ಮಂಗಸೂಳಿ ಗ್ರಾಮದ 5 ಆಟಗಾರರ ಯಶಸ್ಸು

ಕಾಗವಾಡ 31: ಇಂಡೋ-ನೇಪಾಳ ಇಂಟರನ್ಯಾಶನಲ್ ಚ್ಯಾಂಪಿಯನಶಿಪ್ ಕಬ್ಬಡ್ಡಿ ಸ್ಪಧರ್ೆಯಲ್ಲಿ ನೇಪಾಳ ದೇಶದ ತಂಡವನ್ನು ಭಾರತ ದೇಶದ ಕಬ್ಬಡ್ಡಿ ಆಟಗಾರರು 13-26 ಅಂಕಗಳಿಂದ ಸೋಲಿಸಿ ಚ್ಯಾಂಪಿಯನಶಿಪ್ ಪಡೆದುಕೊಂಡರು. ಇದರಲ್ಲಿ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ 5 ಆಟಗಾರರು ಯಶಸ್ಸು ತಂದಿದ್ದಾರೆ. ಇವರನ್ನು ಗ್ರಾಮದಲ್ಲಿ ಅದ್ಧೂರಿವಾಗಿ ಸ್ವಾಗತ ಮಾಡಲಾಯಿತು.

ಸೋಮವಾರ ರಂದು ಮಂಗಸೂಳಿ ಗ್ರಾಮದಲ್ಲಿ ಭಾರತೀಯ ತಂಡದ ನೇತೃತ್ವ ವಹಿಸಿದ್ದ ಆಟಗಾರರಾದ ಮಹೇಶ ಮಲ್ಹಾರಿ ಮಾಳಿ, ಪ್ರತೀಕ ಪ್ರಕಾಶ ಇನಾಮದಾರ, ಸಂಚಿತ ಸಂಭಾಜಿ ಪಾಟೀಲ, ವೈಭವ ಶ್ರವಣ ಪಾಟೀಲ, ಓಂಕಾರ ಅಪ್ಪಾಸಾಹೇಬ ನರೂಟೆ ಈ ಆಟಗಾರರನ್ನು ತೆರೆದ ವಾಹನದಲ್ಲಿ ತೆಗೆದುಕೊಂಡು ಗ್ರಾಮದ ಪ್ರಮುಖ ಬಿದಿಗಳಿಂದ ಅದ್ಧೂರಿವಾಗಿ ಮೆರವಣಿಗೆ ಹಮ್ಮಿಕೊಂಡಿದ್ದರು.

ಕಬ್ಬಡ್ಡಿ ಆಟಗಾರರು ಈ ಮೊದಲುಅಕ್ಟೋಬರ್ ತಿಂಗಳಿನಲ್ಲಿ ಗೋವಾದಲ್ಲಿ ನಡೆದ "ಗೋವಾ ನ್ಯಾಶನಲ್ ಕಬ್ಬಡ್ಡಿ ಸ್ಪಧರ್ೆಯಲ್ಲಿ ಗೋವಾ, ಹರಿಯಾಣಾ, ಮಹಾರಾಷ್ಟ್ರಾ ರಾಜ್ಯಗಳ ತಂಡಗಳನ್ನು ಸೋಲಿಸಿ ನೇಪಾಳ ಚ್ಯಾಂಪಿಯಶನಶಿಪ್ಕ್ಕೆ ಆಯ್ಕೆಯಾಗಿದ್ದರು. ನೇಪಾಳ ದೇಶದ ಸ್ಪಧರ್ೆಗಾಗಿ ಕನರ್ಾಟಕ, ಮಹಾರಾಷ್ಟ್ರಾ, ಹರಿಯಾಣಾ ರಾಜ್ಯಗಳ 10 ಆಟಗಾರರು ನೇಪಾಳದಲ್ಲಿ ಸ್ಪಧರ್ಿಸಿದರು. ಇವರಿಗೆ ತರಬೇತಿಗಾರರೆಂದು ಸೌರಭ ಪಾಟೀಲ, ಮಿಷಣ ಆಲಂಪಿಕ್ ಲೀಗ್ ಗೇಮ್ ಆಫ್ ಇಂಡಿಯಾ ಇವರು ತರಬೇತಿ ನೀಡಿದರು.

ಮಂಗಸೂಳಿಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಅಮರ ಪಾಟೀಲ, ಪ್ರಕಾಶ ಇನಾಮದಾರ, ಮಾಜಿ ಆಧ್ಯಕ್ಷ ಬಾಬಾಸಾಹೇಬ ಪಾಟೀಲ, ಪಿಎಲ್ಡಿ ಬ್ಯಾಂಕ್ ಸಂಚಾಲಕ ಭರತ ಮಾಳಿ, ಸದಸ್ಯ ಧೊಂಡಿರಾಮ ವಾಘಮೋಡೆ, ರವೀಂದ್ರ ಮಾಳಿ, ಭರಮು ಮಾಲದಾರ, ಗೋಪಾಲ ಪಾಟೀಲ, ಯಶ್ವಂತ ಖಿಲಾರೆ, ಮನೋಹರ ಮುಲ್ಲಾ, ಪ್ರಕಾಶ ಪರೀಟ್, ಮಲ್ಹಾರಿ ಮಾಳಿ, ಸೇರಿದಂತೆ ಅನೇಕರು ಇದ್ದರು.