ಕಾಗವಾಡ 04: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಗಿರುವ ಹಿನ್ನಡೆ ಕೇವಲ ಪಕ್ಷದಲ್ಲಿಯ ಭಿನ್ನಾಭಿಪ್ರಾಯೇ ಕಾರಣವೆಂದು ರಾಜ್ಯ ಸತ್ಯ ಶೋಧನಾ ಸಮೀತಿ ಸದಸ್ಯರು, ಹಾಗೂ ಮಾಜಿ ಇಂಧನ ಸಚಿವರು ವೀರಕುಮಾರ ಪಾಟೀಲ ಕಾಗವಾಡದಲ್ಲಿ ಹೇಳಿದರು.
ಬುಧವಾರ ರಂದು ಕಾಗವಾಡದಲ್ಲಿ ಕಾರ್ಯಕ್ರಮದ ನಿಮಿತ್ಯವಾಗಿ ಆಗಮಿಸಿದಾಗ ಪಕ್ಷದ ಚಟುವಟಿಕೆಗಳ ಬಗ್ಗೆ ಸತ್ಯ ಶೋಧನಾ ಸಮೀತಿ ಸದಸ್ಯರು, ರಾಜ್ಯದ ಕಾಂಗ್ರೆಸ್ ಪಕ್ಷದ ಆಧ್ಯಕ್ಷ ದಿನೇಶ ಗುಂಡುರಾವ ಇವರಿಗೆ ಸಮಿಕ್ಷಾ ವರದಿ ಸಲ್ಲಿಸಿದ್ದ ಬಗ್ಗೆ ಮಾಹಿತಿ ನೀಡಿದರು.
ಸತ್ಯ ಶೋಧನಾ ಸಮೀತಿಯ ಸದಸ್ಯರಾಗಿ ಮಾಜಿ ಸಚಿವ ರಾಯರೆಡ್ಡಿ, ಮಾಜಿ ಸಭಾಪತಿಗಳಾದ ವೀರಣ್ಣಾ ಮತ್ತಿಕಟ್ಟಿ, ಸುದರ್ಶನ ಇವರೊಂದಿಗೆ ನಾನು ಒಬ್ಬಸಮೀತಿಯ ಸದಸ್ಯನಾಗಿದ್ದೆ.
ದೇಶದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ 28 ಸ್ಥಾನಗಳ ಪೈಕಿ ಒಂದೇ ಸ್ಥಾನದಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಸಾಧಿಸಿದೆ. ಈ ಬಗ್ಗೆ ಎಲ್ಲ ಎಂಪಿ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಪಕ್ಷದ ಕಾರ್ಯಕರ್ತರನ್ನು ಸಮಕ್ಷವಾಗಿ ಭೇಟಿನೀಡಿ ಚರ್ಚಿಸಿದಾಗ ಪಕ್ಷದ ಆಂತರಿಕ ಕಲಹೆ ಕಾರಣವೆಂದು ಗುರುತಿಸಲಾಗಿದೆ. ಪಕ್ಷದ ಹಿರಿಯರು ಶೀಘ್ರದಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡು ಪಕ್ಷದ ಒಗ್ಗಟ್ಟಿಗಾಗಿ ಗ್ರಾಮಗಳ ಭೂತ ಮಟ್ಟಗಳಿಂದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗಟ್ಟಿಗೊಳಿಸುವ ಜವಾಬ್ದಾರಿ ಮುಖಂಡರು ಹೊಂದಿದ್ದಾರೆಯೆಂದು ಮಾಜಿ ಸಚಿವ ವೀರಕುಮಾರ ಪಾಟೀಲ ಹೇಳಿದರು.