ವಿದ್ಯಾರ್ಥಿಗಳು ಮಾದಕವಸ್ತುವಿಗೆ ದಾಸದಾಗದಿರಲಿ: ಡಾ.ರಾಬಿಯಾ ಮಿರ್ಧೆ
Students should not become slaves to drugs: Dr. Rabia Mirdhe
ವಿಜಯಪುರ 13: ಸಮಾಜದ ಸ್ವಾಸ್ತ್ಯ ಕಾಪಾಡಲು ವ್ಯಸನಗಳಿಂದ ಮುಕ್ತರಾಗುವುದು ಯುವ ಜನಾಂಗಕ್ಕೆ ಅಗತ್ಯವಾಗಿದೆ ಎಂದು ಪ್ರಾಚಾರ್ಯೆ ಡಾ ರಾಬಿಯಾ ಎಂ. ಮಿರ್ಧೆ ಹೇಳಿದರು.
ನಗರದ ಬಿಎಲ್‌ಡಿಈ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಸಯುಂಕ್ತಾಶ್ರಯದಲ್ಲಿ ಎನ್ ಎಸ್ ಎಸ್ ಘಟಕ ಒಂದು ಮತ್ತು ಎರಡು ಸಂಯೋಜನೆಯಲ್ಲಿ ಬುಧವಾರ ದಿ. 13ರಂದು ಹಮ್ಮಿಕೊಂಡಿದ್ದ ‘ನಶೆ ಮುಕ್ತ ಭಾರತ-ಸೇ ನೋ ಟು ಡ್ರಗ್ಸ್’ ಅಭಿಯಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು ವ್ಯಸನಗಳಿಂದ ಆಗುವ ಅನುಕೂಲಗಳು ಹಾಗೂ ಅದರಿಂದ ದೂರವಿರುವಂತೆ ಸಲಹೆ ನೀಡಿದರು. ಯುವ ಪೀಳಿಗೆ ದೇಶದ ಭವಿಷ್ಯದ ಶಕ್ತಿ, ವಿದ್ಯಾರ್ಥಿ ಗಳು ನಶೆ ಯಿಂದ ದೂರ ವಿದ್ದು, ಒಳ್ಳೆ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು.
ಯುವಜನಾಂಗ ದುಶ್ಚಟಗಳಿಂದ ಬಲಿಯಾಗುತ್ತಿದ್ದಾರೆ. ಇದರಿಂದ ಅದೆಷ್ಟೋ ಜೀವಗಳು ಕುಟುಂಬಗಳು ಬಲಿಯಾಗಿವೆ ಇದರಿಂದಾಗುವ ಪರಿಣಾಮಗಳು ಬಹಳಷ್ಟು ಕೆಟ್ಟದ್ದಾಗಿದ್ದು ಆದರ್ಶ ಜೀವನಕ್ಕೆ ದೊಡ್ಡ ಮಾರಕ ಆದ್ದರಿಂದ ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ದಾಸರಾಗದಂತೆ ಸ್ವಯಂ ಪ್ರೇರಿರಿತರಾಗಿ ತ್ಯಜಿಸಿ ಇತರರಿಗೆ ವ್ಯಸಂಗಳಿಂದ ದೂರವಿರುವಂತೆ ತಿಳಿಸಿದರು.ಅದೇ ರೀಯಿಯಾಗಿ ಮಾದಕ ದ್ರವ್ಯ ಸೇವನೆಯಿಂದಾಗುವ ಕೆಟ್ಟ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಾಗಿದೆ. ಇಂತಹ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಂಡು, ಸಾಮಾಜಿಕ ಪ್ರತಿಜ್ಞೆ ತೆಗೆದುಕೊಳ್ಳುವುದರ ಮೂಲಕ ನಶಾ ಮುಕ್ತ ಭಾರತಕ್ಕೆ ಕೈ ಜೋಡಿಸಬೇಕು ಎಂದು ಹೇಳಿದರು.
ಎನ್‌ಎಸ್‌ಎಸ್ ಅಧಿಕಾರಿ ಡಾ.ತರನ್ನುಮ್ ಜಬೀನಖಾನ ವಿದ್ಯಾರ್ಥಿಗಳಿಗೆ ನಶಾ ಮುಕ್ತತೆಯ್ ಬಗ್ಗೆ, “ನಾವೆಲ್ಲರೂ ಸೇರಿ ನಶಾ ಮುಕ್ತ ಭಾರತ ನಿರ್ಮಿಸಲು ಶಪಥ ತೆಗೆದುಕೊಳ್ಳೋಣ,ನಮ್ಮ ಬದುಕು, ನಮ್ಮ ಕುಟುಂಬ, ನಮ್ಮ ದೇಶ-ಎಲ್ಲವೂ ನಶೆಯಿಂದ್ ಮುಕ್ತರಾಗೋಣ ಎಂದು ಪ್ರಮಾಣ ವಚನ ಬೋಧಿಸಿದರು.
ಉಪಪ್ರಾಚಾರ್ಯ ಡಾ.ಅನೀಲ ಭೀ.ನಾಯಕ, ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕ 1 ಮತ್ತು 2ರ ಅಧಿಕಾರಿಗಳಾದ ಡಾ.ತರನ್ನುಮ್ ಜಬೀನಖಾನ ಮತ್ತು ಡಾ.ಮಿಲನ್ ರಾಠೋಡ್, ಪ್ರೊ.ಆರ್.ಜಿ.ಕಮತರ ಮಹಾವಿದ್ಯಾಲಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ಎನ್‌ಎಸ್‌ಎಸ್ ಸ್ವಯಂ ಸೇವಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 