ಹುನಗುಂದ: ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕವು ವಿದ್ಯಾರ್ಥಿಗಳ ಆನ್ಲೈನ್ ಪರೀಕ್ಷೆಗಳನ್ನು ರದ್ದು ಮಾಡುವಂತೆ ಆಗ್ರಹಿಸಿ ತಾಲೂಕ ಆಡಳಿತದ ಮುಂದೆ ಪ್ರತಿಭಟಿಸಿ ಘೋಷಣೆ ಕೂಗುತ್ತ ತಹಶೀಲ್ದಾರ ಬಸವರಾಜ ನಾಗರಾಳ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾ ನಿರತ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ನ ಜಿಲ್ಲಾ ಸಹಸಂಚಾಲಕ ಅನೀಲ ಗುರುಬಸಣ್ಣವರ ಮಾತನಾಡಿ ಐಟಿಐ ವಿದ್ಯಾರ್ಥಿಗಳಿಗೆ ಆನ್ಲೈನ್ ಪರೀಕ್ಷೆಗಳನ್ನು ಮಾಡಿದರೆ ಗ್ರಾಮೀಣದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಬಗ್ಗೆ ಮಾಹಿತಿ ಇರುವದಿಲ್ಲ ಮತ್ತು ಪರೀಕ್ಷೆಯಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ತಮ್ಮ ಸ್ವಉದ್ಯೋಗ ಮಾಡಲು ಬಯಸಿ ಐಟಿಐ ಪ್ರವೇಶವನ್ನು ಮಾಡಿರುತ್ತಾರೆ. ಜೊತೆಗೆ ಇನ್ನೂ ಅನೇಕವಿದ್ಯಾರ್ಥಿಗಳು ಈ ಕೋರ್ಸ ಪಾಸು ಮಾಡಿಕೊಂಡು ನಂತರ ಕಾಮರ್ಿಕನಂತೆ ಕಾಖರ್ಾನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಆದ್ದರಿಂದ ಈ ಪರೀಕ್ಷೆ ಆನ್ಲೈನ್ ಬೇಡವೆಂದು ಒತ್ತಾಯಿಸಿದರು.
ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ತಾಲೂಕು ಸಹ ಸಂಚಾಲಕ ವಿನಯ ಮಲರಖಾನ್ ಮಾತನಾಡಿ ಐಟಿಐ ವಿದ್ಯಾಥರ್ಿಗಳಿಗೆ ಒಂದು ಸಂಪೂರ್ಣವಾದ ಕೌಶಲ್ಯ ತರಬೇತಿ ಆಗಿರುತ್ತದೆ. ರೇಖಾಚಿತ್ರ ಹಾಗೂ ಕೈಬರಹ ಪರೀಕ್ಷೆಯನ್ನು ಮಾಡಿರುವದರಿಂದ ಪರಿಣಾಮಕಾರಿಯಾಗಿ ವಿದ್ಯಾಥರ್ಿಗಳ ಗುಣಮಟ್ಟವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಮತ್ತು ಐಟಿಐ ಪರೀಕ್ಷೆಯನ್ನು ಮೊಲನೆ ವರ್ಷ ಆಯಾ ಸಂಸ್ಥೆಗಳು ನಡೆಸಬೇಕು ನಂತರ ಬೋರ್ಡನವರು ನಡೆಸಬೇಕು. ಹಾಗೂ ಎಲ್ಲಾ ಸಕರ್ಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಕಾಲೇಜಿನಲ್ಲಿ ಏಕಕಾಲಕ್ಕೆ ಆನ್ಲೈನ್ ನಲ್ಲಿ ಪರೀಕ್ಷೆ ಬರೆಯಲು ಕಂಪ್ಯೂಟರ್ ಸೌಲಭ್ಯ ಇರುವದಿಲ್ಲ. ಆದ್ದರಿಂದ ಆನ್ಲೈನ್ ಪರೀಕ್ಷೆ ತಕ್ಷಣದಿಂದ ರದ್ದು ಮಾಡುವಂತೆ ಅವರು ಆಗ್ರಹಿಸಿದರು.
ಅಖಿಲ ಭಾರತ ವಿದ್ಯಾಥರ್ಿ ಪರಿಷತ್ ತಾಲೂಕು ಘಟಕ ಮತ್ತು ಐಟಿಐಯ ಪುನಿತ್ ಮನ್ನಾಪೂರ, ಅಭಿಷೇಕ ಕಂಠಿ, ನಿರಂಜನ ಫ್ರಭು, ರವಿ ಮ್ಯಾಗೇರಿ, ಸಚಿನ್ಗದಗಿನ, ಮಹಾಂತೇಶ ಮುರಾಳ, ಬಸು ಗೋನಾಳ, ಸುರೇಶ ಮಸ್ಕಿ, ಅನಿಲ ಮಸ್ಕಿ, ಪರಾಜ್ ಲೈನ್, ಶಿವುಕುಮಾರ ಪೂಜಾರಿ, ಪ್ರಮೋದಗೌಡರ, ಇನ್ನೂ ಅನೇಕ ವಿದ್ಯಾಥರ್ಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.