ವಿದ್ಯಾರ್ಥಿಗಳು ವ್ಯವಹಾರ ಕೌಶಲ್ಯ ಬೆಳೆಸಿಕೊಳ್ಳಬೇಕು: ದಾನವಾಡೆ

Students should develop business skills: Danavade

ಬೆಳಗಾವಿ 13: “ ವಿದ್ಯಾರ್ಥಿಗಳು ಕೇವಲ ಶಾಲೆ ಕಲಿತರೆ ಸಾಲದು ; ವ್ಯವಹಾರ ಕೌಶಲ್ಯ ಜ್ಞಾನ-ಬೆಳೆಸಿಕೊಳ್ಳಬೇಕು. ಪರಿಶ್ರಮ, ನಿಷ್ಠೆ, ಛಲದಿಂದ ದುಡಿದು ಸಾಧನೆ ಮಾಡಬೇಕು. ತುಂಬಾ ಕಡಿಮೆ ಶಿಕ್ಷಣ ಪಡೆದ ಹಾಗೂ ಬಡವನಾದ ನಾನು ಇಂದು ಜಗತ್ತಿನ ಬೇರೆ ಬೇರೆ ದೇಶಗಳಿಗೆ ಯಂತ್ರದ ಬಿಡಿ ಭಾಗಗಳನ್ನು ರಫ್ತು ಮಾಡುತ್ತಿದ್ದು, ದೇಶದ ಬೆಳವಣಿಗೆಗೆ ಪೂರಕವಾಗಿ ಸೇವೆ ಸಲ್ಲಿಸುತ್ತಿದ್ದೇನೆ.” ಎಂದು ಜೈನ ಎಂಜಿನಿಯರಿಂಗ್ ಕಂಪನಿಯ ಮಾಲಿಕ ಅಶೋಕ ದಾನವಾಡೆ ನುಡಿದರು. ಅವರು ಇಲ್ಲಿಯ ಎಸ್‌.ಪಿ.ಎಚ್‌.ಭರತೇಶ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಆಯೋಜಿಸಿದ ಆಹಾರ ಮೇಳ, ಕಲಾಪ್ರದರ್ಶನ ಹಾಗೂ ಪಠ್ಯೇತರ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 

ಅಪ್ಪಾಸಾಹೇಬ ಚೌಗುಲೆ ಅತಿಥಿಗಳಾಗಿ ಆಗಮಿಸಿದ್ದರು. ಎ.ಎ.ಸನದಿ ಸ್ವಾಗತಿಸಿದರು. ಮುಖ್ಯಾಧ್ಯಾಪಕ ಭರತೇಶ ಮಾರಣಬಸರಿ ಅಧ್ಯಕ್ಷತೆ ವಹಿಸಿದ್ದರು. 9 ನೇ ತರಗತಿ ವಿದ್ಯಾರ್ಥಿಗಳಾದ ಕುಮಾರಿ ಅದಿತಿ ಕಾಕತಿಕರ ಮತ್ತು ಶ್ರೇಯಾ ಯಮ್ಮಿ ನಿರೂಪಿಸಿದರೆ, ಕುಮಾರ ಅಯಾನ ಮುಲ್ಲಾ ವಂದಿಸಿದರು.