ಜಿಲ್ಲಾಧಿಕಾರಿಗಳಿಂದ ಸರ್ಕಾರಕ್ಕೆ ನೆರೆ ಹಾನಿ ವರದಿ ಸಲ್ಲಿಕೆ: ಚೋಳನ್

ಹಾವೇರಿ: ಅತಿವೃಷ್ಠಿ ಹಾಗೂ ನೆರೆಯಿಂದ ಬಾಧಿತವಾಗಿರುವ ಬೆಳಗಾವಿ ವಿಭಾಗದ ವಿವಿಧ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾನಿಯ ವಿವರವನ್ನು ಸಕರ್ಾರಕ್ಕೆ ಸಲ್ಲಿಸಿದ್ದಾರೆ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಎಂ.ದೀಪಾ ಚೋಳನ್ ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ತರುವಾಯು ಭೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ವಿಭಾಗದ ಜಿಲ್ಲೆಯಗಳ ನೆರೆ ಹಾಗೂ ಅತಿವೃಷ್ಠಿಯ ಕ್ರೂಢೀಕೃತ ಹಾನಿಯ ವರದಿ ಸಲ್ಲಿಕೆ ವ್ಯವಸ್ಥೆಯ ಬದಲಾಗಿ ಆಯಾ ಜಿಲ್ಲೆಯ ಹಾನಿಯ ವಿವರ, ನಷ್ಟದ ಮೊತ್ತ ಹಾಗೂ ಪರಿಹಾರಕ್ಕೆ ಬೇಕಾದ ಅನುದಾನವನ್ನು ಸಕರ್ಾರಕ್ಕೆ ಸಲ್ಲಿಸಲಾಗುವುದು. ಈಗಾಗಲೇ ಎಲ್ಲ ಜಿಲ್ಲಾಧಿಕಾರಿಗಳು ವರದಿಯನ್ನು ಸಲ್ಲಿಸಿದ್ದಾರೆ ಎಂದು ತಿಳಿಸಿದರು.

ಮಾನವ ಜೀವಹಾನಿ, ಜಾನುವಾರುಗಳ ಜೀವಹಾನಿ, ಮನೆಹಾನಿ, ಬೆಳೆಹಾನಿ, ಮೂಲ ಸೌಕರ್ಯಗಳ ಹಾನಿ ಕುರಿತ ವಿವರವನ್ನು ಆಯಾ ಜಿಲ್ಲಾಧಿಕಾರಿಗಳು ಕ್ರೂಢೀಕರಿಸಿ ಸಕರ್ಾರಕ್ಕೆ ಸಲ್ಲಿಸಿದ್ದಾರೆ. ಈಗಾಗಲೇ ಹೆಚ್ಚು ಹಾನಿಯಾದ ಜಿಲ್ಲೆಗಳಿಗೆ ಕೇಂದ್ರ ನೆರೆ ಅಧ್ಯಯನ ತಂಡ ಪ್ರವಾಸಕೈಗೊಂಡು ಪರಿಶೀಲನೆ ನಡೆಸಿದೆ. ಎಲ್ಲ ವಿವರಗಳನ್ನು ತಂಡಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಬೆಳಗಾವಿ ವಿಭಾಗದ ಬೆಳಗಾವಿ, ಬಾಗಲಕೋಟೆ, ಗದಗ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಹೆಚ್ಚು ಹಾನಿಯಾಗಿದೆ. 

  ಬೆಳಗಾವಿ ಜಿಲ್ಲೆಯಲ್ಲಿ 10,900 ಕೋಟಿ ರೂ., ಬಾಗಲಕೋಟೆಯಲ್ಲಿ 800 ರಿಂದ 900 ಕೋಟಿ ರೂ. ಧಾರವಾಡದಲ್ಲಿ 1000 ಕೋಟಿ ರೂ.ಹಾವೇರಿ ಜಿಲ್ಲೆಯಲ್ಲಿ 780 ಕೋಟಿ ರೂ. ಹಾನಿಯಾಗಿದೆ ಎಂದು ವಿವರಿಸಿದರು.

ಈಗಾಗಲೇ ಸಂತ್ರಸ್ತರಿಗೆ ತುತರ್ು ಪರಿಹಾರವಾಗಿ 10 ಸಾವಿರ ರೂ.ಗಳನ್ನು ವಿತರಿಸಲಾಗಿದೆ. ಪೂರ್ಣ ಮನೆಹಾನಿಯಾಗಿದ್ದರೆ ಶೆಡ್ ನಿಮರ್ಾಣಕ್ಕೆ ಸಂತ್ರಸ್ತರಿಗೆ ಅನುದಾನ ನೀಡಲಾಗುವುದು. 

  ಇಲ್ಲ ಬಾಡಿಗೆ ಮನೆಯಲ್ಲಿ ವಾಸವಾಗಲು ಇಚ್ಛಿಸಿದರೆ ಮಾಹೆಯಾನ ಐದು ಸಾವಿರ ರೂ.ಗಳನ್ನು ಹತ್ತು ತಿಂಗಳವರೆಗೆ ನೀಡಲಾಗುವುದು. ಫುಡ್ ಪ್ಯಾಕೇಟ್ಗಳನ್ನು ಸಂತ್ರಸ್ತರಿಗೆ ನೀಡಲಾಗಿದೆ. ಮನೆ ಹಾನಿ ಹಾಗೂ ಬೆಳೆ ಪರಿಹಾರವನ್ನು ಎನ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

   ಹೆದ್ದಾರಿ: ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4ರ ಉನ್ನತೀಕರಣದ ಭೂಸ್ವಾಧೀನ ವಿಳಂಬವಾಗುತ್ತಿರುವುದು ಹಾಗೂ  ಕಾಮಗಾರಿ  ಮಂದಗತಿಯಲ್ಲಿ ನಡೆಯುತ್ತಿರುವುದರಿಂದ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಮಾತನಾಡಿ, ನಾಗನೂರಿನಲ್ಲಿ ನೆರೆ ಹಾವಳಿಯಿಂದ ಮನೆ ಕಳೆದುಕೊಂಡವರಿಗೆ ತಾತ್ಕಾಲಿಕವಾಗಿ ಪರಿಹಾರ ಕೇಂದ್ರವನ್ನು ತೆರೆಯಲಾಗಿತ್ತು ಹಾಗೂ ಶೆಡ್ಗಳ ನಿಮರ್ಾಣ ಸಹ ಮಾಡಲಾಗಿತ್ತು.

      ಸ್ಥಳದ ಸಮಸ್ಯೆಯಿಂದ ಶೆಡ್ಗಳಿಗೆ ತೆರಳಲು ಸಂತ್ರಸ್ತರು ನಿರಾಕರಿಸಿರುವುದರಿಂದ ಅಪರ ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಎಲ್ಲರ ಕ್ಷಮಕ್ಷಮದಲ್ಲಿ ಸಮಸ್ಯೆಯನ್ನು ಆಲಿಸಿದ್ದಾರೆ. ಆದ್ಯಾಗ್ಯೂ ಮತ್ತೊಮ್ಮೆ ನಾಗನೂರ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಲಾಗುವುದು ಎಂದು ತಿಳಿಸಿದರು.

ಐ.ಎ.ಎಸ್. ಪ್ರೊಬೇಷನರಿ ಅಧಿಕಾರಿ ನೇಹಾ ಜೈನ್, ಅಪರ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಸವಣೂರ ಉಪ ವಿಭಾಗಾಧಿಕಾರಿ ಹರ್ಷಲ್ ನಾರಾಯಣ ಬೋಯಾರ್ ಉಪಸ್ಥಿತರಿದ್ದರು.