ಲೋಕದರ್ಶನ ವರದಿ
ಕಾಗವಾಡ, 3 : ವಿದ್ಯಾಥರ್ಿಗಳಿಗೆ ಪಾಠ ಜತೆಗೆ ಆಟ ಅವಶ್ಯಕತೆಯಿದೆ. ಸದೃಢ ಆರೋಗ್ಯ ನಿಮರ್ಿಸಲು ದಿನನಿತ್ಯ ಆಟ, ಯೋಗ ಮಾಡಿ ತಮ್ಮ ಸದೃಢ ಶರೀರದೊಂದಿಗೆ ಬುದ್ಧಿ ಸಾಮಥ್ರ್ಯ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಬೇಕು. ಶಿಕ್ಷಕರು ಇದಕ್ಕೆ ಹೆಚ್ಚಿನ ಆಸಕ್ತಿ ವಹಿಸಬೇಕೆಂದು ಸಿದ್ಧೇಶ್ವರ ಶಿಕ್ಷಣ ಸಂಸ್ಥೆಯ ನಿದರ್ೇಶಕರಾದ ಶಿವಾನಂದ ಪಾಟೀಲ ಹೇಳಿದರು.
ಗುರುವಾರ ರಂದು ಶಿರಗುಪ್ಪಿಯ ಶ್ರೀ ಸಿದ್ಧೇಶ್ವರ ಶಿಕ್ಷಣ ಸಂಸ್ಥೆ ಮತ್ತು ಆಚಾರ್ಯ ವಿದ್ಯಾನಂದ ಶಿಕ್ಷಣ ಸಂಸ್ಥೆಯ ಸುಮಾರು 1400 ವಿದ್ಯಾಥರ್ಿಗಳು ಸನ್ 2018-19 ವಾಷರ್ಿಕ ಕ್ರೀಡಾ ಸ್ಪಧರ್ೆ ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿ ಶಿವಾನಂದ ಪಾಟೀಲ ವಿದ್ಯಾಥರ್ಿಗಳಿಗೆ ಮಾರ್ಗದರ್ಶನ ನೀಡಿದರು.
ಸಿದ್ಧೇಶ್ವರ ಶಿಕ್ಷಣ ಸಂಸ್ಥೆಯ ಕ್ರೀಡಾಂಗಣದಲ್ಲಿ ಬೆಳಿಗ್ಗೆ ವಿದ್ಯಾಥರ್ಿಗಳಿಂದ ಸ್ಪಧರ್ೆಯ ನಿಮಿತ್ಯ ಕ್ರೀಡಾ ಜ್ಯೋತಿ ಮೆರವಣಿಗೆ ನೆರವೇರಿತು. ಶಿಕ್ಷಣ ಸಂಸ್ಥೆಯ ಆಧ್ಯಕ್ಷರಾದ ಸಾತಗೌಡಾ ಬಿ. ಪಾಟೀಲ ಮತ್ತು ಸಮಾರಂಭದ ಅತಿಥಿಗಳಾದ ಜಿನಪ್ಪನ್ನಾ ಚೌಗುಲೆ ಲಾಲಬಹಾದ್ಧೂರ ಕ್ರೇಡಿಟ್ ಸಂಸ್ಥೆಯ ಆಧ್ಯಕ್ಷಬೊಮನ್ನಾ ಚೌಗುಲೆ ಇವರು ಕ್ರೀಡಾ ಜ್ಯೋತಿ ಸ್ವೀಕರಿಸಿದರು.
ಶಿಕ್ಷಣ ಸಂಸ್ಥೆಯ ಆಧ್ಯಕ್ಷ ಸಾತಗೌಡಾ ಪಾಟೀಲ ಇವರು ಮಾತನಾಡಿ ವಿದ್ಯಾಥರ್ಿಗಳು ತಮ್ಮನ್ನು ತಾವು ಸಮಾಜದಲ್ಲಿ ಗುರುತಿಸಿಕೊಳ್ಳಬೇಕಾದರೆ, ಸಾಧನೆ ಮಾಡಬೇಕಾದರೆ ತಮ್ಮಲ್ಲಿಯ ಕಲೆ ಹೊರಹಾಕಲೆಬೇಕು ಎಂದು ಹೇಳಿ, ಈಗಾಗಲೇ ಸಾಧನೆ ಮಾಡಿರುವ ಅನೇಕರ ಬಗ್ಗೆ ವಿದ್ಯಾಥರ್ಿಗಳಿಗೆ ಮಾಹಿತಿ ನೀಡಿದರು.
ಸಿದ್ಧೇಶ್ವರ ಶಿಕ್ಷಣ ಸಂಸ್ಥೆಯ ವಿದ್ಯಾಥರ್ಿನಿ ವಿಶಾಕಾ ಚವ್ಹಾಣ ಇವಳು ಕುಸ್ತಿ ಸ್ಪಧರ್ೆಯಲ್ಲಿ ರಾಜ್ಯ ಮಟ್ಟಕ್ಕೆ ಸಾಧನೆ ಮಾಡಿದ್ದಾಳೆ. ಇದೇ ರೀತಿಸವೀತಾ ಪೂಜಾರಿ 3 ಸಾವಿರ ಮೀಟರ್ ಓಟದಲ್ಲಿ ಜಿಲ್ಲೆಯಲ್ಲಿ ಮತ್ತು ಅತ್ಯುತ್ತಮ ಭಾಷಣ ಸ್ಪಧರ್ೆಯಲ್ಲಿ ತಮ್ಮ ಛಾಪನ್ನು ಮೂಡಿಸಿದ ಲಕ್ಷ್ಮೀ ಪಾಟೀಲ ಈ ವಿದ್ಯಾಥರ್ಿನಿಯರನ್ನು ಆಧ್ಯಕ್ಷ ಸಾತಗೌಡಾ ಪಾಟೀಲ ಸನ್ಮಾನಿಸಿದರು.
ಸಮಾರಂಭದಲ್ಲಿ ಸಂಸ್ಥೆಯ ನಿದರ್ೇಶಕರಾದ ಐ.ಎ.ಪಾಟೀಲ, ಎಂ.ಕೆ.ಪಾಟೀಲ, ಈಕಬಾಲ ಕನವಾಡೆ, ಸುಭಾಷ ಪಾಟೀಲ, ರಾಜು ಕಾಟಕರ, ಮುಖ್ಯಾಧ್ಯಾಪಕರಾದ ಸದಾನಂದ ಬೂವಾ, ವಿದ್ಯಾನಂದ ಸಂಸ್ಥೆಯ ಮುಖ್ಯಾಧ್ಯಾಪಕ ಕೆ.ಪಿ.ಪವಾರ, ಕ್ರೀಡಾ ಶಿಕ್ಷಕ ಸಿ.ಎಂ.ಸಂತೋಷ, ಎ.ಎಸ್.ಪಾಟೀಲ, ಬಿ.ಟಿ.ಕರ್ಯಾಪಗೊಳ್ಳ, ಎ.ಬಿ.ಶಹಾಪುರೆ ಸೇರಿದಂತೆ ಅನೇಕರು ಇದ್ದರು. 3 ದಿನ ಸ್ಪಧರ್ೆಗಳು ಜರುಗಲಿವೆ ಎಂದು ತಿಳಿಸಿದರು.