ವಿದ್ಯಾರ್ಥಿಗಳು ತಮ್ಮ ಜೀವನದ ಗುರಿ ಮರೆಯಬಾರದು: ಬೇಳವತ್ತಿ

ಹಾವೇರಿ14: ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಯನ್ನು ಮರೆತು ಸಾಮಾಜಿಕ ಜಾಲತಾಣಗಳಿಗೆ ಮೊರೆಹೋಗುತ್ತಿದ್ದಾರೆ ಎಂದು ಯುವ ಪರಿವರ್ತಕ ಸಂಜೀವಕುಮಾರ ಬೇಳವತ್ತಿ ಹೇಳಿದರು. 

ರಾಣೇಬೆನ್ನೂರಿನ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯುವ ಸ್ಪಂದನ ಕೇಂದ್ರ ಹಾವೇರಿ ಹಾಗೂ ನಿಮ್ಹಾನ್ಸ್ ಬೆಂಗಳೂರು, ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ರಾಣೇಬೆನ್ನೂರು ಇವರ ಸಹಯೋಗದಲ್ಲಿ ಯುವಸ್ಪಂದನ ಅರಿವು ಹಾಗೂ ಜೀವನ ಕೌಶಲ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ವಿದ್ಯಾರ್ಥಿಗಳು ತಮ್ಮ  ವಿದ್ಯಾರ್ಥಿ ಜೀವನವನ್ನು ಉತ್ತಮ ರೀತಿಯಲ್ಲಿ   ನಿರ್ವಹಿಸಬೇಕಾದರೆ ತಮ್ಮ ಭಾವನೆಗಳನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು. 

 ಆಧುನಿಕ ತಂತ್ರಜ್ಞಾನಗಳಿಗೆ ಮೋರೆಹೋಗಿ ತಮ್ಮ ಭಾವನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚುತ್ತಾರೆ. ಇತರರಿಂದ ಸರಿಯಾದ ಸ್ಪಂದನೆ ಸಿಗದಿದ್ದಲ್ಲಿ ಖಿನ್ನತೆಗೆ ಒಳಗಾಗುತ್ತಿದ್ದಾರೆ ಎಂದು ಅವರು ಹೇಳಿದರು. 

ಯುವ ಪರಿವರ್ತಕಿ ಪ್ರತೀಭಾ ಹಡಗಲಿ ಮಾತನಾಡಿ, ಯುವಕರು ಎದುರಿಸುತ್ತಿರುವ ಸಮಸ್ಯೆ, ಗೊಂದಲಗಳಿಂದ ಮಾನಸಿಕ ಒತ್ತಡ ಮತ್ತು ಆತಂಕದಿಂದ ಭಯಪಡುತ್ತಾರೆ.

       ಅವುಗಳನ್ನು ದೈರ್ಯದಿಂದ ಎದುರಿಸಲು ಅರಿವು ಮೂಡಿಸಿ, ಅವರಿಗೆ ಆತ್ಮಸ್ಥೈರ್ಯ ತುಂಬಲು ಯುವಸ್ಪಂದನ ಕಾರ್ಯಕ್ರಮ ಜಾರಿಗೆ ಬಂದಿದೆ. 08375-232080  ದೂರವಾಣಿ ಸಂಖ್ಯೆ ಹಾಗೂ 18004251448 ಸಹಾಯವಾಣಿ ಸಂಖ್ಯಗೆ  ಕರೆಮಾಡಿ ಯುವಸ್ಪಂದನ ಕಾರ್ಯಕ್ರಮದ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಅಧಿಕಾರಿ ಮಲ್ಲಿಕಾರ್ಜುನಪ್ಪ  ಹಾಗೂ ವಿದ್ಯಾರ್ಥಿಗಳು, ಕಾಲೇಜು ಸಿಬ್ಬಂದಿಗಳು ಉಪಸ್ಥಿತರಿದ್ದರು.