ವಿದ್ಯಾರ್ಥಿಗಳು ಓದಿನತ್ತ ಗಮನ ಹರಿಸಬೇಕು

ಲೋಕದರ್ಶನ ವರದಿ

ಹುಕ್ಕೇರಿ 16: ತಾಲೂಕಿನ ಬೆಲ್ಲದ ಬಾಗೇವಾಡಿಯ ವ್ಹಿ. ಎಮ್. ಕತ್ತಿ ಗ್ರುಪ್ ಆಪ್ ಇನ್ಸ್ಟಿಟ್ಯೂಟಿನ ಅಂಗ ಸಂಸ್ಥೆಗಳ ವ್ಹಿ. ಎಮ್. ಕತ್ತಿ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭವನ್ನು ದಿ. 15ರಂದು ಕಾಲೇಜಿನ ಸಭಾಭವನದಲ್ಲಿ ಜರಗಿತು.

        ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಎಸ್. ಎಮ್. ಭಂಗಿ ಅವರು ವಿದ್ಯಾಥರ್ಿಗಳೆಲ್ಲರೂ ತಮ್ಮ ಕನಸಗಳನ್ನು ಸಾಕಾರಗೋಳ್ಳುವಲ್ಲಿ ಓದು ಪ್ರಮುಖವಾದದ್ದು. ಎಲ್ಲರೂ ಓದಿನತ್ತ ಗಮನಕೊಟ್ಟು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿ ಕಾಲೇಜಿಗೆ, ತಂದೆ-ತಾಯಿಗಳಿಗೆ ಕೀರ್ತಿ ತರಬೇಕೆಂದು ಹೇಳಿದರು.

ಸಮಾರಂಭದ ಮುಖ್ಯ ಅತಿಥಿ ಸ್ಥಾನ ವಹಿಸಿ ಮಾತನಾಡಿದ ಬಸವಂತಪ್ಪಾ ಜಾವೂರ ಕನ್ನಡ ಉಪನ್ಯಾಸಕರು, ಕೆ.ಎಲ್.ಇ ಪದವಿ ಕಾಲೇಜು ಅಂಕಲಿ. ಇವರು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ ದೇಶ ಕಟ್ಟಲು ಯುವಕರು ಶ್ರಮಿಸಬೇಕು. ದೇಶಾಭಿಮಾನ ಬೆಳಿಸಿಕೊಳ್ಳಬೇಕು. ಮುಂದಿನ ಭವಿಷ್ಯತ್ಗಾಗಿ ವಿದ್ಯಾರ್ಥಿಗಳು ಓದಿನತ್ತ ಗಮನ ಹರಿಸಬೇಕು. ಪ್ರತಿಯೊಬ್ಬರು ಶಿಕ್ಷಕರಿಗೆ ಗೌರವ ಕೊಡಬೇಕು. ಇಂದಿನ ವಿದ್ಯಾರ್ಥಿಗಳು ದುಶ್ಟಟಗಳಿಗೆ ಬಲಿಯಾಗದೆ ತಮ್ಮ ಜೀವನವನ್ನು ರೂಪಿಸಿಕೊಳ್ಳುವತ್ತ ಗಮನ ಹರಿಸಬೇಕೆಂದು ವಿದ್ಯಾಥರ್ಿಗಳಿಗೆ ಕರೆ ನೀಡಿದರು. 

      ನಂತರ ಬಹುಮಾನ ಸಮಾರಂಭ ಜರುಗಿತು.  ವಿದ್ಯಾ ಚನ್ನವರ ಸ್ವಾಗತಿಸಿ ಪರಿಚಯಸಿದರು. ಜೆ. ಎನ್. ಚನ್ನಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಎಸ್. ಸಿ. ಹಲಕರ್ಣಿ  ವಂದಿಸಿದರು.

     ವ್ಹಿ. ಎಮ್. ಕತ್ತಿ ಗ್ರುಪ್ ಆಪ್ ಇನ್ಸ್ಟಿಟ್ಯೂಟಿನ್ ಎಲ್ಲ ಅಂಗ ಸಂಸ್ಥೆಗಳ ಮುಖ್ಯಸ್ಥರಾದ ಎಸ್. ಡಿ. ಬೆಳ್ಳಿಕಟ್ಟಿ, ಎನ್. ಎಸ್. ಪತ್ತಾರ,  ವ್ಹಿ. ಎಸ್. ಹೂಗಾರ ಹಾಗೂ ವ್ಹಿ. ಡಿ. ತೋರೊ ಮತ್ತು ಎಲ್ಲ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿರಿದ್ದರು.