ಲೋಕದರ್ಶನವರದಿ
ಕಂಪ್ಲಿ.18 ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಘೋಷಣೆಯಾದ 5ಸಾವಿರ ರೂಪಾಯಿಗಳನ್ನು ಎಲ್ಲ ಕಾಮರ್ಿಕರ ಖಾತೆಗೆ ವಗರ್ಾವಣೆ ಮಾಡಬೇಕು ಎಂದು ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಷನ್ ತಾಲೂಕು ಅಧ್ಯಕ್ಷ ಹೊನ್ನೂರಸಾಬ ಆಗ್ರಹಿಸಿದರು. ತಹಸೀಲ್ದಾರ್ ಎಂ.ರೇಣುಕಾ ಅವರಿಗೆ ಸೋಮವಾರ ಮನವಿ ಸಲ್ಲಿಸಿ, ಕೆಲ ಕಾಮರ್ಿಕರಿಗೆ ಸಹಾಯ ಧನ ಜಮೆಯಾಗಿದ್ದು, ಹಲವರಿಗೆ ಜಮೆಯಾಗಿಲ್ಲ. ಎಲ್ಲ ಕಾಮರ್ಿಕರ ಖಾತೆಗೂ ಜಮೆಯಾಗಬೇಕು. ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಬೆಲೆ ನಿಯಂತ್ರಿಸಬೇಕು. ವಲಸೆ ಕಾಮರ್ಿಕರ ಬದುಕನ್ನು ರಕ್ಷಿಸಬೇಕು, ಅವರ ಮೂಲ ಸ್ಥಳಗಳಿಗೆ ತೆರಳಲು ಉಚಿತ ರೈಲು ವ್ಯವಸ್ಥೆ ಮಾಡಿಕೊಡಬೇಕು. ಮೃತಪಟ್ಟ ವಲಸೆ ಕಾರ್ಮಿಕ ಕುಟುಂಬಗಳಿಗೆ 10ಲಕ್ಷ ರೂ.ಗಳ ಪರಿಹಾರ ನೀಡಬೇಕು. ಎಲ್ಲ ಕಟ್ಟಡ ಕಾಮರ್ಿಕರಿಗೆ ಮೂರು ತಿಂಗಳು ಉಚಿತ ರೇಷನ್ ಕಿಟ್ ಒದಗಿಸಬೇಕು. ಕಾರ್ಮಿಕ ಕಾನೂನುಗಳ ತಿದ್ದುಪಡಿ, ಅಮಾನತ್ ಪ್ರಸ್ತಾಪಗಳನ್ನು ಕೈಬಿಡಬೇಕು. ಎಪಿಎಂಸಿ ಕಾಯ್ದೆ ತಿದ್ದುಪಡಿ ಮತ್ತು ಖಾಸಗೀಕರಣ ಕೈಬಿಡಬೇಕು. ಆನಂದ್ ತೇಲ್ತುಂಬೆ ಸೇರಿ ಪ್ರಗತಿಪರ ಚಿಂತಕರನ್ನು ಬಂದಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ಸಂಚಾಲಕ ಬಂಡಿ ಬಸವರಾಜ, ರಾಜ್ಯ ಕಟ್ಟಡ ಮತ್ತು ಇತರ ನಿಮರ್ಾಣ ಕಾಮರ್ಿಕರ ಫೆಡರೇಷನ್ ಪದಾಧಿಕಾರಿಗಳಾದ ಆರ್.ನಾಗರಾಜ, ಭೀಮಣ್ಣ, ಚಂದ್ರಶೇಖರ್, ನಾಗರಾಜ, ಬಿ.ನಾರಾಯಣಪ್ಪ, ಅಮರೇಶ್, ಶೇಖರ್, ರವಿ, ರಾಜಭಕ್ಷಿ, ಪ್ರಕಾಶ್, ರಾಘವೇಂದ್ರ ಇತರರಿದ್ದರು.