ಧಾರವಾಡ 21: ಬರುವ ಫೆಬ್ರವರಿ 15 ರಿಂದ 18 ರವರೆಗೆ ಧಾರವಾಡದಲ್ಲಿ ಕರ್ನಾ ಟಕಕುಸ್ತಿ ಹಬ್ಬ ಆಯೋಜಿಸಲಾಗುವುದು. ಹೆಸರಾಂತ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ಸೇರಿದಂತೆ ಸುಮಾರು ಎರಡು ಸಾವಿರಕ್ಕೂ ಅಧಿಕ ಕುಸ್ತಿಪಟುಗಳು, ತರಬೇತಿದಾರರು ಈ ಹಬ್ಬದಲ್ಲಿ ಭಾಗವಹಿಸಲಿದ್ದಾರೆ. ಲಕ್ಷಾಂತರ ಜನ ಪ್ರೇಕ್ಷಕರು ಕುಸ್ತಿ ವೀಕ್ಷಣೆಗೆ ಆಗಮಿಸುವರು. ಈ ಬೃಹತ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜಿಲ್ಲಾಡಳಿತ ಮತ್ತು ಸ್ಥಳೀಯ ಕುಸ್ತಿ ಪೈಲ್ವಾನರ ಸಂಘಟನೆಗಳು ಶ್ರಮಿಸಬೇಕು ಎಂದು ಶಾಸಕ ಅಮೃತ ದೇಸಾಯಿ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಕರ್ನಾ ಟಕ ಕುಸ್ತಿ ಹಬ್ಬ ಆಯೋಜನೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಧಾರವಾಡಕ್ಕೆ ಉತ್ತಮ ಕ್ರೀಡಾ ಮತ್ತು ಸಾಂಸ್ಕೃತಿಕ ಹಿನ್ನೆಲೆ ಇದೆ.ಇಲ್ಲಿನ ಪರಂಪರೆಯನ್ನು ಉತ್ತುಂಗಕ್ಕೆ ಕೊಂಡೊಯ್ಯುವ ರೀತಿಯಲ್ಲಿ ಕರ್ನಾ ಟಕ ಕುಸ್ತಿ ಹಬ್ಬ ಆಯೋಜನೆ ಅವಕಾಶ ದೊರೆತಿದೆ. ನಾಲ್ಕುದಿನಗಳ ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಬೇಕು. ಜಿಲ್ಲಾಡಳಿತ, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸ್ಥಳೀಯ ಕುಸ್ತಿ ಸಂಘಟನೆಗಳು, ಮಾಜಿ ಪೈಲ್ವಾನರು ಈ ಕೂಟದ ಯಶಸ್ಸಿಗೆ ಶ್ರಮಿಸಬೇಕು. ಕರ್ನಾ ಟಕ ಕುಸ್ತಿ ಹಬ್ಬದಲ್ಲಿ ಕರ್ನಾ ಟಕ ಕೇಸರಿ, ಮಹಿಳಾ ಕೇಸರಿ ಸೇರಿದಂತೆ ವಿವಿಧ ವಿಭಾಗದ ಸ್ಪರ್ಧೆ ಗಳಲ್ಲಿ ವಿಜೇತರಾಗುವ ಕುಸ್ತಿಪಟುಗಳಿಗೆ ಸುಮಾರು 80 ಲಕ್ಷ ರೂ.ನಗದು ಬಹುಮಾನ ವಿತರಿಸಲಾಗುವುದು. ಕುಸ್ತಿ ಹಬ್ಬದ ಆಯೋಜನೆಗೆ 1.2 ಕೋಟಿ ರೂಪಾಯಿ ಮಂಜೂರಾಗಿದೆ ಎಂದರು.
ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಫೆಬ್ರವರಿ ತಿಂಗಳಲ್ಲಿ ಜಿಲ್ಲೆಯಲ್ಲಿ ಇನ್ವೆಸ್ಟ್ ಕರ್ನಾ ಟಕ, ರಾಜ್ಯ ಮಟ್ಟದ ನೌಕರರ ಕ್ರೀಡಾಕೂಟ ಹಾಗೂ ಕರ್ನಾ ಟಕ ಕುಸ್ತಿ ಹಬ್ಬ ಸೇರಿದಂತೆ ಬೃಹತ್ ಕಾರ್ಯಕ್ರಮಗಳನ್ನು ಸಂಘಟಿಸುವ ಜವಾಬ್ದಾರಿ ಇದೆ. ಚುನಾಯಿತ ಪ್ರತಿನಿಧಿಗಳು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರ ಅತ್ಯಗತ್ಯ. ಕುಸ್ತಿಹಬ್ಬದ ಆಯೋಜನೆಗೆ ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಲಾಗುವುದು ಎಂದರು.
ಕೆಸಿಡಿ ಆವರಣಕ್ಕೆ ಭೇಟಿ:
ಕುಸ್ತಿ ಹಬ್ಬ ಆಯೋಜಿಸಲು ಉದ್ದೇಶಿಸಿರುವ ಕರ್ನಾ ಟಕ ಕಲಾ ಹಾಗೂ ವಿಜ್ಞಾನ ಮಹಾವಿದ್ಯಾಲಯಗಳ ಆವರಣ, ಡಯಟ್ ಆವರಣಗಳಿಗೆ ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾ ಹಕ ಅಧಿಕಾರಿ ಡಾ.ಬಿ.ಸಿ.ಸತೀಶ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್, ಎಸಿಪಿ ಎಂ.ಎನ್. ರುದ್ರಪ್ಪ, ಆಹಾರ ಇಲಾಖೆಯ ಜಂಟಿ ನಿರ್ದೇ ಶಕ ಸದಾಶಿವ ಮರ್ಜಿ , ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ.ಡಿ.ನಾಯಕ್, ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಾ ಹಕ ಇಂಜಿನಿಯರ್ ವಿ.ಎನ್.ಪಾಟೀಲ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇ ಶಕ ಶಾಕೀರ್ ಅಹ್ಮದ್ ತೋಂಡಿಖಾನ್ ಸೇರಿದಂತೆ ಮತ್ತಿತರ ಅಧಿಕಾರಿಗಳು, ಕುಸ್ತಿ ಪೈಲ್ವಾನ ಸಂಘಟನೆಗಳ ಪದಾಧಿಕಾರಿಗಳು ಇದ್ದರು.