ಎಲ್ಲ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು: ಡಾ.ನೆಲಾಗಣಿ
ಹನುಮಸಾಗರ 16: ಪಠ್ಯದ ಜತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದು ಕೊಪ್ಪಳದ ಕನ್ನಡ ಉಪನ್ಯಾಸಕ ಡಾ.ಮಹಾಂತೇಶ ನೆಲಾಗಣಿ ಹೇಳಿದರು. ಸಮೀಪದ ಬೆನಕನಾಳ ಗ್ರಾಮದಲ್ಲಿ ವೀರಾಂಜನೇಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಸ್ನೇಹ ಸಮ್ಮಿಲನ, ವಿದ್ಯಾರ್ಥಿಗಳ ಬೀಳ್ಕೊಡಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಾಲೆಯಲ್ಲಿ ಕೇವಲ ಪಠ್ಯ ಒಂದೇ ಹೇಳಿದರೆ ಸಾಲದು. ನಾನಾ ರೀತಿಯ ಕೌಶಲಗಳಾದ ನೃತ್ಯ, ಕ್ರೀಡೆ ಹಾಗೂ ಸ್ಪರ್ಧಾತ್ಮಕ ಮನೋಭಾವನೆಯನ್ನು ಕಲಿಸಬೇಕು. ಅದು ಶ್ರೀ ವೀರಾಂಜನೇಯ ಶಾಲೆ ಪ್ರಾಥಮಿಕ ಹಂತದಲ್ಲಿ ಮಾಡುತ್ತಿದೆ ಎಂದರು.ಸಿಆರ್ಫಿ ಶೇಖರ್ಪ ಕುರಿ ಮಾತನಾಡಿ, ಪಾಲಕರು ತಮ್ಮ ಮಕ್ಕಳಿಗೆ ಮೊಬೈಲ್ ಕೊಡುವದನ್ನು ನಿಷೇಸಬೇಕು. ಹೆಚ್ಚು ಪುಸ್ತಕಗಳನ್ನು ಓದುವಂತೆ ತಿಳಿ ಹೇಳಿ ಜ್ಞಾನವಂತರನ್ನಾಗಿ ಮಾಡಬೇಕು ಎಂದರು. ಪ್ರಮುಖರಾದ ಸಂಸ್ಥೆಯ ಅಧ್ಯಕ್ಷ ಡಾ.ಮೈಲಾರ್ಪ ಬಿಲ್ಕಾರ ಅಧ್ಯಕ್ಷತೆಯನ್ನು ವಹಿಸಿದ್ದರು. ಭೀಮಯ್ಯ ಮಂಟಗೇರಿ, ಸಿಆರ್ಿ ಲೆಂಕಪ್ಪ ವಾಲಿಕಾರ, ನಾಗರಾಜ ಹಕ್ಕಿ, ಹನುಮಂತಪ್ಪ ಕೊಪ್ಪಳ, ನೀಲಪ್ಪ ಮೇಟಿ, ತಿಮ್ಮನಗೌಡ ಪೊಲೀಸ್ಪಾಟೀಲ್, ಬಸವರಾಜ ಬಮಡಿ, ಹನುಮಪ್ಪ ಮುಗಳಿ,ಹನುಮಪ್ಪ ಪೂಜಾರಿ, ಡಾ.ಪ್ರಕಾಶ ಮೈಸೂರ, ಹನುಮವ್ವ ಡಗ್ಗಿ, ಕವಿತಾ ಬಿಲ್ಕಾರ, ವಿದ್ಯಾಶ್ರೀ ಡೊಣ್ಣೆಗುಡ್ಡ, ಯಲ್ಲಮ್ಮ ಕಾಡದ್, ಶಿಲ್ಪಾ ಪುಜಾರಿ, ಸ್ನೇಹಾ ಇತರರು ಇದ್ದರು. :ಹನುಮಸಾಗರ ಸಮೀಪದ ಬೆನಕನಾಳ ಗ್ರಾಮದ ವೀರಾಂಜನೇಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಾನಾ ಕಾರ್ಯಕ್ರಮಗಳನ್ನು ಗಣ್ಯರು ಉದ್ಘಾಟಿಸಿದರು.