ಲೋಕದರ್ಶನ ವರದಿ
ನಾಳೆಯಿಂದ ಆರಂಭವಾಗುವ ಪರೀಕ್ಷೆಯನ್ನು ವಿದ್ಯಾರ್ಥಿಗಳು ಭಯ ಬಿಟ್ಟು ನಿಶ್ಚಿಂತೆಯಿಂದ ಪರೀಕ್ಷೆ ಎದುರಿಸಿ : ಶಿಕ್ಷಣಾಧಿಕಾರಿ ಮೋಹನ ದಂಡಿನ
ಯರಗಟ್ಟಿ 20: ನಾಳೆಯಿಂದ ಆರಂಭವಾಗುವ ಪರೀಕ್ಷೆಯನ್ನು ವಿದ್ಯಾರ್ಥಿಗಳು ಭಯ ಬಿಟ್ಟು ನಿಶ್ಚಿಂತೆಯಿಂದ ಪರೀಕ್ಷೆ ಎದುರಿಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ಹೇಳಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಗಡಿಬಿಡಿ, ಮಾನಸಿಕ ಒತ್ತಡ, ಉದ್ವೇಗ ಬಿಟ್ಟು ಸಂಯಮದಿಂದ ಪರೀಕ್ಷೆ ಎದುರಿಸಿ, ಪರೀಕ್ಷೆ ದಿನ ಹತ್ತಿರ ಬರುತ್ತಿದ್ದಂತೆ ಸಾಮಾನ್ಯವಾಗಿ ವಿದ್ಯಾರ್ಥಿಗಳು ಆತಂಕಕ್ಕೊಳಗಾಗುತ್ತಾರೆ. ಕೆಲವರು ಮಾನಸಿಕವಾಗಿ ಚಿಂತಾಕ್ರಾಂತರಾಗಿ ಓದಲು ಶುರು ಮಾಡುತ್ತಾರೆ. ಕೆಲವರು ನಿದ್ದೆಬಿಟ್ಟು ಓದುವುದರಿಂದ ಪರೀಕ್ಷೆ ದಿನ ಬರೆಯಲು ಸಂಭವವಿರುತ್ತದೆ. ಹಾಗಾಗಿ, ಮೊದಲು ಭಯ ಬಿಟ್ಟು ನಿಶ್ಚಿಂತೆಯಿಂದ ಪರೀಕ್ಷೆ ಬರೆಯಲು ಮುಂದಾಗಬೇಕು ಶಿಕ್ಷಣಾಧಿಕಾರಿ ಸಮೀಪದ ಸತ್ತಿಗೇರಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದರು. ಈ ವೇಳೆ ಉಪ ಪ್ರಂಶುಪಾಲರಾದ ಶ್ರೀಮತಿ ವಿದ್ಯಾ ಕಲ್ಯಾಣಿ, ಬಿ. ಪಿ. ಅಂಗಡಿ, ಎ. ಎಂ. ಸಿಂಗಾಡಿ, ಎಸ್. ಪಿ. ಮಣ್ಣೂರಮಠ, ಎಸ್. ಸಿ. ಹೊಸಟ್ಟಿ, ವಾಯ್ ಆರ್ ಕೋಟಗಿ, ಎನ್. ಬಿ. ದೊಡ್ಡಗೌಡರ, ಜಿ. ಬಿ. ಪಾಟೀಲ, ಆಯ್. ಎಫ್. ಬಾಗವಾನ, ಎಸ್. ಎಫ್. ಈರಣ್ಣನವರ, ಆರ್. ಎಸ್. ಕಾಶನ್ನವರ ಸೇರಿದಂತೆ ಅನೇಕರು ಇದ್ದರು.