ಭಾರತ ಕಂಡ ವೀರ ಸೇನಾನಿ ಸುಭಾಷ ಚಂದ್ರ ಬೋಸ್

ಲೋಕದರ್ಶನ ವರದಿ

ಯಲಬುರ್ಗಾ  23:  ನಮ್ಮ ದೇಶ ಸ್ವಾತಂತ್ರ್ಯವನ್ನು ಪಡೆಯಬೇಕಾದರೆ ಹಲವಾರು ದೇಶಭಕ್ತರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿ ನಮಗೆ ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದಾರೆ ಅಂತವರ ಸಾಲಿನಲ್ಲಿ ಬರುವಂತಹ ಮಹಾನ್ ನಾಯಕ ನೇತಾಜಿ ಸುಭಾಷ್ ಚಂದ್ರ ಬೋಸರವರು ಎಂದು ಪಿಡಿಓ ಅಮೀರ್ ನಾಯಕ ಹೇಳಿದರು.

 ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಪಂ ಹಾಗೂ ನೇತಾಜೀ ಸುಭಾಷ ಚಂದ್ರ ಬೋಸ್ ಯುವಕ ಸಂಘದ ಸಹಯೋಗದಲ್ಲಿ ನೇತಾಜೀ ಸುಭಾಷ ಚಂದ್ರ ಬೋಸ್ ಜಯಂತ್ಯೋತ್ಸವ ಹಾಗೂ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸುಭಾಷ ಚಂದ್ರ ಬೋಸ್ ಅವರು 1897 ಜ, 23ರಂದು ಒಡಿಸ್ಸಾ ರಾಜ್ಯದ ಕಟಕ್ ಎಂಬಲ್ಲಿ ಜನಿಸಿದರು ದೇಶ ಕಂಡಂತಹ ಅಪ್ರತಿಮ ನಾಯಕ ಸುಭಾಸ್ ಚಂದ್ರರು ಇವರು ರಾಷ್ಟ್ರ ನಿರ್ಮಾಣದ ಜವಾಬ್ದಾರಿಯುತ ಸ್ಥಾನದಲ್ಲಿದ್ದು ರಾಷ್ಟ್ರದ ಹಿತಕ್ಕೆ ದಕ್ಕೆಯಾಗುವ ಯಾವುದೇ ವಿಷಯಗಳಲ್ಲಿ ದುರ್ಬಲ ನೀತಿ ಹೊಂದಿರಬಾರದು ಎಂಬುವದು ಇವರ ದಿಟ್ಟ ನಿಲುವಾಗಿತ್ತು, ತಾವು ಕಷ್ಟ ಪಟ್ಟುಗಳಿಸಿದ್ದ ಐಸಿಎಸ್ ಪಧವಿಯನ್ನು ತಿರಸ್ಕರಿಸಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ದುಮುಕಿದರು ಇವರಲ್ಲಿರುವ ರಾಜಕೀಯ ಚಿಂತನೆಯ ವೈಶಾಲ್ಯತೆ ಯಾರಲ್ಲೂ ಇರಲಿಲ್ಲಾ ಇಂಗ್ಲೆಂಡ್, ಆಸ್ಟ್ರೀಯಾ, ಜರ್ಮನಿ ಸ್ಭೆರಿದಂತೆ ಅನೇಕ ರಾಷ್ರಗಳಿಗೆ ಮಿಂಚಿನ ಓಡಾಟ ನಡೆಸಿ ಭಾರತೀಯ ಸ್ವರಾಜ್ಯ ಹೋರಾಟದ ದ್ವನಿಗೆ ತೀವ್ರತೆ ತಂದಿದ್ದ ಬೋಸರು ತಾನು ನಂಬಿದ್ದ ಕ್ರಾಂತಿಪಥದಲ್ಲಿ ಎಂದೂ ರಾಜಿ ಮಾಡಿಕೊಂಡವರಲ್ಲಾ. ಅಂತಹ ಮಹಾತ್ಮರ ಜಯಂತಿಯ ನಿಮಿತ್ಯವಾಗಿ ಇಂದು ಯುವಕರು ಗ್ರಾಮದಲ್ಲಿ ಸ್ವಚ್ಛತಾ ಕಾರ್ಯವನ್ನು ಏರ್ಪಡಿಸಿರುವದು ಅತ್ಯಂತ ಹೆಮ್ಮೆಯ ವಿಷಯವಾಗಿ ಜನರಲ್ಲಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವ ಹಾಗೂ ಗ್ರಾಮವನ್ನು ಸ್ವಚ್ಛಗೋಳಿಸುವ ಕಾರ್ಯಕ್ಕೆ ಗ್ರಾಮದ ಯುವಕರು ಮುಂದೆ ಬಂದಿರುವದು ಅತ್ಯಂತ ಸಂತಸ ತಂದಿದೆ ಎಂದರು.

ನೇತಾಜಿ ಸುಭಾಷ ಚಂದ್ರ ಬೋಸ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯವನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಪಂ ಅಧಕ್ಷೆ ಮಾಬೂಬಿ ಕಡೆಮನಿ, ಮುಖ್ಯಗುರುಗಳಾದ ಶಿವಣ್ಣ ಯಾಳಗಿ, ಅಶೋಕ ರಡ್ಡೇರ, ಗ್ರಾಪಂ ನೇತಾಜಿ ಸುಭಾಸ್ ಚಂದ್ರ ಭೋಸ್  ಯುವಕ ಮಂಡಳದ ಅದ್ಯಕ್ಷ ಈರಣ್ಣ ಅರಳಿ, ಕಾರ್ಯದಶರ್ಿ ರಾಜಾಭಕ್ಷಿ ನಧಾಪ್, ಉಪಾದ್ಯಕ್ಷ  ರಮೇಶ ಅಸೂಟಿ,  ಅರುಣ ಅಬ್ಬಿಗೇರಿ, ಗ್ರಾಪಂ ಸಿಬ್ಬಂದಿಗಳಾದ ಈರಣ್ಣ ಇಟಗಿ, ಈರಣ್ಣ ಬಿನ್ನಾಳ, ರವಿಕುಮಾರ ಛಲವಾದಿ, ಶಂಕ್ರಪ್ಪ ಉಳ್ಳಾಗಡ್ಡಿ, ಮಾಬುಸಾಬ ಕಡೆಮನಿ, ಶ್ರೀಧರ ನಾರಾಯಣಪೂರ, ಬಸವರಾಜ ಚಿತವಾಡಗಿ, ಹನುಮಂತ ಛಲವಾದಿ, ಮರಿಯಪ್ಪ ಛಲವಾದಿ, ಸತ್ಯಪ್ಪ ಮುತ್ತಾಳ, ಸೇರಿದಂತೆ ಯುವಕ ಮಂಡಳ ಸದಸ್ಯರು ಗ್ರಾಮದ ಮುಖಂಡರು ಗ್ರಾಪಂ ಸದಸ್ಯರು ಹಾಜರಿದ್ದರು.