ಲೋಕದರ್ಶನ ವರದಿ
ಬೆಳಗಾವಿ 05: ಉದ್ಯಮಭಾಗದಲ್ಲಿರುವ ಜೆ.ಸಿ.ಇ.ಆರ್ದಲ್ಲಿ ಸಂಸ್ಕೃತಿ-2019ರ ಸಾಂಸ್ಕೃತಿಕ ಸ್ನೇಹ ಸಮ್ಮೇಳನವನ್ನು ಇತ್ತೀಚಿಗೆ ಆಚರಿಸಲಾಯಿತು. ವ್ಹಿ.ಟಿ.ಯುದ ಗೌರವಾನ್ವಿತ ಉಪಕುಲಪತಿಗಳಾಗಿರುವ ಡಾ. ಕರಿಸಿದ್ದಪ್ಪಾ, ಮುಖ್ಯ ಅತಿಥಿಗಳಾಗಿ ಆಗಮಿಸಿ ಸ್ನೇಹ ಸಮ್ಮೇಳನಕ್ಕೆ ಶೋಭೆ ಕೋರಿದರು. ಇವರು ವಿದ್ಯಾಥರ್ಿಗಳನ್ನುದ್ದೇಶಿಸಿ ಮಾತನಾಡುತ್ತಾ, ವಿದ್ಯಾಥರ್ಿಗಳು ಇತ್ತೀಚಿಗೆ ಸಂಭವಿಸುತ್ತಿರುವ ತಾಂತ್ರಿಕ ಬೆಳವಣಿಗೆಗಳಾಗುತ್ತಿರುವ ದರ ಕಡೆಗೆ ಪ್ರೇರೆಪಿತಗೊಳ್ಳುತ್ತ, ಅದರ ಬದಲಾಗುತ್ತಿರುವ ಗತಿಯೊಂದಿಗೆ ಕಠಿಣ ಪರಿಶ್ರಮದಿಂದ ತ್ವರಿತವಾಗಿ ಹೊಂದಿಕೊಂಡು ಬದಲಾಗುತ್ತಿರುವ ಪ್ರಪಂಚದೊಡನೆ ಸಾಗಬೇಕೆಂದು ಕರೆಕೊಟ್ಟರು.
ಉನ್ನತ ಸ್ಥಾನ ಸಂಪಾದಿಸಿದವರಿಗೆ ಪ್ರಶಸ್ತಿಗಳನ್ನಿತ್ತು, ಹಲವಾರು ಸ್ಪಧರ್ೆಗಳಲ್ಲಿ ಕಾಲೇಜಿಗೆ ಗೌರವ ತಂದವರನ್ನು ಗೌರವಿಸಲಾಯಿತು. ಅರ್ಹತೆ ಹೊಂದಿರುವ ಹಾಗೂ ಅವಶ್ಯಕತೆ ಇರುವಂಥ ವಿದ್ಯಾಥರ್ಿಗಳನ್ನೂ ಸಂಸ್ಥೆಯ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಗಳು ಗುರುತಿಸಿ ಅವರಿಗೆ ಸ್ಕಾಲರ್ ಶಿಪ್ಗಳನ್ನು ಕೊಡ ಮಾಡಿದರು.
ಈ ಸಂದರ್ಭದಲ್ಲಿ ಹಲವಾರು ಸಾಂಸ್ಕೃತಿಕ ಚಟುವಟಿಕೆಗಳಾದಂಥ ನೃತ್ಯ, ಗಾಯನ, ಲಘುವಿಡಂಬನೆದಂಥ ಕಾರ್ಯಕ್ರಮಗಳಲ್ಲಿ ವಿದ್ಯಾಥರ್ಿಗಳು ಭಾಗಿಯಾಗಿ ತಮ್ಮ ನೈಪುಣ್ಯ ಹಾಗೂ ಪ್ರತಿಭೆಗಳನ್ನು ಮೆರೆದರು.
ಈ ಪ್ರಸಂಗದಲ್ಲಿ ಜೆ.ಸಿ.ಐದ ಉತ್ತರ ಕನರ್ಾಟಕದ ನಿದರ್ೇಶರ ಪ್ರೊ. ಆರ್.ಜಿ. ಧಾರವಾಡಕರ, ಜೆ.ಸಿ.ಇ.ಆರ್ದ ಪ್ರಾಂಶುಪಾಲರಾದ ಡಾ. ಎಸ್.ವ್ಹಿ. ಗೋರಬಾಳ, ಡಾ. ಕೆಎ.ಜಿ. ವಿಶ್ವನಾಥ, ಪ್ರೊ. ರವಿ ಟಿ, ಜೆ.ಸಿ.ಇ.ಆರ್ದ ಡೀನ್ ಅಕಾಡೆಮಿಕ್ಸ್ ಹಾಗೂ ಪ್ರೊ. ರಾಜಶೇಖರ ಬಿರಾದಾರ ಉಪಸ್ಥಿತರಿದ್ದರು. ಈ ಪ್ರಸಂಗದ ಸಂಯೋಜನಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.