ಬೆಳಗಾವಿ: ಸತತ ಪ್ರಯತ್ನದಿಂದ ಯಶಸ್ಸು ಸಿಗುವುದು

ಲೋಕದರ್ಶನ ವರದಿ

ಬೆಳಗಾವಿ 06:  ನಗರದ ನಾಯ್ಕರ ಶಿಕ್ಷಣ ಸಂಸ್ಥೆಯ ರವೀಂದ್ರನಾಥ ಠಾಗೋರ ಪದವಿ-ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ  ಶನಿವಾರ ದಿ 04ರಂದು "2019-20 ನೇ ಸಾಲಿನ ವಾಷರ್ಿಕ ದಿನಾಚರಣೆ ಮತ್ತು ಪಾರಿತೋಷಕ ವಿತರಣಾ ಸಮಾರಂಭ ಜರುಗಿತು. 

     ಸಮಾರಂಭಕ್ಕೆ  ಮುಖ್ಯ ಅತಿಥಿಗಳಾಗಿ ಖ್ಯಾತ ರಣಜಿ ಕ್ರಿಕೆಟಗ ಮತ್ತು ಬಿಗ್ ಬಾಸ್ 3ನೇ ಆವೃತ್ತಿಯ ಸ್ಪಧರ್ಿ ಎನ್.ಸಿ.ಅಯ್ಯಪ್ಪ ಇವರು ಆಗಮಿಸಿದ್ದರು. ವಿದ್ಯಾಥರ್ಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ವಿದ್ಯಾಥರ್ಿಗಳಿಗೆ  ಸತತ ಪ್ರಯತ್ನದಿಂದಲೇ ಯಶಸ್ಸು ಸಿಗುವುದು ಹೊರತು ಪ್ರತಿಭೆ ಮತ್ತು ಅದೃಷ್ಟವನ್ನೆ ಅವಲಂಬಿಸಿ ಇರಲಾಗದು.. ಶೈಕ್ಷಣಿಕವಾಗಿ ಸಾಧನೆ ಮಾಡಿದಾಗ ಉತ್ತಮ ಭವಿಷ್ಯ ನಿಮರ್ಾಣವಾಗುತ್ತದೆ. ವಿದ್ಯಾಥರ್ಿಗಳು ಜೀವನದಲ್ಲಿ ಸಕಾರಾತ್ಮಕವಾಗಿ ವಿಚಾರಮಾಡಿ ಶ್ರಮಿಸಿದಾಗ ಗುರಿ ತಲುಪಲು ಸಾಧ್ಯವಾಗುತ್ತದೆ. ಎಂದು ಕರೆ ನೀಡಿದರು. ಮುಂದುವರೆದು ಮಾತನಾಡುತ್ತಾ, ನಾಯ್ಕರ್ ಶಿಕ್ಷಣ ಸಂಸ್ಥೆಯು ಶೈಕ್ಷಣಿಕವಾಗಿ ಸಾಂಸ್ಕ್ರತಿಕವಾಗಿ ಸರ್ವತೋಮುಖ ಬೆಳವಣಿಗೆ ಹೊಂದುತ್ತಿರುವುದು ಅಭಿಮಾನದ ಸಂಗತಿ. ಮತ್ತು ಈ ಸಂಸ್ಥೆಯು ಬರಲಿರುವ ದಿನಗಳಲ್ಲಿ ಒಂದು ಅತ್ಯುತ್ತಮ ಸಂಸ್ಥೆಯಾಗಲೆಂದು ಶುಭ ಹಾರೈಸಿದರು.   

                  ಸಮಾರಂಬದ ಅಧ್ಯಕ್ಷತೆ ವಹಿಸಿದ್ದ ನಾಯ್ಕರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ.ಸಿ.ಎನ್.ನಾಯ್ಕರ ಅವರು ಮಾತನಾಡುತ್ತಾ, ವ್ಯಕ್ತಿ ,ವೃತ್ತಿ ಹಾಗೂ ಉಪಯೋಗಕ್ಕೆ ಅನುಗುಣವಾಗಿ ವಸ್ತುವಿಗೆ ಬೆಲೆ ಬರುತ್ತದೆ. ಉತ್ತಮ ಪಾಲಕರು- ಶಿಕ್ಷಕರು-ಆಡಳಿತಾಧಿಕಾರಿಗಳಿಂದ ಕೂಡಿದ ವಿದ್ಯಾಥರ್ಿಗಳ ಭವಿಷ್ಯ ಉತ್ತಮವಾಗುತ್ತದೆ. ಸಮಸ್ಯೆಗಳು ವ್ಯಕ್ತಿಯ ಜೀವನದಲ್ಲಿ ಹೆಜ್ಜೆ ಮೂಡಿಸಿ ಹೊರಟು ಹೋಗುತ್ತವೆ. ಸಮಸ್ಯೆಗಳು ತಾತ್ಕಾಲಿಕ, ಶಾಶ್ವತವಲ್ಲ. ಧೈರ್ಯ ವಿದ್ದರೆ ಸವಾಲುಗಳು ಪರಿಹಾರವಾಗುತ್ತವೆ. ವಿದ್ಯಾಥರ್ಿಗಳು ಜೀವನದಲ್ಲಿ ಸಕಾರಾತ್ಮಕವಾಗಿ ವಿಚಾರಮಾಡಿ ಶ್ರಮಿಸಿದಾಗ ಗುರಿ ತಲುಪಲು ಸಾಧ್ಯವಾಗುತ್ತದೆ. ಸಂಸ್ಥೆಯು ಅತ್ಯುನ್ನತ ಗುರಿ ಧೇಯೋದ್ದೇಶಗಳನ್ನು ಗುರಿ ತಲುಪಲು ಅವಿರತವಾಗಿ ಶ್ರಮಿಸುತ್ತಿದೆ ಎಂದು ನುಡಿದರು.

        ಕಾರ್ಯಕ್ರಮದ ವೇದಿಕೆಯ ಮೇಲೆ ನಾಯ್ಕರ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಶ್ವೇತಾ ಸಿ. ನಾಯ್ಕರ ಹಾಗೂ ಗುಡ್ ಶೆಪರ್ಡ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲ ಎಮ್.ಎಮ್. ಮುಲ್ತಾನಿ  ಅವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಎಮ್.ಎಮ್. ಮುಲ್ತಾನಿ ಸ್ವಾಗತಿಸಿದರು. ಸುಚಿತ್ರಾ ಯಾದವ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ದೀಪಾ ವರದಿ ವಾಚನ ಮಾಡಿದರು. ರಾಜೇಶ್ವರಿ ರಾವ್ ವಂದಿಸಿದರು. ಕೀತರ್ಿ ಗಂಗಯಿ ಕಾರ್ಯಕ್ರಮ ನಿರೂಪಿಸಿದರು. 2019-20 ನೇ ಸಾಲಿನ ಅತ್ಯುತ್ತಮ ವಿದ್ಯಾಥರ್ಿ ಎಂದು ಕುಮಾರ. ಚೇತನ ತರಕಾರ ಮತ್ತು ಅತ್ಯುತ್ತಮ ವಿದ್ಯಾಥರ್ಿನಿ ಎಂದು ನೇಹಾ ಮೆಳವಂಕಿ ಅವರನ್ನು ಘೋಷಿಸಲಾಯಿತು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾಥರ್ಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.