವಿಚಾರಕರ ನೇತೃತ್ವದಲ್ಲಿ ನಡೆಯುತ್ತಿದ್ದು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ವೆಂಕಟೇಶ ಮಲಘಾಣ ಹೇಳಿದರು.
ಅವರು ಶನಿವಾರ ನಗರದ ತಾಲ್ಲೂಕು ಆರೋಗ್ಯ ಅಧಿಕಾರಿ ಕಚೇರಿಯಲ್ಲಿ ನಡೆದ ಸಿಬ್ಬಂದಿಗೆ ತರಬೇತಿ ಕಾರ್ಯಾಗಾರ ಹಾಗೂ ಪ್ರಚಾರ ಸಾಮಗ್ರಿ ಬಿಡುಗಡೆಗೊಳಿಸಿ ಮಾತನಾಡಿ ಸಿಬ್ಬಂದಿ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವುದರ ಮೂಲಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಬಿಎಚ್ ಇಒ ಹರಿಶ್ಚಂದ್ರ ಕುಲ್ಲೋಳಿ, ರವೀಂದ್ರ ಹೊಸಗೌಡರ, ಹಿರಿಯಎಚ್.ಐ ಡಿ.ಬಿ.ನಾಗನೂರ ತರಬೇತಿ ನೀಡಿ ಯೋಜನೆ ವಿವರ ತಿಳಿಸಿದರು.
ತಾಲ್ಲೂಕು ಪಂಚಾಯ್ತಿ ಸದಸ್ಯ ಡಾ.ಸಿ.ಎಚ್.ಡೋಣಿ, ಪತ್ರಕರ್ತರಾದ ಉದಯ ಕುಲಕರ್ಣಿ, ಗಣೇಶ ಮೇತ್ರಿ ಉಪಸ್ಥಿತರಿದ್ದರು