ಆಯುರ್ವೇದ ಉತ್ತಮ ಆರೋಗ್ಯದ ಆಯುಧ: ಡಾ. ಸಂಗಮೇಶ ದುಗ್ಗಾಣಿ
Students visit Sri Sai Ram Ayurveda Ashram
ಲೋಕದರ್ಶನ ವರದಿ
ವಿದ್ಯಾರ್ಥಿಗಳಿಂದ ಶ್ರೀ ಸಾಯಿರಾಮ ಆಯುರ್ವೇದ ಆಶ್ರಮಕ್ಕೆ ಭೇಟಿ
ಮಹಾಲಿಂಗಪುರ 25: ರೋಗ ಬರದಂತೆ ಕಾಯುವ ಮತ್ತು ಬಂದ ಮೇಲೆ ರೋಗ ಇನ್ನಿಲ್ಲದಂತೆ ಮಾಡುವ ಶಕ್ತಿ ಹೊಂದಿರುವ ಆಯುರ್ವೇದ ಉತ್ತಮ ಆರೋಗ್ಯದ ಆಯುಧ ಎಂದು ಮುಧೋಳದ ಶ್ರೀ ಸಾಯಿರಾಮ ಆಯುರ್ವೇದ ಆಶ್ರಮದ ಪಂಚಕರ್ಮ ಚಿಕಿತ್ಸೆ ಹಾಗೂ ಸಂಶೋಧನಾ ಕೇಂದ್ರದ ಡಾ. ಸಂಗಮೇಶ ದುಗ್ಗಾಣಿ ಹೇಳಿದರು.
ಮಹಾಲಿಂಗಪುರದ ಕೆಎಲ್‌ಇ ಪದವಿ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಶ್ರೀ ಸಾಯಿರಾಮ ಆಯುರ್ವೇದ ಆಶ್ರಮಕ್ಕೆ ಭೇಟಿ ನೀಡಿದಾಗ ಅರಿವಿನ ಶಿಬಿರದಲ್ಲಿ ಮಾತನಾಡಿದರು.
ಡಾ. ಪೂರ್ಣಿಮಾ ದುಗ್ಗಾಣಿ ಮಾತನಾಡಿ, ನಮ್ಮ ಅಸಹಜ ಜೀವನಶೈಲಿ ಮತ್ತು ಆಹಾರ ಶಯಲಿಯೇ ರೋಗಕ್ಕೆ ಕಾರಣ, ನಮ್ಮ ಶರೀರಕ್ಕೆ ಹೊಂದುವ ಪ್ರಕೃತಿದತ್ತ ಆಹಾರವನ್ನು ಋತುಮಾನಕ್ಕೆ ತಕ್ಕಂತೆ ಸೇವಿಸಬೇಕು. ಸಣ್ಣಪುಟ್ಟ ರೋಗಗಳನ್ನು ಸ್ವಯಂಚಾಲಿತ ರಿಪೇರಿ ಮಾಡುವ ವ್ಯವಸ್ಥೆ ನಮ್ಮ ಶರೀರದಲ್ಲೇ ಇದೆ. ಅದಕ್ಕೆ ನಾವು ಸ್ಪಂದಿಸಬೇಕು ಎಂದರು.
ಡಾ.ಬಸವರಾಜ ದುಗ್ಗಾಣಿ ಮಾತನಾಡಿ, ನಮ್ಮ ಆಯುರ್ವೇದ ಆಶ್ರಮದಲ್ಲಿ ಕೆಮ್ಮಿನಿಂದ ಕ್ಯಾನ್ಸರ್ ವರೆಗೂ ಮೂಲವ್ಯಾಧಿಯಿಂದ ಲಕ್ವಾವರೆಗೂ ಸರ್ವರೋಗಗಳಿಗೂ ರಾಮಬಾಣದಂತೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಪೂಜಾ ಮುತ್ನಾಳಿ ಸಮಾಲೋಚನೆ ನಡೆಸಿದರು. ವಿಜಯ ಅರ್ಜುನಗಿ ತಮ್ಮ ಚಿಕಿತ್ಸಾನುಭವ ಹೇಳಿಕೊಂಡರು.
ವಿದ್ಯಾರ್ಥಿಗಳು ಆಯುರ್ವೇದ ಆಶ್ರಮದಲ್ಲಿನ ಪಂಚಕರ್ಮ, ಅಭ್ಯಂಗ, ಶಿರೋಧರ, ಉದ್ವರ್ತನಂ, ನಾಸ್ಯಂ, ಕಟಿವಸ್ತಿ ಸೇರಿದಂತೆ ಸರ್ವ ಚಿಕಿತ್ಸಾ ವಿಧಾನಗಳನ್ನು, ಓಷಧಿಗಳ ಬಗೆಯನ್ನು ತಿಳಿದುಕೊಂಡರು. ಪಂಚಕರ್ಮ ಚಿಕಿತ್ಸೆಗಳ ವಾರ್ಡ್‌ಗಳನ್ನು ವೀಕ್ಷಿಸಿದರು. ಅಲ್ಲದೇ ತಮಗಿರುವ ಮತ್ತು ತಮ್ಮ ಮನೆಯವರಿಗಿರುವ ವ್ಯಾಧಿಗಳ ಬಗ್ಗೆ ಹೇಳಿಕೊಂಡು ಅವುಗಳಿಗೆ ಸೂಕ್ತ ಚಿಕಿತ್ಸಾ ಕ್ರಮದ ಬಗ್ಗೆ ಅರಿತುಕೊಂಡರು. ನಂತರ ಶ್ರೀ ಸಾಯಿರಾಮ ಆಯುರ್ವೇದ ಆಶ್ರಮದ ವತಿಯಿಂದ ಎಲ್ಲ ವಿದ್ಯಾರ್ಥಿಗಳು ಭೋಜನ ಸವಿದರು.
ಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪಠ್ಯದಲ್ಲಿ ಆರೋಗ್ಯ ಸಮಾಜಶಾಸ್ತ್ರ ವಿಷಯವಿದ್ದು, ಕ್ಷೇತ್ರ ಅಧ್ಯಯನ ಮಾಡಿ ಅದರ ಆಧಾರದ ಮೇಲೆ ಪ್ರೊಜೆಕ್ಟ್ ರಿಪೋರ್ಟ್ ಸಿದ್ದಪಡಿಸಿ ಕೊಟ್ಟರೆ ಅದಕ್ಕೆ ಅಂಕಗಳಿರುತ್ತವೆ. ಆದ್ದರಿಂದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಪೂಜಾ ಮುತ್ನಾಳಿ ನೇತೃತ್ವದಲ್ಲಿ ಮುಧೋಳದ ಶ್ರೀ ಸಾಯಿರಾಮ ಆಯುರ್ವೇದ ಆಶ್ರಮಕ್ಕೆ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭೇಟಿ ನೀಡಿ ಮಾಹಿತಿ ಪಡೆದರು.
ಶ್ರೀ ಸಾಯಿರಾಮ ಆಯುರ್ವೇದ ಆಶ್ರಮದ ರೂವಾರಿ ಡಾ. ಸಂಗಮೇಶ ದುಗ್ಗಾಣಿ ಗಾಯಗೊಂಡಿರುವ ಬೀದಿನಾಯಿಗಳಿಗೆ ಉಚಿತ ಚಿಕಿತ್ಸೆ ನೀಡುವ ಮತ್ತು ನಿತ್ಯ 50 ಚಪಾತಿ ಮಾಡಿಸಿ, ಕೆಜಿಗಟ್ಟಲೇ ಬಿಸ್ಕಿಟ್ ಖರೀದಿಸಿ ಬೀದಿ ನಾಯಿ ಮತ್ತು ಬಿಡಾಡಿ ದನಗಳಿಗೆ ಉಚಿತ ಆಹಾರ ನೀಡುವ ಓದಾರ್ಯದ ಸೇವೆಯನ್ನು ವಿದ್ಯಾರ್ಥಿಗಳು ಶ್ಲಾಘಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 