ಮೋದಿ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಸುಬ್ರಹ್ಮಣ್ಯನ್ ಸ್ವಾಮಿ ವಾಗ್ದಾಳಿ

ನವದೆಹಲಿ ಅ, 14:       ನರೇಂದ್ರ ಮೋದಿ ನೇತೃತ್ವದ ಆರ್ಥಿಕ ನೀತಿಗಳ ನಿರಂತವಾಗಿ ವಾಗ್ದಾಳಿ ಮಾಡುತ್ತಿರುವ ಸ್ವಪಕ್ಷಿಯರೇ ಆದ ಬಿಜೆಪಿ ಹಿರಿಯ  ಮುಖಂಡ ಡಾ. ಸುಬ್ರಹ್ಮಣ್ಯನ್ ಸ್ವಾಮಿ ಆರ್ಥಿಕ ಕುಸಿತ ಇಲ್ಲ ಎಂದು ನಿರಾಕರಿಸುತ್ತಿರುವ ಸಚಿವರಿಗೆ  ವಿವೇಚನೆಯೂ ಇಲ್ಲ  ದೂರದೃಷ್ಟಿಯೂ ಇಲ್ಲ ಎಂದು ಬಲವಾಗಿ ಟೀಕಿಸಿದ್ದಾರೆ.   " ಬಟ್ಟೆ ಧರಿಸದಿರುವುದು [ನಗ್ನತೆ] ಯಾರಿಗೆ ಕಾಣಿಸುತ್ತಿಲ್ಲವೋ ಅಂತಹವರ ಹೇಳಿಕೆ ಕೂಡಾ ಅನಗತ್ಯ ಮತ್ತು ಅಪ್ರಸ್ತುತವಾಗುತ್ತದೆ " ಎಂದು  ಅವರು ಟ್ವೀಟರ್ ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ದೇಶದ ಆರ್ಥಿಕ ಸಂಕಷ್ಟ ಹೆಚ್ಚಾಗುತ್ತಿದ್ದು ಗ್ರಾಹಕ ಬೇಡಿಕೆ ಗಣನೀಯವಾಗಿ ಕುಸಿದಿದೆ ಎಂದು ಅರ್ಬಿಐ ಅಂಕಿ ಅಂಶಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ  ವರದಿ ಮಾಡಿದ ಬೆನ್ನಲ್ಲೆ  ಸ್ವಾಮಿ ಅವರು ಹೇಳಿಕೆ ಹೊರಬಿದ್ದಿದೆ . ದೇಶದಲ್ಲಿ  ಆರ್ಥಿಕ ಹಿಂಜರಿತ ಇಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅಲ್ಲಗಳೆದ ಕೆಲವೇ ಗಂಟೆಗಳ   ಅವಧಿಯಲ್ಲಿ ಸ್ವಾಮಿ  ಅವರು ಮೋದಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ.