ವಿಜಯಪುರ 18: ಬರ ಪರಿಸ್ಥಿತಿಯಿಂದ ಹಾನಿಯಾದ ಬೆಳೆಗಳ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರ ಸಕರ್ಾರ ಬರ ಅಧ್ಯಯನ ತಂಡ ನೇಮಿಸಿದ್ದು, ರಾಷ್ಟ್ರೀಯ ಪ್ರಕೃತಿ ವಿಕೋಪ ನಿರ್ವಹಣಾ (ಎನ್ಡಿಆರ್ಎಫ್) ಮಾರ್ಗಸೂಚಿಯನ್ವಯ ಪರಿಹಾರ ದೊರಕಿಸಲು ಅನುಕೂಲವಾಗುವಂತೆ ಬೆಳೆ ಹಾನಿ ವರದಿಯನ್ನು ಬರುವ ಏಳು ದಿನಗಳಲ್ಲಿ ಕೇಂದ್ರ ಸಕರ್ಾರಕ್ಕೆ ಸಲ್ಲಿಸುವುದಾಗಿ ಸೆಂಟ್ರಲ್ ಪೊಲ್ಟ್ರಿ ಡೆವಲಪ್ಮೆಂಟ್ ಆರ್ಗನೈಜೇಶ್ನ್ ಹಾಗೂ ಟ್ರೇನಿಂಗ್ ಇನ್ಸ್ಟಿಟ್ಯೂಶನ್ ನಿದರ್ೇಶಕರು ಹಾಗೂ ತಂಡದ ಮುಖ್ಯಸ್ಥರಾದ ಡಾ.ಮಹೇಶ ಅವರು ತಿಳಿಸಿದರು.
ಜಿಲ್ಲೆಯ ಕೊಲ್ಹಾರ ನಂತರ ಹೊನಗನಹಳ್ಳಿಯಲ್ಲಿಂದು ಸೂರ್ಯಕಾಂತಿ ಹಾಗೂ ತೊಗರಿ ಬೆಳೆ ಹಾನಿ ಕುರಿತು ಪರಿಶೀಲನೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಕರ್ಾರ ಬರದಿಂದ ಹಾನಿಗೊಳಗಾದ ಬೆಳೆ ಪರಿಶೀಲನೆಗಾಗಿ ಕೇಂದ್ರ ಬರ ಅಧ್ಯಯನ ತಂಡ ರಚಿಸಿದ್ದು, ಅದರನ್ವಯ ಇಂದು ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಲಾಗುತ್ತಿದೆ. ವಸ್ತುಸ್ಥಿತಿ ನೋಡಿದಾಗ ರೈತರು ತೀವ್ರ ನಷ್ಟವನ್ನು ಅನುಭವಿಸುತ್ತಿದ್ದು, ಕೃಷಿ, ತೋಟಗಾರಿಕೆ, ಪಶು ಸಂಗೋಪನೆಗೆ ಸಂಬಂಧಪಟ್ಟಂತೆ ಹಾನಿ ಹಾಗೂ ನೀರಿನ ಸಮಸ್ಯೆಗಳ ಪರಿಹಾರಕ್ಕೆ ಕೈಗೊಳ್ಳಲಾಗುವ ಕ್ರಮಗಳ ಕುರಿತಂತೆ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.
ತೀವ್ರ ಬರ ಇರುವ ಹಿನ್ನಲೆಯಲ್ಲಿ ಜಿಲ್ಲೆಯ ತೊಗರಿ ಬೆಳೆ, ಸೂರ್ಯಕಾಂತಿ, ಕಡಲೆ ಬೆಳೆ ಹಾನಿಯಾಗಿರುವ ಬಗ್ಗೆ ಪರಿಶೀಲಿಸಲಾಗಿದೆ. ಅದರಂತೆ ಇತರೆ ಬೆಳೆಗಳ ಹಾನಿ ಕುರಿತಂತೆ ರೈತರು ಕೂಡ ಗಮನಕ್ಕೆ ತಂದಿದ್ದಾರೆ. ಗ್ರೌಂಡ್ ಟ್ರೂಥ್ ಆ್ಯಪ್ ಮೂಲಕವೂ ಸಹ ಬೆಳೆ ಹಾನಿ ಕುರಿತಂತೆ ಪರಿಶೀಲಿಸಲಾಗುತ್ತಿದ್ದು, ಬೆಳೆ ಹಾನಿಗೆ ಸಂಬಂಧಪಟ್ಟಂತೆ ಸೂಕ್ತ ಪರಿಹಾರ ಕಲ್ಪಿಸುವ ಕುರಿತಂತೆ ಹಾಗೂ ಬೆಳೆ ಹಾನಿಯ ಕುರಿತ ಸಮಗ್ರ ವರದಿಯನ್ನು ಮುಂಬರುವ ವಾರದಲ್ಲಿ ಕೇಂದ್ರ ಸಕರ್ಾರಕ್ಕೆ ಸಲ್ಲಿಸಲಿದ್ದು, ಶೀಘ್ರದಲ್ಲಿಯೇ ರಾಜ್ಯ ಸಕರ್ಾರ ಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ಸಭೆಯನ್ನು ಸಹ ನಡೆಸಲಾಗುತ್ತದೆ ಎಂದು ಹೇಳಿದರು.
ಬರ ಅಧ್ಯಯನ ತಂಡವು ಇಂದು ಕೊಲ್ಹಾರ, ಹೊನಗನಹಳ್ಳಿ, ಜುಮನಾಳ, ಮದಭಾವಿ, ಹಿಟ್ನಳ್ಳಿ ಗ್ರಾಮಗಳಲ್ಲಿ ಬರದಿಂದ ಹಾನಿಗೊಳಗಾದ ಕೃಷಿ ಹಾಗೂ ತೋಟಗಾರಿಕೆ ಬೆಳೆ, ಪಶು ಸಂಗೋಪನೆ ಕುಡಿಯುವ ನೀರಿನ ವ್ಯವಸ್ಥೆಗಳ ಮತ್ತು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿತು. ಆಲಮಟ್ಟಿಯಲ್ಲಿ ಪಿಪಿಟಿ ಮೂಲಕ ಅಧಿಕಾರಿಗಳಿಂದ ಜಿಲ್ಲೆಯ ಸಮಗ್ರ ಹಾನಿಯ ಕುರಿತು ಮಾಹಿತಿ ಪಡೆಯಲಿದ್ದು, ಈಗಾಗಲೇ ಜಿಲ್ಲಾಧಿಕಾರಿಗಳ ಮೂಲಕ ಬೆಳೆ ಹಾನಿಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ವರದಿಯನ್ವಯ ಬೆಳೆಹಾನಿಯ ಪರಿಶೀಲನೆ ನಡೆಸಿ, ಸಮಗ್ರ ವರದಿ ರೂಪಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಂಡದ ಸದಸ್ಯರಾದ ಕೇಂದ್ರ ಗ್ರಾಮೀಣಾಭಿವೃದ್ದಿ ಸಚಿವಾಲಯದ ಉಪ ಕಾರ್ಯದಶರ್ಿ ಶ್ರೀಮತಿ ನೀತಾ ತೆಹಲಾನಿ, ಕೇಂದ್ರ ಜಲ ಆಯೋಗದ ನಿದರ್ೇಶಕರಾದ (ಸಿಡಬ್ಲೂಸಿ) ಓ.ಆರ್.ಕೆ.ರೆಡ್ಡಿ, ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ, ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನ, ಜಿಲ್ಲಾ ಪಂಚಾಯತ್ ಉಪ ಕಾರ್ಯದಶರ್ಿ ದುರಗೇಶ ರುದ್ರಾಕ್ಷಿ, ಜಿ.ಪಂ. ಮುಖ್ಯ ಯೋಜನಾಧಿಕಾರಿ ಕುಂಬಾರ, ಕೃಷಿ ಇಲಾಖೆ ಜಂಟಿ ನಿದರ್ೇಶಕ ಶಿವಕುಮಾರ, ಉಪನಿದರ್ೇಶಕ ರಾಜಶೇಖರ ವಿಲಿಯಮ್ಸ್, ತೋಟಗಾರಿಕೆ ಇಲಾಖೆ ಉಪನಿದರ್ೇಶಕ ಸಂತೋಷ ಇನಾಂದಾರ ಹಾಗೂ ಪಶು ಸಂಗೋಪನಾ ಇಲಾಖೆ ಉಪನಿದರ್ೇಶಕ ಪ್ರಾಣೇಶ ಜಾಗೀರದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.