ಲೋಕದರ್ಶನ ವರದಿ
ಶಿರಹಟ್ಟಿ: ವಿದ್ಯಾರ್ಥಿಗಳು ತಮ್ಮ ವಿದ್ಯಾಥರ್ಿ ಜೀವನದಲ್ಲಿ ಗಾಂಧೀಜಿಯವರಂತಹ ಮಹಾನ್ ವ್ಯಕ್ತಿಗಳ ಜೀವನದ ಆದರ್ಶಗಳನ್ನು ಪಾಲಿಸಲು ಮುಂದಾಗಬೇಕು. ಗಾಂಧೀಜಿಯವರ ತ್ಯಾಗ ಮತ್ತು ಅಹಿಂಸಾ ತತ್ವಗಳು ಇಡೀ ಜಗತ್ತಿಗೆ ಆದರ್ಶಪ್ರಾಯವಾಗಿದೆ. ಅಹಿಂಸೆಯ ಮೂಲಕ ಭಾರತ ಮತ್ತು ವಿದೇಶದಲ್ಲಿ ಯಶಸ್ವಿ ತತ್ವದ ಬಳಕೆಯನ್ನು ತಮ್ಮ ಹೋರಾಟದಲ್ಲಿ ಯಶಸ್ವಿಯಾದರು. ಇಂತಹ ತತ್ವಗಳನ್ನು ಪರಿಪಾಲಿಸಲು ಮುಂದಾಗಬೇಕು ಎಂದು ಶಿಕ್ಷಕರ ಕೆ.ಎ.ಬಳಿಗೇರ ಹೇಳಿದರು.
ಅವರು ಪಟ್ಟಣದ ಸಿ.ಸಿ.ಎನ್ ಆಂಗ್ಲ ಮಾದ್ಯಮ ಪ್ರೌಢ ಶಾಲೆಯಲ್ಲಿ ಮಹಾತ್ಮ ಗಾಂಧೀ ಮತ್ತು ಲಾಲ್ ಬಹದ್ದೂರ ಶಾಸ್ತ್ರೀಯವರ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಶ್ತಾಸ್ತ್ರಿಯಂತಹ ದಿಟ್ಟ ರಾಜಕಾರಣಿಯ ಆದರ್ಶಗಳನ್ನು ನಾವೆಲ್ಲ ಪರಿಪಾಲಿಸಬೇಕು. ದೇಶಕ್ಕೆ ಶಾಸ್ತ್ರೀಜಿಯವರ ಕೊಡೆಗೆ ಅವಸ್ಮರಣೀಯವಾಗಿದೆ. ಇಂಹತ ಮಹಾನ್ ವ್ಯೆಕ್ತಿಗಳ ನಮ್ಮ ಮುಂದೆ ಇತಿಹಾಸವನ್ನು ನಿರ್ಮಿಸಿದ್ದ ಸಾಕ್ಷಿಗಳಿವೆ, ಇಂತಹವರ ಆದರ್ಶಗಳನ್ನು ರೂಢಿಸಿಕೊಂಡು ಅಖಂಡ ಭಾರತದ ಕಲ್ಪನೆಯನ್ನು ಮತ್ತು ಏಕತೆಯನ್ನು ನಾವು ಮೆರಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಸಂಸ್ಥೆಯ ಅದ್ಯಕ್ಷರಾದ ಸಿ.ಸಿ.ನೂರಶೆಟ್ಟರ ಮಾತನಾಡಿ, ದೇಶವನ್ನು ಆಧುನಿಕತೆಯತ್ತ ಕೊಂಡಯ್ಯುವುದರ ಜೊತೆಗೆ ಮಾರಕಗಳನ್ನು ನಾವೆಲ್ಲ ತಡೆಬೇಕಾಗಿದೆ. ಪರಿಸರದ ಮೇಲೆ ಆಗುವ ಪರಿಣಾಮವನ್ನು ನಾವೆಲ್ಲ ಅರಿಯಬೇಕಿದೆ. ಪ್ಲಾಸ್ಟಿಕ ಬಳೆಕಯನ್ನು ನಿಷೇಧಕ್ಕೆ ನಾವೆಲ್ಲ ಸಹಕಾರವನ್ನು ನೀಡುವುದ ಅಗತ್ಯವಿದೆ. ಮಹಾನ್ ಗಣ್ಯ ಜಯಂತಿಯನ್ನು ಸಾರ್ಥಕಗೊಳಿಸಿಕೊಳ್ಳಬೇಕಾದರೆ ಅವರ ಆದರ್ಶಗಳನ್ನು ಪಾಲಿಸುವುದು ಅವಶ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯೋಪಾದ್ಯಾಯ ಸಂತೋಷಕುಮಾರ ಎಸ್.ಜಿ. ವಿ.ಬಿ.ಅಕ್ಕೂರ, ಮತ್ತು ಶಾಲಾ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.