ಮಾಂಜರಿ 17: ವಿದ್ಯಾರ್ಥಿಗಳು ಓದುವ, ಬರೆಯುವ, ಜ್ಞಾನ ಬೆಳೆಸಿಕೊಳ್ಳುವ ಜೊತೆಗೆ ಬದುಕಿಗೆ ಅಗತ್ಯವಾದ ಮಾನವೀಯ ಮೌಲ್ಯ ಮತ್ತು ಗುಣಗಳನ್ನು ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಹಾಗೂ ತಂದೆ ತಾಯಿ ರುಣ ಮುಟ್ಟಿಸಿ ಎಂದು ಎಂದು ಬೀರೇಶ್ವರ ಕೋ ಅಪ್ ಕ್ರೆಡಿಟ್ ಸೊಸೈಟಿ ಚಿಕ್ಕೋಡಿ ಶಾಖೆಯ ಶಾಕಾಧಿಕಾರಿಗಳಾದ ಏಕನಾಥ್ ಮೊರೆ ಹೇಳಿದರು ಹೇಳಿದರು.
ಅವರು ಇಂದು ಚಿಕ್ಕೋಡಿ ತಾಲೂಕಿನ ಚಂದುರು ಗ್ರಾಮದ ರಾಮಕೃಷ್ಣ ಶಿಕ್ಷಣ ಸಂಸ್ಥೆಯ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪ್ರಮಾಣ ಪತ್ರ ವಿತರಣೆ ಬಹುಮಾನ ವಿತರಣೆ ಹಾಗೂ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು ಈ ಸಮಾರಂಭದ ಅಧ್ಯಕ್ಷತೆಯನ್ನು ಕೃಷ್ಣ ಮಗದುಮ್ ವಹಿಸಿದ್ದರು ಅತಿಥಿಯಾಗಿ ಅರುಣದೇವಿ ಮಗುದುನ್ ಶಂಕರ್ ಕನ್ನಡ ಪಾಪು ಬೆಳ್ಳೂರು ಹಾಜರಿದ್ದರು
ವಿದ್ಯಾರ್ಥಿಗಳ ಜೀವನ ಬಂಗಾರ ಜೀವನ, ವಿದ್ಯಾರ್ಥಿಗಳು ಮನಸ್ಸು ಕೊಟ್ಟು, ಶ್ರಮ ಪಟ್ಟು ವಿದ್ಯಾ ಅಭ್ಯಾಸ ಮಾಡಿ ತಂದೆ ತಾಯಿಗಳ ಮುಟ್ಟಿಸಿ ಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ವಹಿಸಿ ಮಾತನಾಡಿದ ಕನಕನಾಳದ ಗಿರಿಜಾನಂದ ಮಹಾರಾಜರು ಜೀವನದ ಅತ್ಯಮೂಲ್ಯ ಘಟ್ಟ ಎಂದರೆ ಅದು ವಿದ್ಯಾರ್ಥಿ ಜೀವನ. ವಿದ್ಯಾರ್ಥಿಯ ಜೀವನ ಪ್ರತಿಯೊಬ್ಬ ವ್ಯಕ್ತಿಯ ಅಭಿವೃದ್ಧಿಯ ಮೂಲಾಧಾರ ಎಂದು ಏಕನಾಥ್ ಮೊರೆ ಹೇಳಿದರು.
ಈ ಕಾರ್ಯಕ್ರಮಕ್ಕೆ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಪಾಲಕರು ಹಾಗೂ ಗಣ್ಯ ನಾಗರಿಕರು ಹಾಜರಿದ್ದರು.