ವಿದ್ಯಾರ್ಥಿಗಳು ವೈಯಕ್ತಿಕ ಆರೋಗ್ಯದೊಂದಿಗೆ ಓದಿನ ಕಡೆ ಗಮನಹರಿಸಿ: ಡಿಹೆಚ್‌ಓ ಡಾ.ಯಲ್ಲಾ ರಮೇಶ್‌ಬಾಬು
Students should focus on their studies along with their personal health: DHO Dr. Yalla Rameshbabu
ಬಳ್ಳಾರಿ 26; ವಿದ್ಯಾರ್ಥಿಗಳು ವೈಯಕ್ತಿಕ ಆರೋಗ್ಯದೊಂದಿಗೆ ಓದಿನ ಕಡೆ ಗಮನಹರಿಸುವ ಮೂಲಕ ಉನ್ನತ ಗುರಿ ಸಾಧಿಸಲು ಪಣತೊಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್‌ಬಾಬು ಅವರು ಹೇಳಿದರು.
ಗುರುವಾರ, ಬಳ್ಳಾರಿ ತಾಲ್ಲೂಕಿನ ಕೆ.ವೀರಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಹುಟ್ಟಿನಿಂದ 05 ವರ್ಷದೊಳಗಿನ ಮಕ್ಕಳಿಗೆ ಕಾಡುವ ಅತಿಸಾರ ಭೇದಿ ನಿಯಂತ್ರಣ ಕಾರ್ಯಕ್ರಮದಡಿ ಜಿಂಕ್ ಮತ್ತು ಓಆರ್‌ಎಸ್ ದ್ರಾವಣ ಕುರಿತು ಜಾಗೃತಿ ಹತ್ತನೇಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಮನುಷ್ಯನ ಜೀವನದಲ್ಲಿ ಬಾಲ್ಯಾವ್ಯಸ್ಥೆಯಿಂದ ಹದಿಹರೆಯದಕ್ಕೆ ಕಾಲಿಡುವ ಅವಧಿಯು ಅತ್ಯಂತ ಮಹತ್ವಪೂರ್ಣವಾಗಿದೆ. ಹಾರ್ಮೋನುಗಳ ಬದಲಾವಣೆಯಿಂದ ದೈಹಿಕವಾಗಿ ಬಾಲಕ-ಬಾಲಕಿಯರಲ್ಲಿ ಬದಲಾವಣೆಗಳು ಉಂಟಾಗುತ್ತವೆ. ವಿದ್ಯಾರ್ಥಿಗಳು ಪಾಲಕರ ಹಾಗೂ ಶಾಲಾ ಗುರುಗಳ ಮಾರ್ಗದರ್ಶನ ಪಡೆದು ಭವಿಷ್ಯದಲ್ಲಿ ಉನ್ನತ ಹುದ್ದೆಗಳನ್ನು ಪಡೆಯುವ ಗುರಿಯೊಂದಿಗೆ ಸಾಗುವ ಮಹಾದಾಸೆ ಹೊಂದಬೇಕು ಎಂದು ತಿಳಿಸಿದರು.
ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಶ್ರಧ್ದೆಯಿಂದ ಓದುವುದಕ್ಕೆ ಹೆಚ್ಚು ಗಮನ ಹರಿಸಬೇಕು. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಮೂಲಕ ಸಾಮಾಜಿಕ ಜಾಲ ತಾಣಗಳಾದ ಫೇಸ್ಬುಕ್, ಇಸ್ಟಾಗ್ರಾಮ್ ಮುಂತಾದವುಗಳಿಂದ ಹದಿಹರೆಯದವರು ಪರಿಚಯವಿಲ್ಲದವರೊಂದಿಗೆ ಸಲುಗೆ ಬೆಳೆದು ಕುಟುಂಬದವರಿಗೆ ಗೊತ್ತಿಲ್ಲದೆ ಮದುವೆಯಾಗುವ, ಮನೆಯಿಂದ ಕಣ್ಮರೆಯಾಗುವ ಘಟನೆಗಳ ಕುರಿತು ಪತ್ರಿಕೆಗಳಲ್ಲಿ ವರದಿಯಾಗುತ್ತಿವೆ. ಇದು ಬಾಲ್ಯವಿವಾಹಕ್ಕೂ ದಾರಿ ಮಾಡುತ್ತದೆ ಅಲ್ಲದೆ ಹಲವಾರು ಬಾರಿ ದುಷ್ಟರಿಂದ ಲೈಂಗಿಕ ದೌರ್ಜನ್ಯಕ್ಕೂ ಒಳಗಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಇವುಗಳಿಂದ ದೂರ ಇರಬೇಕು.
ಆರೋಗ್ಯ ಇಲಾಖೆಯ ಎಲ್ಲ ಆಸ್ಪತ್ರೆಗಳಲ್ಲಿರುವ ‘ಸ್ನೇಹ ಕ್ಲಿನಿಕ್’ ನಲ್ಲಿ ಹದಿಹರೆಯದವರ ಆಪ್ತಸಮಾಲೋಚಕರ ಬಳಿ ಸಲಹೆ ಪಡೆದು ಒತ್ತಡಗಳಿಂದ ಮುಕ್ತರಾಗುವ ಹಾಗೂ ಹದಿಹರೆಯದಲ್ಲಿ ಆಕರ್ಷಕವಾಗುವ ತಂಬಾಕು ಉತ್ಪನ್ನಗಳು, ಬೀಡಿ ಸೀಗರೇಟು ಮುಂತಾದವುಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
ಮಕ್ಕಳಲ್ಲಿ ಜಂತುಹುಳು ಕಂಡುಬಂದ ಸಂದರ್ಭದಲ್ಲಿ ಮಕ್ಕಳು ಸೇವಿಸುವ ಆಹಾರವನ್ನು ಜಂತುಹುಳುಗಳು ಕಸಿದುಕೊಳ್ಳುವ ಮೂಲಕ ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಮಾಡುವ ಜೊತೆಗೆ ರೋಗ ನಿರೋಧಕ ಶಕ್ತಿ ಕುಂದಿಸಿ ಸಣ್ಣಪುಟ್ಟ ಕಾಯಿಲೆಗಳು ದೀರ್ಘಾವಧಿಯವರೆಗೆ ಕಾಡುವಂತೆ ಮಾಡುತ್ತವೆ ಎಂದರು.
ಮುಖ್ಯವಾಗಿ ಹೆಣ್ಣುಮಗುವಿನಲ್ಲಿ ರಕ್ತಹೀನತೆ ಸತತವಾಗಿ ಮುಂದುವರೆದಲ್ಲಿ ಹದಿಹರೆಯದಲ್ಲಿಯ ಸಮಸ್ಯೆಗಳು ಮದುವೆಯ ನಂತರ ವೈವಾಹಿಕ ಜೀವನದಲ್ಲಿ ಗಂಭೀರ ಸ್ವರೂಪ ಪಡೆಯುತ್ತವೆ. ಈ ದಿಶೆಯಲ್ಲಿ ಮಕ್ಕಳು ವರ್ಷದಲ್ಲಿ ಎರಡು ಬಾರಿ ತಪ್ಪದೇ ಜಂತುಹುಳು ನಿವಾರಕ ಮಾತ್ರೆ ಸೇವಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಡಿಗಿನಮೊಳ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸಂತೋಷ ಹೆಬ್ಬಾಳ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಶಾಲೆಯ ಮುಖ್ಯಗುರುಗಳಾದ ನಾಗರಾಜ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ, ಶಕುಂತಲಮ್ಮ, ಸಮುದಾಯ ಆರೋಗ್ಯ ಅಧಿಕಾರಿ ಮಧುಲತಾ ಸೇರಿದಂತೆ ಶಾಲಾ ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಮಕ್ಕಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 