ಮಹಾಲಿಂಗಪುರ 18: ವೃತ್ತಿಪರ ನೇಕಾರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರಾಜ್ಯ ನೇಕಾರ ಸಂಘದ ವತಿಯಿಂದ ಪುರಸಭಾ ಮುಖ್ಯಾಧಿಕಾರಿಯ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ನೇಕಾರಿಕೆಯನ್ನು ಗುಡಿ ಕೈಗಾರಿಕೆ ಎಂದು ಘೋಷಿಸಿ ಅಂತರಾಷ್ಟ್ರೀಯ ಮಾನ್ಯತೆ ನೀಡುವುದು, ಶೇ. 33 ರಷ್ಟು ನೇಕಾರರಿಗೆ ಕಾರ್ಮಿಕ ಸೌಲಭ್ಯ, ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ, ನೆರೆ ಸಂತ್ರಸ್ತ ನೇಕಾರರಿಗೆ ಶಾಶ್ವತ ಪರಿಹಾರ, ನೇಕಾರರ 431.25 ಕೋಟಿ ರೂ. ನ ಪ್ರಸ್ತಾವನೆ ಜಾರಿ, ಕೆಎಚ್ ಡಿಸಿಗೆ ಆವೃತ್ತ ನಿಧಿ, ಸರಕಾರಿ ತಾಂತ್ರಿಕ ಜವಳಿ ಸಂಸ್ಥೆ ಆರಂಭ, 52 ಎಕರೆ ಎಕರೆಯಲ್ಲಿ ವಾಸವಿರುವ 400 ಕುಟುಂಬಗಳಿಗೆ ಸಿಟಿಎಸ್ ಉತಾರ, ನೆರೆ ಸಂತ್ರಸ್ತರ ಒಂದು ಕೈಮಗ್ಗಕ್ಕೆ ರೂ. 50 ಸಾವಿರ ಪರಿಹಾರ, ಬೆಂಗಳೂರಿನ ತಾಂತ್ರಿಕ ವಿದ್ಯಾಲಯದ ಸುಧಾರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ , ರಾಜ್ಯ ನೇಕಾರರ ಸಂಪೂರ್ಣ ಸಮಸ್ಯೆ ಚರ್ಚೆ ಸಲು ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ನೀಡದೇ ಇರುವುದನ್ನು ಖಂಡಿಸಿ, ಜ. 21 ರಂದು ಬೆಂಗಳೂರು ವಿಧಾನಸೌಧದ ಎದುರು ಬೃಹತ್ ಪ್ರತಿಭಟನೆ ನಡೆಸುವ ಕುರಿತು ಸ್ಥಳೀಯ ಪುರಸಭಾ ಮುಖ್ಯಾಧಿಕಾರಿ ಬಾಬುರಾವ್ ಕಮತಗಿ ಅವರ ಮೂಲಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ , ರಾಷ್ಟ್ರೀಯ ವಿನಕರ ಸೇವಾ ಸಂಘದ ರಾಜ್ಯ ಸಂಚಾಲಕ ಶಿವಲಿಂಗ ಟಿರಕಿ ನೇತೃತ್ವದಲ್ಲಿ ಮನವಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ನೇಕಾರ ಜಗದ್ಗುರುಗಳು ಭಾಗವಹಿಸುವುದಾಗಿ ತಿಳಿಸಿದ ಅವರು ಸ್ಪಂದಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆಯನ್ನೂ ನೀಡಿದರು.
ಚನ್ನಪ್ಪ ಹುಣಶ್ಯಾಳ, ರಾಜೇಂದ್ರ ಮಿಜರ್ಿ, ಭರತ ಕದ್ದಿಮನಿ, ಮಹಾಲಿಂಗಪ್ಪ ಅಂಬಿ, ಸದಾಶಿವ ಲಂಗೋಟೆ ಇತರರು ಇದ್ದರು.