ಪ್ರಾಮಾಣಿಕತೆ, ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ: ಬಸವರಾಜಪ್ಪ ಆರ್‌.

Success is possible with honesty, hard work: Basavarajappa R.

ಪ್ರಾಮಾಣಿಕತೆ, ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ: ಬಸವರಾಜಪ್ಪ ಆರ್‌.  

ರಾಯಬಾಗ 03: ಮಕ್ಕಳಿಗೆ ಒಳ್ಳೆಯ ಶಿಕ್ಷಣ ಮತ್ತು ಸಂಸ್ಕಾರ ನೀಡುವುದು ಶಿಕ್ಷಣ ಸಂಸ್ಥೆ ಕಟ್ಟುವವರ ಕನಸಾಗಿರುತ್ತದೆ ಎಂದು ಬಿಇಒ ಬಸವರಾಜಪ್ಪ ಆರ್‌. ಹೇಳಿದರು.  

ಬುಧವಾರ ಪಟ್ಟಣದ ವಿಶ್ವಚೇತನ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಶೈಕ್ಷಣಿಕ ಕ್ಷೇತ್ರದಲ್ಲಿ ಯಶಸ್ಸು ಕಾಣುವುದು ತುಂಬ ಕಷ್ಟ. ಆದರೆ ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದಿಂದ ಯಶಸ್ಸು ಪಡೆಯಲು ಸಾಧ್ಯ ಎಂದರು.  

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಮತ್ತು ಶಿಕ್ಷಕರನ್ನು ಸತ್ಕರಿಸಲಾಯಿತು. ಖುಷಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಚೈತನ ನಾಯಿಕ ಅಧ್ಯಕ್ಷತೆಯನ್ನು ವಹಿಸಿದ್ದರು. ಧಾರವಾಡದ ಅಂತರರಾಷ್ಟ್ರೀಯ ಹಾಸ್ಯ ಕಲಾವಿದ ಮಹಾದೇವ ಸತ್ತಿಗೇರಿ, ಸಿ.ಆರಿ​‍್ಪ ಅನೀಲ ಸುತಾರ, ಮನೋಹರ ಪೂಜಾರಿ, ದೇವಿಕಾ ದೇಸಾಯಿ, ಜಯದೀಪ ದೇಸಾಯಿ, ಅಣ್ಣಪ್ಪ ಕುಂಬಾರ, ಆಶೀಷ ದೇಶಪಾಂಡೆ, ಸುಭಾಷ ನಾಯಿಕ, ರೋಷನ ಬೆಕ್ಕೇರಿ, ಅಣ್ಣಪ್ಪ ಮಗದುಮ್ಮ, ವೃಷಭ ಮಗದುಮ್ಮ, ಭರಮಪ್ಪ ಹುಲ್ಲೋಳ್ಳಿ, ಅರುಣ ಮುರಗುಡೆ, ಸಂತೋಷ ಕುಲಗುಡೆ, ವಿದ್ಯಾ ನಾಯಿಕ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪಾಲಕರು ಇದ್ದರು.