ಬಾಗಲಕೋಟ24: ಇಂದಿನ ವಿದ್ಯಾರ್ಥಿಗಳಲ್ಲಿ ಓದು ಮರೆಯಾಗುತ್ತಿದೆ. ಪುಸ್ತಕ ಓದನ್ನು ರೂಢಿಸಿಕೊಂಡಲ್ಲಿ ಜೀವನ ಉಜ್ವಲಿಸುತ್ತದೆ. ನಮ್ಮ ಕನ್ನಡ ಸಾಹಿತ್ಯ ಭಂಡಾರ ಶ್ರೀಮಂತವಾಗಿದೆ ಅದನ್ನು ವಿದ್ಯಾರ್ಥಿಗಳು ಬಳಸಿಕೊಂಡು ಬೆಳೆಯಬೇಕು ಎಂದು ಹಿರಿಯ ಸಾಹಿತಿ ಶ್ರೀರಾಮ ಇಟ್ಟನ್ನವರ ಹೇಳಿದರು.
ನಗರದ ಬಿ.ವ್ಹಿ.ವ್ಹಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಸಭಾಭವನದಲ್ಲಿ ಸೋಮವಾರ ಕನರ್ಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕಲಾ ಮಹಾವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಲಾದ 'ಹದಿಹರೆಯಕ್ಕೆ ಸಾಹಿತ್ಯ ಸುಧೆ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಲೋಕದಲ್ಲಿ ಸಾಕಷ್ಟು ಜನ ಕವಿವರ್ಯರು ಶ್ರಮಿಸಿದ್ದಾರೆ. ಕಾದಂಬರಿ, ಕಥಾಸಂಕಲನ, ಕವನಗಳನ್ನು ಬರೆದಿದ್ದಾರೆ. ಕುವೆಂಪು ಕಾರಂತರು ಮೊದಲಾದವರ ಕುರಿತು ಓದಬೇಕು. ನಮ್ಮ ವಿದ್ಯಾರ್ಥಿಗಳಲ್ಲಿ ಓದು ಕ್ಷೀಣಿಸುತ್ತಿದೆ. ಮೊಬೈಲ್ ಬಳಕೆಗೆ ಅಂಟಿಕೊಂಡು ಸಾಹಿತ್ಯ ಲೋಕದ ನಂಟನ್ನು ಕಳೆದುಕೊಳ್ಳುತ್ತಿದ್ದಾರೆ. ತಂತ್ರಜ್ಞಾನ ಬಳಕೆ ಒಳ್ಳೆಯದೇ ಆದರೆ ಅದನ್ನು ಅವಶ್ಯಕತೆಗೆ ಮಾತ್ರ ಬಳಸಬೇಕು. ಎರಡು ಸಾವರ ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ ಕನ್ನಡ ಸಾರಸ್ವತ ಲೋಕ ಕವಿರಾಜಮಾರ್ಗದಿಂದ ಇಂದಿನವರೆಗೆ ಸಾಕಷ್ಟು ಪುಸ್ತಕಗಳು ಪ್ರಕಟಗೊಂಡಿವೆ. ಅವುಗಳನ್ನು ಓದುವುದರೊಂದಿಗೆ ಜ್ಞಾನ ವೃದ್ಧಿ ಮಾಡಿಕೊಳ್ಳಬೇಕು ಎಂದು ವಿದ್ಯಾಥರ್ಿಗಳಿಗೆ ಕಿವಿಮಾತು ಹೇಳಿದರು.
ನಮ್ಮ ಜನಪದ ಸಂಪತ್ತು ಕವಿಗಳಿಗೆ ಮೂಲಾಧಾರವಾಗಿದೆ. ಜನಪದದ ಸಾಹಿತ್ಯ ಹಾಗೂ ಭಾಷೆಯಲ್ಲಿ ಅಶ್ಲೀಲತೆ ಇರುತ್ತಿರಲಿಲ್ಲ. ಸಾಹಿತ್ಯದ ಮೂಲ ಉದ್ದೇಶ ಸಂತೋಷ ನೀಡುವುದಾಗಿದೆ. ಇಲ್ಲಿ ಭಾಷಾ ಶುದ್ಧತೆಗೆ ಹೆಚ್ಚಿನ ಗಮನ ನೀಡಬೇಕು. ಕಾಗುಣಿತಗಳ ಶುದ್ಧ ಬಳಕೆ ರೂಢಿಯಾಗಬೇಕು. ಕತೆ ಕವನಗಳು ಅತ್ಯಂತ ಸುಲಭವಾಗಿದ್ದು ಎಲ್ಲ ವರ್ಗದವರಿಗೂ ಅರ್ಥವಾಗುವಂತಿರಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಬಿ.ವಿ. ವಸಂತಕುಮಾರ ವಹಿಸಿದ್ದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವ್ಹಿ.ಎಸ್. ಕಟಗಿಹಳ್ಳಿಮಠ ಸ್ವಾಗತಿಸಿ ಪರಿಚಯಿಸಿದರು. ಡಾ. ಕೆ. ಪ್ರಹ್ಲಾದ ವಂದಿಸಿದರು.
ಸಂಗೀತ ವಿಭಾಗದ ವಿದ್ಯಾರ್ಥಿನಿಯರು ಪ್ರಾಥರ್ಿಸಿದರು. ಡಾ. ಬಿ.ವಿ. ಖೋತ ನಿರೂಪಿಸಿದರು. ವಿವಿಧ ಮಹಾವಿದ್ಯಾಲಯದ ಪ್ರಾಚಾರ್ಯರು, ಪ್ರಾಧ್ಯಾಪಕರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಜರಿದ್ದರು.