ನಿರಂತರ ಪ್ರಯತ್ನದಿಂದ ಯಶಸ್ಸು ಸಾಧ್ಯ

ಲೋಕದರ್ಶನ ವರದಿ

ಬೆಳಗಾವಿ 23: ಜೀವನದಲ್ಲಿ ಉನ್ನತ ಮಟ್ಟದ ಯಶಸ್ಸನ್ನು ಸಾಧಿಸಲು ಶಕ್ತಿ ಮತ್ತು ಉತ್ಸಾಹಗಳಿರಬೇಕು ಗುರಿ ಮುಟ್ಟಲು ದೃಢ ನಿಷ್ಠೆಯೊಂದಿಗೆ ಮುನ್ನಡೆಯಬೇಕು, ಎಲ್ಲ ಕ್ಷೇತ್ರಗಳಲ್ಲಿ ಕಷ್ಟಗಳು ಬರುವದು ಸಹಜ, ಕೈಗೊಂಡ ಕಾರ್ಯವು ಅಸಾಧ್ಯವೆಂಬುದಾಗಿ ಭಾವಿಸಿ ನಿರುತ್ಸಾಹ ತೊರದೆ ನಿರಂತರ ಪ್ರಯತ್ನದಿಂದ ಯಶಸ್ಸು ಸಾಧಿಸಬೇಕೆಂದು ಬೆಂಗಳೂರಿನ ಎಫ್.ವಿ.ಟಿ.ಆರ್.ಎಸ್ ಸಂಘಟನೆಯ ಉತ್ತರ ವಿಭಾಗದ ಸಂಯೋಜಕಿ ದಿವ್ಯಾ ನೋಯಿಲ್ ಅಭಿಪ್ರಾಯಪಟ್ಟರು.

ಎಫ್.ವಿ.ಟಿ.ಆರ್.ಎಸ್ ಬೆಂಗಳೂರು ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ, ಬೆಳಗಾವಿ ಇವರುಗಳ ಸಂಯುಕ್ತಾಶ್ರಯದಲ್ಲಿ ನಿರುದ್ಯೋಗಿ ಯುವತಿಯರಿಗಾಗಿ ನಗರದ ಭಾರತ ಕಾಲನಿಯ ಮಹಿಳಾ ಕಲ್ಯಾಣ ಸಂಸ್ಥೆ ಸಭಾಗೃಹದಲ್ಲಿ ಆಯೋಜಿಸಿದ್ದ ಉಚಿತ ಹೋಂ ನಸರ್ಿಂಗ ತರಬೇತಿ ಉದ್ಘಾಟಿಸಿ ಮಾತನಾಡಿದರು.

ಯೋಜನಾ ನಿದರ್ೇಶಕಿ ಸುರೇಖಾ ಪಾಟೀಲ ಮಾತನಾಡಿ ನಸರ್ಿಂಗ್ ಪವಿತ್ರ ವೃತ್ತಿಯಾಗಿದ್ದು, ಬಡರೋಗಿಗಳ ಸೇವೆಯ ಮೂಲಕ ಜೀವನದಲ್ಲಿ ಧನ್ಯತೆ ಪಡೆಯಲು ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಕಲ್ಯಾಣ ಸಂಸ್ಥೆಯ ಗೌರವ ಕಾರ್ಯದಶರ್ಿ ವೈಜಯಂತಿ ಚೌಗಲಾ ವಹಿಸಿ ಮಾತನಾಡಿ ಶಾಲೆ ಅರ್ಧಕ್ಕೆ ನಿಲ್ಲಿಸಿದ ಮಹಿಳೆಯರಿಗೆ ಇಂತಹ ವೃತ್ತಿ ತರಬೇತಿ ನೀಡಿ ಸ್ವಾವಲಂಬಿಗಳನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ. ಇವುಗಳ ಪ್ರಯೋಜನಗಳನ್ನು ಪಡೆಯಬೇಕೆಂದರು. ತರಬೇತುದಾರರಾದ ಶಶಿಕಲಾ ಕಟ್ಟಿಮನಿ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಂತೋಷ ಬಡಿಗೇರ ವಂದಿಸಿದರು.