ಬೈಲಹೊಂಗಲ 19: ವಿದ್ಯಾಥರ್ಿಗಳು ವೃತ್ತಿಯಲ್ಲಿ ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಬೈಲಹೊಂಗಲದ ಡಾ.ರಾಮಣ್ಣವರ ಪ್ರತಿಷ್ಠಾನದ ಕಾರ್ಯದಶರ್ಿ ಡಾ.ಮಹಾಂತೇಶ ರಾಮಣ್ಣವರ ಹೇಳಿದರು.
ಅವರು ಸಮೀಪದ ಸವದತ್ತಿ ತಾಲೂಕಿನ ಚಿಕ್ಕೊಪ್ಪ ಕೆ.ಎಂ ಗ್ರಾಮದಲ್ಲಿ ನಡೆದ ಗುರು ಬಸವ ವಿಚಾರವಾಹಿನಿಯ ಬಸವಾನುಭವಗೋಷ್ಠಿ ಹಾಗೂ ಕುಂಬಾರ ಗುಂಡಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ಬೆಳಗಾವಿ ಜಿಲ್ಲಾ ಶಿಕ್ಷಕರ ಸಂಘದ ಸಹಕಾರ್ಯದಶರ್ಿ ಮಲ್ಲಿಕಾಜರ್ುನ ಕೋಳಿ ಮಾತನಾಡಿ ಕುಂಬಾರ ಗುಂಡಯ್ಯರ ಕಾಯಕ, ಲಿಂಗ ನಿಷ್ಠೆ, ಭಕ್ತಿದಾಸೋಹ ಹಾಗೂ ಹಡಪದ ಅಪ್ಪನವರ ಶರಣ ತತ್ವಗಳು ಹಾಗೂ ಆದರ್ಶಗಳು ಸಮಾಜಕ್ಕೆ ಮಾದರಿಯಾಗಿವೆ ಜತೆಗೆ ಜಾತಿಗಳು ಕಾಯಕದಿಂದ ಬಂದವುಗಳು ಶರಣರು ಎಲ್ಲರೂ ಸಮಾನರು ಎಂದು ಸಮಾಜಕ್ಕೆ ಸಾರಿದರು ಎಂದರು.
ಸನ್:2018 ನೇ ಸಾಲೀನ ಪ್ರಥಮ ವರ್ಷದ ಎಂ.ಬಿ.ಬಿ.ಎಸ್ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿವಿಧ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಪ್ರವೇಶ ಪಡೆದ ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಡಾ.ರಾಮಣ್ಣವರ ಚಾರಿಸ್ಟೇಬಲ ಟ್ರಸ್ಟ ಹಾಗೂ ಬಸವ ಸಮಿತಿ ಹಾಗೂ ಬಸವ ಫೌಂಡೇಶನ್ ವಿಶ್ವಗುರು ಬಸವಾನುಭವ ಮಂಟಪ, ಗುರುಬಸವ ವಿಚಾರವಾಹಿನಿ ಇವರ ಸಂಯುಕ್ತ ಆಶ್ರಯದಲ್ಲಿ ಸನ್ಮಾನಿಸಿ, ವೈದ್ಯಕೀಯ ಪುಸ್ತಕಗಳನ್ನು ವಿದ್ಯಾಥರ್ಿಗಳಿಗೆ ಉಚಿತವಾಗಿ ವಿತರಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಮೋಹನ ಬಸವನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಷಟಸ್ಥಲ ಧ್ವಜಾರೋಹಣವನ್ನು ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಕೊಪ್ಪದ ದಂಪತಿಗಳು ನೆರವೇರಿಸಿದರು.
ಬಸವಾನುಭವ ಮಂಟಪದ ಅಧ್ಯಕ್ಷ ಮಹಾದೇವಪ್ಪ ನರಸನ್ನವರ, ಶಿಕ್ಷಣ ಪ್ರೇಮಿ ಸೋಮಯ್ಯ ಕುಲಕಣರ್ಿ, ರಾಷ್ಟ್ರೀಯ ಬಸವದಳದ ಈರಪ್ಪ ಸನಮನಿ, ಸಂಚಾರಿ ಗುರುಬಸವ ಬಳಗದ ಬಸವರಾಜ ಕೊರಿಕೊಪ್ಪ, ಬಸವ ಫೌಂಡೇಷನ್ ಅಧ್ಯಕ್ಷ ಮಹೇಶ ಕೋಟಗಿ, ಮಹಾಂತೇಶ ಶಿಲವಂತರ, ಶಂಕರ ಚೀಲದ, ಡಾ.ಮಹಾಂತೇಶ ಗದಗ, ಡಾ.ಶರಣಕುಮಾರ ಅಂಗಡಿ, ಪ್ರಕಾಶ ಬಡ್ಲಿ, ನಿವೃತ್ತ ಇಒ ವಿ.ಜಿ.ಹಿತ್ತಲಮನಿ, ರೋಟರಿ ಸಂಸ್ಥೆಯ ಅಧ್ಯಕ್ಷ ಶ್ರೀಶೈಲ ಶರಣಪ್ಪನವರ, ಮಂಜುಳಾ ದೊಡಗೌಡರ ಇನ್ನಿತರರು ಉಪಸ್ಥಿತರಿದ್ದರು.
ನಿಂಗಪ್ಪ ಬೂದಿಹಾಳ ಸ್ವಾಗತಿಸಿದರು. ಬಸವರಾಜ ಕೋರಿಕೊಪ್ಪ ನಿರೂಪಿಸಿದರು. ಸಂಘಟಕ ಚನ್ನಪ್ಪ ನರಸನ್ನವರ ವಂದಿಸಿದರು.