ವಿದ್ಯಾರ್ಥಿಗಳು ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು

ಲೋಕದರ್ಶನ ವರದಿ

ರಾಯಬಾಗ 09: ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದನ್ನು ಕಲಿಸುವುದೇ ಶಿಕ್ಷಣದ ಮೂಲ ಉದ್ದೇಶವಾಗಿರಬೇಕು ಎಂದು ಕುಡಚಿ ಶಾಸಕ ಹಾಗೂ ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ ಹೇಳಿದರು. 

ರವಿವಾರ ಪಟ್ಟಣದ ಬಿ.ಎ.ಚೌಗುಲೆ ಶಿಕ್ಷಣ ಸಂಸ್ಥೆಯಲ್ಲಿ ಸತೀಶ ಚೌಗುಲೆ ಸ್ವತಂತ್ರ ಪದವಿ ಪೂರ್ವ ಕಾಲೇಜ ರಾಯಬಾಗ ಹಾಗೂ ಜಿ.ಬಿ.ಚೌಗುಲೆ ಸ್ವತಂತ್ರ ಪದವಿ ಪೂರ್ವ ಕಾಲೇಜ ದಿಗ್ಗೇವಾಡಿ ಇವುಗಳ ವಾಷರ್ಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮನುಷ್ಯ ತನ್ನನ್ನು ತಾನು ಪ್ರೀತಿಸಿ, ಗೌರವಿಸಿಕೊಳ್ಳುದರಿಂದ ಜೀವನದಲ್ಲಿ ಯಶಸ್ಸು ಹೊಂದಲು ಸಾಧ್ಯ. ವಿದ್ಯಾರ್ಥಿಗಳು ಧ್ಯಾನ ಮಾಡುವುದರಿಂದ ಏಕಾಗ್ರತೆ ಹೊಂದಿ, ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಲು ಸಾಧ್ಯವಾಗುತ್ತದೆ ಎಂದರು. 

ಚಿಕ್ಕೋಡಿ ಸಿಎಸ್ಎಸ್ಪಿಯು ಕಾಲೇಜ ಉಪನ್ಯಾಸಕ ಎಸ್.ಐ. ಅಫರಾಜ ವಿದ್ಯಾರ್ಥಿಗಳ ಕುರಿತು ಮಾತನಾಡಿದರು. 

ಸಂಸ್ಥೆ ಅಧ್ಯಕ್ಷ, ನ್ಯಾಯವಾದಿ ಎಲ್.ಬಿ.ಚೌಗುಲೆ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆ ನಿರ್ಧೆಶಕ ವಿನಯ ಚೌಗುಲೆ, ಪ್ರಾಚಾರ್ಯಎಸ್.ಬಿ.ಜಮಾದಾರ, ಎಸ್.ಎಸ್.ಚೌಗುಲೆ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

ಉಪನ್ಯಾಸಕ ಆರ್.ವಾಯ್.ಯಮಗಾರ ವಾಷರ್ಿಕ ವರದಿ ವಾಚಿಸಿದರು, ಪ್ರಾಚಾರ್ಯ ಡಿ.ಜಿ.ಕಠಾರೆ ಸ್ವಾಗತಿಸಿದರು, ಪಿ.ಡಿ.ಲಂಗೋಟೆ ನಿರೂಪಿಸಿ, ವಂದಿಸಿದರು. 

ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾಥರ್ಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.