ಗದಗ 10: ವಿದ್ಯಾರ್ಥಿಗಳು ಶ್ರಮ ವಹಿಸಿ ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿ ಉತ್ತಮ ಅಂಕಗಳನ್ನುಗಳಿಸಿ ಶಾಲೆ, ಪಾಲಕರಿಗೆ ಹಾಗೂ ಜಿಲ್ಲೆಗೆ ಕೀರ್ತಿ ತರುವ ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್.ಎಚ್.ನಾಗೂರು ನುಡಿದರು.
ಗದಗ ಬೆಟಗೇರಿ ನಗರದ ಲೋಯಲಾ ಪ್ರೌಢಶಾಲೆಯಲ್ಲಿ ಜರುಗಿದ ವಿದ್ಯಾರ್ಥಿಗಳ ಪ್ರೇರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಪರೀಕ್ಷೆಯ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಪ್ರಾಮಾಣಿಕ ಪ್ರಯತ್ನಕ್ಕೆ ಪ್ರತಿಫಲ ಸಿಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪಾಲಕರಿಗೆ ಬರೆದ ಪ್ರೇರಣಾ ಪತ್ರಗಳನ್ನು ವಿತರಿಸಲಾಯಿತು. ಪ್ರೇರಣಾ ಪತ್ರದಲ್ಲಿ ವಿದ್ಯಾರ್ಥಿಗಳ ದೈಹಿಕ, ಬೌದ್ಧಿಕ ಪರಿಪೂರ್ಣ ನೆರವು ನೀಡುವ ಹೊಣೆ ಪಾಲಕರದು ಇದ್ದು ಮೂಲಭೂತ ಅವಶ್ಯಕತೆಗಳನ್ನು ಜಿಲ್ಲಾಡಳಿತ ನೀಡಲು ಪ್ರಯತ್ನಿಸುತ್ತಿದೆ. ಮಕ್ಕಳು ದೇಶದ ಆಸ್ತಿ. ಮನೆ ವಾತಾವರಣ ಬಹುಮುಖ್ಯ. ಎಸ್.ಎಸ್.ಎಲ್.ಸಿ ಪರೀಕ್ಷಾ ಸಂದರ್ಭದಲ್ಲಿ ಹಾಗೂ ಅದಕ್ಕೂ ಮುಂಚಿನ ತಯಾರಿಯಲ್ಲಿ ಮಕ್ಕಳ ಕಲಿಕೆಗೆ ಉತ್ತಮ ಪರಿಸರ ಹಾಗೂ ಉತ್ತೇಜನ ನೀಡಬೇಕು. ಆರೋಗ್ಯದ ಕಾಳಜಿ ವಹಿಸಬೇಕು. ಶಿಸ್ತು-ಸಂಯಮ ಮೀರದಂತೆ ಅವರ ಸ್ವಭಾವಗಳು ಬೆಳೆಯಲು ನೀವೆ ಅವರಿಗೆ ಮಾದರಿಯಾಗಬೇಕು. ಅವರ ಆಸಕ್ತಿಗೆ ಅನುಗುಣವಾಗಿ ಕಲಿಕೆಗೆ ಅವಕಾಶ ನೀಡಿ ಫಲಿತಾಂಶದ ಹೊರತಾಗಿ ಮಕ್ಕಳ ಬಗೆಗೆ ತಮ್ಮ ಭಾವನೆಗಳು ಧನಾತ್ಮಕವಾಗಿರಲಿ ಎಂದು ಜಿಲ್ಲಾಧಿಕಾರಿಗಳು ವಿದ್ಯಾಥರ್ಿಗಳ ಪಾಲಕರಿಗೆ ಮನವಿ ಮಾಡಿದ್ದಾರೆ.
ಡಯಟ್ ಪ್ರಾಚಾರ್ಯ ಎಚ್.ಎಮ್.ಖಾನ, ಶಿಕ್ಷಣಾಧಿಕಾರಿ ಮಂಜುಳಾ ತಾಪಸ್ಕರ, ಶಿಒಣಕಿಹಾಳ, ಬಿ.ಕೆ.ಹವಾಲ್ದಾರ, ವಿಭೂತಿ ಇದ್ದರು. ಎಸ್.ಐ.ಬಡಿಗೇರ ನಿರೂಪಿಸಿದರು. ಎಸ್.ಎಸ್.ಮುಳಗುಂದಮಠ ವಂದಿಸಿದರು.