ಸತತ ಅಧ್ಯಯನದಿಂದ ಯಶಸ್ಸು ಸಾಧ್ಯ

ಲೋಕದರ್ಶನವರದಿ

ಗುಳೇದಗುಡ್ಡ,ಫೆ.20: ವಿದ್ಯಾರ್ಥಿಗಳು ಸತತ ಅಧ್ಯಯನ ಮಾಡಿದರೆ ಪರೀಕ್ಷೆಯಲ್ಲಿ ಭಯ ನಿವಾರಣೆಯಾಗಿ ಯಶಸ್ಸು ಗಳಿಸಲು ಸಾಧ್ಯವೆಂದು ಮಾಜಿ ಶಾಸಕ ರಾಜಶೇಖರ ಶೀಲವಂತ ಹೇಳಿದರು. 

  ಅವರು ಇಲ್ಲಿನ ಭಾಗವಾನ ಜಮಾತ್ ಅಭಿವೃದ್ಧಿ ಸಂಘದ 13 ನೇ ವಾರ್ಷಿ ಕೋತ್ಸವದ ಅಂಗವಾಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಅಣುಕು ಸ್ಪರ್ಧೆ ಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿ, ಸಂಘ-ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಇಂತಹ ಸ್ಪರ್ಧೆಗಳನ್ನು ಏರ್ಪಡಿಸಿ ಅವರಲ್ಲಿ ಭಯ ನಿವಾರಿಸಿ ಆತ್ಮವಿಶ್ವಾಸ ಮೂಡಿಸುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಇಂತಹ ಪರೀಕ್ಷೆಗಳನ್ನು ಎದುರಿಸಿದಾಗ ಆತ್ಮವಿಶ್ವಾಸ, ಜ್ಞಾನ ಸಂಪಾದಿಸಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಹಾಗೂ  ವಿವಿಧ ಕೌಶಲ್ಯಗಳನ್ನೂ ಕಲಿಯಲು ಸಾಧ್ಯವಾಗುತ್ತದೆ ಎಂದರು.

     ಸ್ಪರ್ಧೆಯಲ್ಲಿ ವಿಜೇತರಾದ ವಾಣಿಶ್ರೀ ಯಂಡಿಗೇರಿ, ಭಾವನಾ ಕೊಳ್ಳಿ, ಪ್ರಸನ್ನ ದಿಂಡಿ, ಶಿಲ್ಪಾ ಸಂಕನೂರ, ನಾಗರಾಜ ಗೌಡರ್, ಗೀತಾ ಕಂಬಳಿ, ಈರಣ್ಣ ಹಾವಡಿ, ಬಸನಗೌಡ ಗೌಡರ್, ನಮ್ರತಾ ಸಾರಂಗಿ, ವಿರೇಶ ವಿಭೂತಿ ಅವರಿಗೆ ಗೌರವ ಸನ್ಮಾನ ಮಾಡಿ ಬಹುಮಾನ ವಿತರಿಸಲಾಯಿತು.

    ಇದೇ ಸಂದರ್ಭದಲ್ಲಿ ಈಚೆಗೆ ಲಕ್ಷ್ಮೀ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ವಿಜೇತರಾದವರಿಗೂ ಸನ್ಮಾನಿಸಕಲಾಯಿತು. ಸಂಘದ ಅಧ್ಯಕ್ಷ ಹೆಚ್.ಜಿ.ಭಾಗವಾನ ಅಧ್ಯಕ್ಷತೆವಹಿಸಿ ಮಾತನಾಡಿದರು. ಕಲಮಕಿಶೋರ ಮಾಲಪಾಣಿ, ಸಂಘದ ಉಪಾಧ್ಯಕ್ಷ ಇಬ್ರಾಹಿಂ ಭಾಗವಾನ, ಖಾಜಾಸಾಬ ಭಾಗವಾನ ಸೇರಿದಂತೆ ಇತರರು ಇದ್ದರು.