ವಿದ್ಯಾರ್ಥಿಗಳು ಸಂಶೋಧನಾ ಕ್ಷೇತ್ರವನ್ನು ಬೆಳೆಸಬೇಕು: ವಡಗೇರಿ

ಹಾವೇರಿ:  ಸೊರಗುತ್ತಿರುವ ಸಂಶೋಧನಾ ಕ್ಷೇತ್ರದ ಕಡೆ ವಿದ್ಯಾಥರ್ಿಗಳು ಆಕಷರ್ಿತರಾಗಿ ಸಂಶೋಧನಾ ಕ್ಷೇತ್ರವನ್ನು ಬೆಳಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕ  ಅಂದಾನೆಪ್ಪ ವಡಗೇರಿ ಅವರು ಹೇಳಿದರು. 

ನಗರದ ಮುನ್ಸಿಪಲ್ ಹೈಸ್ಕೂಲ್ನಲ್ಲಿ ಶನಿವಾರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕನರ್ಾಟಕ ವಿಜ್ಞಾನ ಪ್ರೋತ್ಸಾಹಕ ಸೊಸೈಟಿ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಕನರ್ಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಘಟಕ ಆಯೋಜಿಸಿದ ಹಾವೇರಿ ಜಿಲ್ಲಾ ಯುವ ವಿಜ್ಞಾನಿಗಳ ಆಯ್ಕೆಗೆ ಹಮ್ಮಿಕೊಂಡ್ಡಿದ್ದ ವಿವಿಧ ಸ್ಪಧರ್ೆಗಳಿಗೆ ಚಾಲನೆ ನೀಡಿ ಮಾತನಾಡಿದರು.

ಟಿ.ವಿ.ಪ್ರಿಜ್, ಫೋನ್, ಮಿಕ್ಸಿ ಹೀಗೆ ಅಡುಗೆಮನೆಯಿಂದ ಅಂತರಿಕ್ಷದವರೆಗೆ ವಿಜ್ಞಾನದ ಬಳಕೆ ವ್ಯಾಪಕವಾಗಿ ಹರಡಿದೆ. ವಿಜ್ಞಾನದ ಅನ್ವಯ ಇಲ್ಲದೆ ಹೋದರೆ ಬದುಕೇ ದುಸ್ಥರ ಅನ್ನುವಂತಿದೆ. ನಿತ್ಯ ಬದುಕಿನ ಅವಿಭಾಜ್ಯ ಅಂಗ ವಿಜ್ಞಾನ. ಈ ಹಿನ್ನೆಲೆಯಲ್ಲಿ ವಿದ್ಯಾಥರ್ಿ ಜೀವನದಿಂದಲೇ ಸಂಶೋಧನೆಯತ್ತ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ವಿದ್ಯಾಥರ್ಿಗಳಿಗೆ ಕರೆ ನೀಡಿದರು. 

ಮುಖ್ಯ ಅತಿಥಿ ವಿಷಯ ಪರೀವಿಕ್ಷಕ ಬಿ.ಎಸ್.ಪಾಟೀಲ ಮಾತನಾಡಿ, ವಿಜ್ಞಾನದ ಕೌತುಕಗಳ ಹಿಂದಿನ ರಹಸ್ಯ ಬೇಧಿಸುವ ಕೌತುಕವನ್ನು ಮಕ್ಕಳು ರೂಢಿಸಿಕೊಳ್ಳಬೇಕು ಎಂದು ಹೇಳಿದರು. 

ಕನರ್ಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯಕಾರಿ ಮಂಡಳಿ ಸದಸ್ಯ ಆರ್.ಎಸ್. ಪಾಟೀಲ, ವಿಷಯ ಪರಿವೀಕ್ಷಕ ಮಂಜಪ್ಪ, ಬಸಮ್ಮನವರ, ಆನಂದ ಹಾಗೂ ನಾಗರಾಜ ಉಪಸ್ಥಿತರಿದ್ದರು. 

ವಿಜೇತರ ವಿವರ: ಸ್ಪಧರ್ೆಗಳಲ್ಲಿ 17  ಫ್ರೌಢಶಾಲೆಯ ತಂಡಗಳು ಭಾಗವಹಿಸಿದ್ದವು. ಹಾವನೂರಿನ ಸಕರ್ಾರಿ ಫ್ರೌಢಶಾಲೆಯ ಮೇಘನಾ ಜೋಗ್ ಫ್ರಥಮ ಹಾಗೂ ಜ್ಯೋತಿ ಮರೋಳ ದ್ವಿತೀಯ, ಶಿಗ್ಗಾಂವಿಯ ಎಸ್.ಬಿ.ಬಿ.ಮಾಮಲೇದೇಸಾಯಿ ಫ್ರೌಢಶಾಲೆಯ ಸೌಜನ್ಯ ತೃತೀಯ ಸ್ಥಾನ ಪಡೆದಿದ್ದಾರೆ. ಮೂವರು ಯುವ ವಿಜ್ಞಾನಿಗಳು ರಾಜ್ಯ ಮಟ್ಟದ ಸ್ಫಧರ್ೆಯಲ್ಲಿ ಭಾಗವಹಿಸಲಿದ್ದಾರೆ.